
ಕುಣಿಗಲ್: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಲಿಯ ಸದಸ್ಯರಾಗಿ ತುಮಕೂರು ಜಿಲ್ಲಾ ಐಎನ್‌ಟಿಯುಸಿ ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಜಿ.ರಮೇಶ್ ಅವರು ನೇಮಕ ಮಾಡಲಾಗಿದೆ.
ಕುಣಿಗಲ್ ತಾಲೂಕಿನವರಾದ ಹೆಚ್.ಜಿ.ರ ಮೇಶ್ ಅವರು ಕಾರ್ಮಿಕರ ಕಲ್ಯಾಣ ಅಭಿವೃದ್ಧಿಗಾಗಿ ಶ್ರಮಿಸಿರುವ ಅವರ ಸೇವೆಯನ್ನು ಗುರುತಿಸಿ ಕಾರ್ಮಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್.ಸುಮಾ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಲಿಯ ಸದಸ್ಯರಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಹೆಚ್.ಜಿ,ರಮೇಶ್ ಮಾಜಿ ಸಚಿವ ವೈ. ಕೆ.ರಾಮಯ್ಯ ಅವರ ಅಪ್ತರಾಗಿದ್ದು ತಾಲೂಕಿನ ಅಮೃತ್ತೂರು ಹೋಬಳಿ ಕೆ.ಹೊನ್ನಮಾಚನಹಳ್ಳಿ ಗ್ರಾಮದವರಾಗಿದ್ದು ಹಾಲಿ ಕುಣಿಗಲ್ಕೆಆರ್‌ಎಸ್ ಅಗ್ರಹಾರದಲ್ಲಿ ವಾಸವಾಗಿರುತ್ತಾರೆ, ರೈತ ಕುಟುಂಬದಿಂದ ಬಂದ ಅವರು ಬಾಲ್ಯದಿಂದಲ್ಲೇ ಸಮಾಜ ಸೇವೆಯಲ್ಲಿ ತೋಡಗಿಸಿಕೊಂಡು ಬಂದವರು ಸಾಮಾಜಿಕ ಹೋರಾಟ ಮಾಡಿಕೊಂಡು ಬಂದು ಆನೇಕ ಮಂದಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಅವರ ಸೇವೆ ಅನನ್ಯವಾಗಿದೆ.
ವೈ.ಕೆ.ಆರ್ ಅವರು ಪರಿಸರ, ಸಾಲು ಮರಗಳು ನೀರಾವರಿ ಮೊದಲಾದ ಹೋರಾಟ ನಡೆಸುತ್ತಿದ್ದ ವೇಳೆ ಅವರೊಂದಿಗೆ ಹೆಚ್.ಜಿ.ರಮೇಶ್ ಪಾಲ್ಗೊಂಡಿದರು. ವೈ.ಕೆ.ಆರ್ ಅವರ ಹೋರಾ ಟಗಳ ಪ್ರೇರಣೆಯಿಂದ ಸಾಮಾಜಿಕ ಸೇವೆಗೆ ದುಮುಕಿದ ಹೆಚ್.ಜಿ.ರಮೇಶ್ ಸಮಾಜಿಕ, ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದರು, ಸ್ವತಃ ಸಿಡಿಲಿನ ಮರಿ ಪತ್ರಿಕೆ ತಂದು ಆ ಮೂಲಕ ಸಮಾಜಕ್ಕೆ ಸೇವೆ ನೀಡಿದ್ದಾರೆ.
ಇತ್ತೀಚಿಗೆ ತುಮಕೂರು ಜಿಲ್ಲಾ ಐಎನ್‌ಟಿಯುಸಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಮಿಕರ ಪರ ಹೋರಾಟ ನಡೆಸಿದರು ಈಗ ಅವರನ್ನು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಲಿಯ ಸದಸ್ಯರಾಗಿ ನೇಮಕ ಮಾಡಿರುವುದು ಕಾರ್ಮಿಕ ಕುಟುಂಬ ವಲಯದಲ್ಲಿ ಪ್ರಶಂಸೆ ಕೇಳಿ ಬರುತ್ತಿದೆ.


