ಕುಡಿದ ಮತ್ತಿನಲ್ಲಿ ಚಾಲಕನಿಂದ ಶಾಲಾ ಬಸ್ ಅಪಘಾತ

WhatsApp Group Join Now

ಕಿತ್ತೂರ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಮುಳ್ಳಿನ ಕಂಠೆಗೆ ನುಗ್ಗಿದ ಶಾಲಾ ಬಸ್

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕಿತ್ತೂರು ಹಾಗೂ ನರಗುಂದ ರೋಡ ಹತ್ತಿರ
ಶ್ರೀ ಸಿದ್ದೇಶ್ವರ ಇಂಗ್ಲಿಷ್ ಮೀಡಿಯಂ ಸ್ಕೂಲ್ ಹಿರೇಕೊಪ್ಪನ ಖಾಸಗಿ ಶಾಲಾ ಬಸ್ KA 26 B-7464 ಕಿತ್ತೂರ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಮುಳ್ಳಿನ ಕಂಠೆಗೆ ನುಗ್ಗಿದ ಘಟನೆ ನಡೆದಿದೆ

ಎಸ್.ಕೆ ಹಿರೆಕೊಪ್ಪ ಗ್ರಾಮದ
ಸಿದ್ದೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಬಸ್ಸು

40 ಕ್ಕೂ ಹೆಚ್ಚು ಪುಟ್ಟ ಮಕ್ಕಳಿದ್ದ ಶಾಲಾ ಬಸ್ಸು

ಕುಡಿದ ಮತ್ತಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಕಂದಕಕ್ಕೆ ಉರುಳಿದ ಬಸ್ಸು

ಶಾಲೆ ಮುಗಿದ ನಂತರ ಮಕ್ಕಳನ್ನು ಮನೆಗೆ ಬಿಡಲು ಹೋಗುತ್ತಿದ್ದ ವೇಳೆ ಘಟನೆ

ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಮಕ್ಕಳಿಗೆ ಚಿಕ್ಕಪುಟ್ಟ ಗಾಯಗಳಾಗಿವೆ

ಕುಡಿದ ಮತ್ತಿನಲ್ಲಿದ್ದ ಚಾಲಕನ ವಿರುದ್ದ ಪಾಲಕರ ಆಕ್ರೋಶ

About The Author