ಯಾವ ದೇಶ ನಾವೀನ್ಯತೆ, ಹೊಸ ಆವಿಷ್ಕಾರಕ್ಕೆ ಅವಕಾಶ ನೀಡುವುದಿಲ್ಲವೋ ಆ ದೇಶದ ಅಭಿವೃದ್ಧಿ ಅಲ್ಲಿಗೆ ನಿಲ್ಲುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. 2023ರ ಕೊನೆಯ ಮನ್ಕಿ ಬಾತ್ನಲ್ಲಿ ಮಾತನಾಡಿರುವ ಪ್ರಧಾನಿ ಮೋದಿ, ಎಂದೂ ಕೂಡ ಯಾವುದೇ ಅಭಿವೃದ್ಧಿ ಕಾರ್ಯವು ನಿಲ್ಲದಂತೆ ನೋಡಿಕೊಳ್ಳೋಣ. ನಾವು ಒಟ್ಟಾಗಿ ಪ್ರಯತ್ನ ನಡೆಸಿದಾಗಲೆಲ್ಲಾ ದೇಶಕ್ಕೆ ಹೆಚ್ಚಿನ ಲಾಭವಾಗಿದೆ. ದೇಶದಲ್ಲಿ 70 ಸಾವಿರ ಅಮೃತ ಸರೋವರಗಳ ನಿರ್ಮಾಣವೂ ನಮ್ಮ ಸಾಧನೆಯಾಗಿದೆ ಎಂದರು.

ಯಾವ ದೇಶ ನಾವೀನ್ಯತೆ, ಹೊಸ ಆವಿಷ್ಕಾರಕ್ಕೆ ಅವಕಾಶ ನೀಡುವುದಿಲ್ಲವೋ ಆ ದೇಶದ ಅಭಿವೃದ್ಧಿ ಅಲ್ಲಿಗೆ ನಿಲ್ಲುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. 2023ರ ಕೊನೆಯ ಮನ್ಕಿ ಬಾತ್(Mann Ki Baat)ನಲ್ಲಿ ಮಾತನಾಡಿರುವ ಪ್ರಧಾನಿ ಮೋದಿ, ಎಂದೂ ಕೂಡ ಯಾವುದೇ ಅಭಿವೃದ್ಧಿ ಕಾರ್ಯವು ನಿಲ್ಲದಂತೆ ನೋಡಿಕೊಳ್ಳೋಣ. ನಾವು ಒಟ್ಟಾಗಿ ಪ್ರಯತ್ನ ನಡೆಸಿದಾಗಲೆಲ್ಲಾ ದೇಶಕ್ಕೆ ಹೆಚ್ಚಿನ ಲಾಭವಾಗಿದೆ. ದೇಶದಲ್ಲಿ 70 ಸಾವಿರ ಅಮೃತ ಸರೋವರಗಳ ನಿರ್ಮಾಣವೂ ನಮ್ಮ ಸಾಧನೆಯಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಮನ್ಕಿ ಬಾತ್ನ ಪ್ರಮುಖಾಂಶಗಳು -ಈ ವರ್ಷ ನಾವು ಅನೇಕ ಸಾಧನೆಗಳನ್ನು ಮಾಡಿದ್ದೇವೆ. ದೇಶವು ಐದನೇ ಅತಿದೊಡ್ಡ ಆರ್ಥಿಕತೆಯಾಯಿತು. G20 ಅನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಇಂದು ದೇಶದ ಮೂಲೆ ಮೂಲೆಗಳಲ್ಲಿ ಆತ್ಮವಿಶ್ವಾಸ ತುಂಬಿದೆ. ಮುಂದಿನ ವರ್ಷವೂ ಈ ಉತ್ಸಾಹವನ್ನು ಉಳಿಸಿಕೊಳ್ಳಬೇಕು. -ಚಂದ್ರಯಾನ-3ರ ಯಶಸ್ಸಿಗಾಗಿ ಹಲವರು ನನಗೆ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಮಹಿಳಾ ವಿಜ್ಞಾನಿಗಳನ್ನು ವಿಶೇಷವಾಗಿ ಪ್ರಶಂಸಿಸಲಾಗುತ್ತಿದೆ.
#ShriRamBhajan ಈ ಹ್ಯಾಶ್ಟ್ಯಾಗ್ನಲ್ಲಿ ಶ್ರೀರಾಮ ಭಜನೆಯನ್ನು ಹಾಡಿ ನಮ್ಮೊಂದಿಗೆ ಹಂಚಿಕೊಳ್ಳಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಇಡೀ ದೇಶದಲ್ಲಿ ಉತ್ಸಾಹ ಮೂಡಿದೆ. ಜನರು ತಮ್ಮ ಭಾವನೆಗಳನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ಎಲ್ಲಾ ರಚನೆಗಳನ್ನು ಸಾಮಾನ್ಯ ಹ್ಯಾಶ್ ಟ್ಯಾಗ್‌ನೊಂದಿಗೆ ಹಂಚಿಕೊಳ್ಳಬೇಕು.


