12 August 2026
Advertisement
ರಾಜ್ಯ

ರಾಮದುರ್ಗ ರೈಲ್ವೆ ಹೋರಾಟ ಕ್ರಿಯಾ ಸಮಿತಿಯಿಂದ ಪತ್ರ ಚಳುವಳಿ.! ಚಳುವಳಿಯನ್ನು ಬೆಂಬಲಿಸಿ ಪತ್ರ ಬರೆದ ನ್ಯಾಯವಾದಿಗಳು

WhatsApp Group Join Now

ಬೆಳಗಾವಿ: ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ರಾಮದುರ್ಗ ರೈಲ್ವೆ ಹೋರಾಟ ಕ್ರಿಯಾ ಸಮಿತಿ ವತಿಯಿಂದ ಲೋಕಾಪೂರ-ಧಾರವಾಡ ನೂತನ ರೈಲ್ವೆ ಮಾರ್ಗಕ್ಕೆ ಆಗ್ರಹಿಸಿ ಇದೇ ಡಿಸೆಂಬರ್ 10 ರಿಂದ ಪತ್ರ ಚಳುವಳಿಯನ್ನು ಪ್ರಾರಂಭಿಸಿದೆ

ಡಿಸೆಂಬರ್ 10 ರಂದು ಪಟ್ಟಣದ ಹೊರ ವಲಯದಲ್ಲಿರುವ ಶ್ರೀಮತಿ ಈರಮ್ಮ ಯಾದವಾಡ ಸರ್ಕಾರಿ ಪದವಿ ಕಾಲೇಜಿನಲ್ಲಿ ಮಂಗಳವಾರ ರಾಮದುರ್ಗ ರೈಲ್ವೆ ಹೋರಾಟ ಕ್ರಿಯಾ ಸಮಿತಿ ಮುಖಂಡ ರೆಲ್ಲರೂ ಸೇರಿ ಲೋಕಾಪೂರದಿಂದ ಧಾರವಾಡ ನೂತನ ರೈಲು ಮಾರ್ಗ ಯೋಜನೆಗೆ ಅನುಮೋದನೆ ನೀಡುವ ಕುರಿತು ಕಾಲೇಜು ವಿದ್ಯಾರ್ಥಿಗಳಿಂದ ಕೇಂದ್ರ ರೈಲ್ವೆ ಮಂತ್ರಿ ಅಶ್ವಿನ್ ವೈಷ್ಣವ, ರಾಜ್ಯ ರೈಲ್ವೆ ಸಚಿವ ವಿ ಸೋಮಣ್ಣ, ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್, ಹುಬ್ಬಳ್ಳಿ ರೈಲ್ವೆ ಮಹಾಪ್ರಬಂಧಕರಿಗೆ ಪತ್ರ ಬರೆಯುವ ಮೂಲಕ ಒತ್ತಾಯಿಸಿದರು.

ಈಗ ಅದರ ಮುಂದುವರೆದ ಭಾಗವಾಗಿ ಇವತ್ತು ಡಿಸೆಂಬರ್ 16 ರಂದು ರಾಮದುರ್ಗ ಪಟ್ಟಣದ ನ್ಯಾಯವಾದಿಗಳ ಸಂಘವೂ ಕೂಡ ತಮ್ಮ ಬೆಂಬಲ ವ್ಯಕ್ತಪಡಿಸಿ ರಾಮದುರ್ಗ ರೈಲ್ವೆ ಹೋರಾಟ ಕ್ರಿಯಾ ಸಮಿತಿಯ ಪತ್ರ ಚಳುವಳಿಯಲ್ಲಿ ಪಾಲ್ಗೊಂಡು ಎಲ್ಲ ವಕೀಲರು ಕೂಡ ಪತ್ರ ಬರೆಯುವ ಮೂಲಕ ಲೋಕಾಪೂರ ಟು ಧಾರವಾಡ ನೂತನ ರೈಲು ಮಾರ್ಗ ಯೋಜನೆಗೆ ಅನುಮೋದನೆ ನೀಡಲು ಸರ್ಕಾರಕ್ಕೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರಾಮದುರ್ಗ ರೈಲ್ವೆ ಹೋರಾಟ ಕ್ರಿಯಾ ಸಮಿತಿಯ ಮುಖಂಡ ಎಂ ಕೆ ಯಾದವಾಡ ಉಪಸ್ಥಿತರಿದ್ದರು.

About The Author