ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಜನಸ್ನೇಹಿ ಪೊಲೀಸ್ ಠಾಣೆ ರಾಮದುರ್ಗ ಇವರಿಗೆ ವಿಶ್ವ ಹಿಂದೂ ಪರಿಷತ್ತಿನ ಬಜರಂಗದಳ
ವತಿಯಿಂದ ಪ್ರೇಮದ ಹೆಸರಿನಲ್ಲಿ ಹೆಚ್ಚುತ್ತಿರುವ ಪ್ರಕರಣಗಳನ್ನು ತಡೆಯಬೇಕೆಂದು ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದರು.
ರಾಮದುರ್ಗ ನಗರದಲ್ಲಿ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಪ್ರೇಮದ ಹೆಸರಿನಲ್ಲಿ ಮನೆ ಬಿಟ್ಟು ಓಡಿ ಹೋಗುವ ಪ್ರಕರಣಗಳು ಹೆಚ್ಚುತ್ತಿದ್ದು, ಶಾಲಾ-ಕಾಲೇಜುಗಳ ಹಾದಿಯಲ್ಲಿ ಅಲ್ಲಲ್ಲಿ ಗುಂಪಾಗಿ ನಿಂತು ಹುಡುಗಿಯರನ್ನು ಛೇಡಿಸುವ, ಜೋರಾಗಿ ಬೈಕ್ ಓಡಿಸುವ ಮೂಲಕ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹುಡುಗಿಯರನ್ನು ಪುಸಲಾಯಿಸಿ ಅವರ ಬ್ರೈನ್ ವಾಶ್ ಮಾಡಿ ಓಡಿಸಿಕೊಂಡು ಹೋಗುವ ಪ್ರಕರಣಗಳು ಹೆಚ್ಚಾಗಿದ್ದು, ಪೊಲೀಸ್ ಇಲಾಖೆ ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಕಾಲೇಜು ಮಾರ್ಗದಲ್ಲಿ ಗುಂಪಾಗಿ ನಿಲ್ಲುವ ವಿದ್ಯಾರ್ಥಿಗಳಲ್ಲದ ಹುಡುಗರಿಗೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ಗಸ್ತು ವಾಹನಗಳನ್ನು ನಿಯೋಜನೆ ಮಾಡುವ ಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದೂ ಪರಿಷದ್ -ಬಜರಂಗದಳ ಮನವಿ ಸಲ್ಲಿಸಿದರು.
ಅದೇ ರೀತಿ ಪಾಲಕರು ತಮ್ಮ ಮಕ್ಕಳು ಸರಿಯಾಗಿ ಕಾಲೇಜು, ಶಾಲೆಗಳಿಗೆ ಹೋಗ್ತಾರ ಇಲ್ಲ ಎಂಬುವುದು ಮಕ್ಕಳ ಮೇಲೆ ನಿಗಾ ವಹಿಸಬೇಕು ಎಂದು ವಿಶ್ವ ಹಿಂದು ಪರಿಷತ್ ವತಿಯಿಂದ ಪಾಲಕರಿಗೆ ಮನವಿ ಮಾಡಿದರು.



