ನಾಡದ್ರೋಹಿ ಶುಭಂ ವಿಕ್ರಾಂತ ಶೇಳಕೆ ಇತನನ್ನು ಗಡಿಪಾರು ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇಧಿಕೆವತಿಯಿಂದ ತಹಶೀಲ್ದಾರ್ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ.

WhatsApp Group Join Now

ಬೆಳಗಾವಿ ಜಿಲ್ಲೆ ಸವದತ್ತಿಯಲ್ಲಿ
ಕರ್ನಾಟಕ ರಕ್ಷಣಾ ವೇಧಿಕೆ ಸವದತ್ತಿ ತಾಲೂಕಾ ಘಟಕದಿಂದ ನಾಡದ್ರೋಹಿ ಶುಭಂ ವಿಕ್ರಾಂತ ಶೇಳಕೆ ಇತನನ್ನು ಗಡಿಪಾರು ಮಾಡಬೇಕೆಂದು ಸವದತ್ತಿ ತಹಶೀಲ್ದಾರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಕನ್ನಡ, ನಾಡು, ನುಡಿ, ನೆಲ ಜಲ ವಿಷಯದಲ್ಲಿ ಪದೇ ಪದೇ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಎಮ್.ಇ.ಎಸ್ ನ ಗುಂಡಾ ರೌಡಿ ಶುಭಂ ವಿಕ್ರಾಂತ ಶೇಳಕೆ ಇತನು ಬೆಳಗಾವಿಯಲ್ಲಿ ಇತನ ಕುಮ್ಮಕ್ಕಿನಿಂದ ಪದೇ ಪದೇ ಎಮ್.ಇ.ಎಸ ನ ನಾಲಾಯಕರು ಕನ್ನಡ ನಾಡು ನುಡಿ ವಿಚಾರದಲ್ಲಿ ಹಾಗೂ ಕನ್ನಡ ಹೋರಾಟಗಾರರ ವಿಚಾರದಲ್ಲಿ ಪ್ರಚೋದನೆ ಹೇಳಿಕೆ ನೀಡಿಕೊಂಡು ಕನ್ನಡ ಮತ್ತು ಮರಾಠಿ ಜನರಲ್ಲಿ ದ್ವೇಷದ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಈ ಎಮ್.ಇ.ಎಸ ನ ಪುಂಡ ಶುಭಂ ವಿಕ್ರಾಂತ ಶೇಳಕೆ ಇತನ ಮೇಲೆ ರೌಡಿ ಶೀಟರ ಕೇಸ ದಾಖಲು ಮಾಡಿ ಕರ್ನಾಟಕ ರಾಜ್ಯದಿಂದ ಗಡಿಪಾರು ಮಾಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇವೆ ಇಲ್ಲವಾದರೆ ಇಡಿ ರಾಜ್ಯಾದ್ಯಂತ ಕರ್ನಾಟಕ ರಕ್ಷಣಾ ವೇದಿಕೆ ಉಗ್ರವಾದ ಹೋರಾಟ
ಮಾಡಬೇಕಾಗುತ್ತದೆ ಎಂದು ಹೇಳಿದರು.

ಈ ವೇಳೆ ಭೀಮಸಿ ಕಿವಡಿ ತಾಲೂಕ ಅಧ್ಯಕ್ಷರು ವಿನಾಯಕ್ ಪಾಸಲಕರ ತಾಲೂಕು ಉಪಾಧ್ಯಕ್ಷರು ಶೇಖರ್ ಸಣಕಲ ಮುರಗೋಡ ಗ್ರಾಮ ಘಟಕ ಅಧ್ಯಕ್ಷರು ಸತೀಶ್ ತುರಮರಿ ಗ್ರಾಮ ಘಟಕ ಅಧ್ಯಕ್ಷ ಇನಾಮಂಗಲ ದಯಾನಂದ ಶೆಳೆಮ್ಮಿ ತಾಲೂಕ ಸಂಚಾಲಕರು ನವೀನ್ ವಗ್ಗರ್ ಮಹದೇವ್ ಬೆಳಗಾವಿ ಪಕೀರಪ್ಪ ಮಬನೂರ
ಶಿವು ಮಡಿವಾಳರ್ ಜಯಶ್ರೀ ಕುಂಬಾರ್ ರಾಜೇಶ್ವರಿ ರೇನಖೆಗೌಡ ಪಾಲ್ಗೊಂಡಿದ್ದರು.

About The Author