ಚರಂಡಿ ನೀರು ಶುದ್ಧಿಕರಣ ಘಟಕದಲ್ಲಿ ಬಾಲಕರ ಬಿದ್ದು ಸಾವನಪ್ಪಿರುವ ಪ್ರಕರಣ: ನಗರದ ಡಿಸಿ ಕಚೇರಿ ಎದುರು ಪ್ರತಿಭಟನೆ

ವಿಜಯಪುರ ಚರಂಡಿ ನೀರು ಶುದ್ಧಿಕರಣ ಘಟಕದಲ್ಲಿ ಬಾಲಕರ ಬಿದ್ದು ಸಾವನಪ್ಪಿರುವ ಪ್ರಕರಣ.
ಮೃತ ಬಾಲಕರ ಕುಟುಂಬಕ್ಕೆ ಪರಿಹಾರ ನೀಡಲು ವಿಳಂಬ ಹಿನ್ನೆಲೆ.
ನಗರದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಗೌಳಿ ಸಮಾಜದ ಮುಖಂಡರು.
ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಗೆ ಮನವಿ ಸಲ್ಲಿಸಿದ ಗೌಳಿ ಸಮಾಜದ ಮುಖಂಡರು.
ಮಹಾನಗರ ಪಾಲಿಕೆ ಆಯುಕ್ತರು ಪರಿಹಾರ ಘೋಷಣೆಗೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪ.
ಕೇಳಿದರೆ ನೀತಿ ಸಂಹಿತೆ ಜಾರಿ ಇದೆ ಎಂದು ಸಬೂಬು ಹೇಳಿ ಕಳುಹಿಸುತ್ತಿರುವ ಆಯುಕ್ತರು.
ಬೇರೆ ಬೇರೆ ಜಿಲ್ಲೆಯಲ್ಲಿ ನಡೆದ ಅವಘಡಗಳಿಗೆ ಶೀಘ್ರದಲ್ಲೇ ಪರಿಹಾರ ಘೋಷಣೆ ಮಾಡ್ತಾರೆ.
ನಮ್ಮ ಮಕ್ಕಳು ಮರಣ ಹೊಂದಿ ಇಂದಿಗೆ 11 ದಿನ ಕಳೆದರು ಪರಿಹಾರ ಘೋಷಣೆ ಮಾಡ್ತಿಲ್ಲ.
ಯಾಕೆ ನಮ್ಮದಲ್ಲದ ತಪ್ಪಿಗೆ ನಮ್ಮ ಮಕ್ಕಳನ್ನು ಕಳೆದುಕೊಂಡಿದ್ದೇವೆ.
ಈಗ ಪರಿಹಾರ ವಿಳಂಬ ಯಾಕೆ ಎಂದು ಗವಳಿ ಸಮಾಜದ ಮುಖಂಡರ ಪ್ರಶ್ನೆ.
ಎಫ್ ಐ ಆರ್ ದಾಖಲು ಮಾಡಿ ಹತ್ತು ದಿನ ಕಳೆದರು ಯಾವೊಬ್ಬ ಅಧಿಕಾರಿಯ ಮೇಲೂ ಕ್ರಮ ಕೈಗೊಂಡಿಲ್ಲ.
ಶೀಘ್ರ ಪರಿಹಾರ ಘೋಷಣೆ ಮಾಡಬೇಕು ಹಾಗೂ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು.
ಇಲ್ಲವಾದರೆ ಬೃಹತ್ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ ಸಮಾಜದ ಮುಖಂಡರು.
