WhatsApp Group
Join Now
ವಿಶ್ವಹಿಂದೂ ಪರಿಷತ್ ರಾಮದುರ್ಗ ಪ್ರಖಂಡ ವತಿಯಿಂದ ಗುರುವಾರ ದಿನಾಂಕ 15/01/2026 ರಂದು ಮಕರ ಸಂಕ್ರಮಣ ದಂದು ಮನೆಮನೆಗೆ ಎಳ್ಳುಬೆಲ್ಲ ಹಂಚುವ ಮೂಲಕ ಸಾಮಾಜಿಕ ಸಾಮರಸ್ಯ ದಿವಸ ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ವಿಶ್ವಹಿಂದೂ ಪರಿಷತ್ ರಾಮದುರ್ಗ ನಗರ ಸಮಿತಿ ಮಹಿಳಾ ಉಪಾಧ್ಯಕ್ಷರಾದ ನಿವೃತ್ತ ಪ್ರಾಧ್ಯಾಪಕಿ ಶ್ರೀಮತಿ ವಿಜಯಾ ಜೋಷಿ ಅವರು ಎಳ್ಳುಬೆಲ್ಲ ಹಂಚುವ ಮೂಲಕ ಚಾಲನೆ ನೀಡಿದರು ನಗರದ ಕಿಲ್ಲಾಗಲ್ಲಿ, ಗಡದಕೇರಿ, ಅಂಬೇಡ್ಕರ್ ನಗರದ ಬಂಧುಗಳೊಂದಿಗೆ ಪರಸ್ಪರ ಎಳ್ಳುಬೆಲ್ಲ ಹಂಚಿ ಸಾಮಾಜಿಕ ಸಾಮರಸ್ಯ ಮೆರೆಯುವ ಮೂಲಕ ಅತ್ಯಂತ ಅರ್ಥಗರ್ಭಿತ ಸಂಕ್ರಾಂತಿ ಆಚರಣೆ ಮಾಡಿದರು ಈ ಸಂದರ್ಭದಲ್ಲಿ ವಿಭಾಗ ಸತ್ಸಂಗ ಪ್ರಮುಖ ವಿಜಯೇಂದ್ರ ಜೋಷಿ, ಜಿಲ್ಲಾ ಮಾತೃಶಕ್ತಿ ಸಂಯೋಜಿಕಾ ಸುನಿತಾ ತಿಮ್ಮನಗೌಡರ ಪ್ರಖಂಡ ಅಧ್ಯಕ್ಷ ಪ್ರಕಾಶ ಸೂಳಿಬಾವಿ, ಕಾರ್ಯದರ್ಶಿ ಸಂಗಮೇಶ ಉದಪುಡಿ, ಬಜರಂಗದಳ ಸಹ ಸಂಯೋಜಕ ಸಂತೋಷ ಬೆಳಗಲ್, ನಗರ ಮಾತೃಶಕ್ತಿ ಸಂಯೋಜಿಕಾ ಶಾರದಾ ಕಾಳೆ, ಆಕಾಶ ಹವಳಕೋಡ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.



