ಬನ್ನೂರ ಗ್ರಾಮ ಪಂಚಾಯತಿ ವ್ಯಾಪ್ತಿಯಡಿ ವಿಶ್ವ ಪರಿಸರ ದಿನಾಚರಣೆ

WhatsApp Group Join Now

ರಾಮದುರ್ಗ ತಾಲೂಕಿನ ಬನ್ನೂರ ಗ್ರಾಮ ಪಂಚಾಯತಿ ವ್ಯಾಪ್ತಿಯಡಿ ಬರುವ ಅಮೃತ ಸರೋವರ ಕೆರೆ ದಂಡೆ ಮೇಲೆ ಸಸಿ ನೆಡೆವುದರ ಮೂಲಕ ತಾಲೂಕು ಪಂಚಾಯತ್ ಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪೂರ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಸಂಗನಗೌಡ ಹಂದ್ರಾಳ, ಸಹಾಯಕ ನಿರ್ದೇಶಕ ಎ.ಎಸ್. ಕುಂಬಾರ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಮಂಜುನಾಥ ದೇವರೆಡ್ಡಿ, ಪಂಚಾಯತಿ ಕಾರ್ಯದರ್ಶಿ ಮುಂಡೆನ್ನವರ, ಸಾಮಾಜಿಕ ವಲಯ ಅರಣ್ಯ ಅಧಿಕಾರಿ ದಾನಮ್ಮಾ ಮೇಡಂ ಹಾಗೂ ಆಇಸಿ ಸಂಯೋಜಕ ಕಲ್ಮೇಶ ಹಗೇದ, ಬಿ.ಎಪ್.ಟಿ ಪ್ರಾಕಾಶ ನಾಯ್ಕರ, ತಾಂತ್ರಿಕ ಸಹಾಯಕ ಕೃಷ್ಣಾ ಮೀಶಾಳೆ, ತಾಂತ್ರಿಕ ಸಹಾಯಕ ರವಿ ಪುಡಕಲಕಟ್ಟಿ, ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ ಹಾಗೂ ನರೇಗಾ ಕೂಲಿ ಕಾರ್ಮೀಕರು ಉಪಸ್ಥಿತಿರಿದ್ದರು.

About The Author