
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬೆವನೂರ ಗ್ರಾಮದ ಅಮೋಘ ಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಉದ್ಭವಿಸಿದ ಈ ಘಟನೆ ಸಕಲರನ್ನು ನಡುಗಿಸಿದೆ. ಕಾಗವಾಡ ಶಾಸಕ ರಾಜು ಕಾಗೆ ಅವರ ಸಮ್ಮುಖದಲ್ಲಿ, ಸಂತೋಷ ಚುರಮೂಲೆ ಎಂಬುವವರು ಮಾಧ್ಯಮದ ಪ್ರತಿನಿಧಿಗಳಿಗೆ ಬೆದರಿಕೆ ಹಾಕಿರುವ ವಿಡಿಯೋ ವೈರಲ್ ಆದಕಾರಣ ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗ್ರಹ ಸಚಿವ ಜಿ ಪರಮೇಶ್ವರ
ಅವರಿಗೆ ವಿವಿಧ ಪತ್ರಕರ್ತರ ಸಂಘಟನೆ ವತಿಯಿಂದ ಮನವಿ ಸಲ್ಲಿಸಲಾಯಿತು. ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ರಾಜು ಕಾಗೆ, ಮಾಧ್ಯಮದವರು ತಮ್ಮ ಬಗ್ಗೆ ಬೇರೆ ದೃಷ್ಟಿಯಿಂದ ವರದಿ ಮಾಡಿದರೆ, ಅವರ ಮನೆ ಹೊಕ್ಕು ಕೈ ಕಾಲು ಮುರಿಯುವುದಾಗಿ ಬೆದರಿಕೆ ಹಾಕಿರುವ ಸಂತೋಷ ಚುರಮೂಲೆ, ಮಾಧ್ಯಮದ ಪ್ರತಿನಿಧಿಗಳಿಗೆ ದಮ್ಮಿ ಹಾಕಿದ್ದಾರೆ.
ಆದ ಕಾರಣ ಪತ್ರಕರ್ತಗೆ ಭದ್ರತೆ ಹಾಗೂ ಸಂತೋಷ ಚುರಮೂಲೆ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಅಂತಹವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ
ಮನವಿ ಸಲ್ಲಿಸಿದರು
ಈ ಸಂದರ್ಭದಲ್ಲಿ ರಾಮದುರ್ಗ ತಾಲೂಕಿನ ಪತ್ರಕರ್ತರ ಸಂಘಟನೆಯ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಭಾಗವಹಿಸಿದ್ದರು


