12 August 2026
Advertisement
ರಾಜ್ಯ

ಮಹಿಳೆಯ ಮೇಲೆ ಬೂಟು ಕಾಲಿನಿಂದ ಒದ್ದು ಕ್ರೌರ್ಯವೆಸಗಿರುವು ಅಂಗಡಿಯ ಮಾಲೀಕ ಬಾಬುಲಾಲ್ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧನ

WhatsApp Group Join Now

ಅವೆನ್ಯೂ ರಸ್ತೆಯ ಬಟ್ಟೆ ಅಂಗಡಿಯಲ್ಲಿ ಸೀರೆ ಕದ್ದ ಆರೋಪದಡಿ ಅಂಗಡಿಯ ಮಾಲೀಕ ಓರ್ವ ಮಹಿಳೆಯ ಮೇಲೆ ಬೂಟು ಕಾಲಿನಿಂದ ಒದ್ದು ಕ್ರೌರ್ಯವೆಸಗಿರುವುದು ಖಂಡನೀಯ.

ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಉಪ ಪೊಲೀಸ್ ಆಯುಕ್ತರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಈಗಾಗಲೇ ಅವೆನ್ಯೂ ರಸ್ತೆಯ ಮಾಯಾ ಸಿಲ್ಕ್ ಸ್ಯಾರೀಸ್ ಬಟ್ಟೆ ಅಂಗಡಿಯ ಮಾಲೀಕ ಬಾಬುಲಾಲ್ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿ,

FIR ದಾಖಲಿಸಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯವನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ತಪ್ಪು ಕಂಡುಬಂದಲ್ಲಿ ಅದನ್ನು ಪರಾಮರ್ಶಿಸಲು ಕಾನೂನು ಇದೆ. ಕಾನೂನನ್ನು ಕೈಗೆತ್ತಿಕೊಳ್ಳುವುದು ಅಥವಾ ಮಹಿಳೆಯರ ಮೇಲೆ ಕ್ರೌರ್ಯವೆಸಗುವುದು ಅಕ್ಷಮ್ಯ.-ಡಾ ನಾಗಲಕ್ಷ್ಮೀ ಚೌಧರಿ (ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು)

About The Author