ಶುಭಂ ಶೇಳೆಕೆ ವಿರುದ್ಧ ರೌಡಿ ಸಿಟರ್ ಓಪನ್ ಮಾಡಿ ಗುಂಡಾ ಕಾಯ್ದೆ ಅಡಿ ಗಡಿಪಾರು ಮಾಡಲು ರಾಮದುರ್ಗ ತಾಲೂಕಾ ಕರವೇ ಅಗ್ರಹ.

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗದಲ್ಲಿ
ಕರ್ನಾಟಕ ರಕ್ಷಣಾ ವೇಧಿಕೆ ರಾಮದುರ್ಗ ತಾಲೂಕಾ ಘಟಕದಿಂದ ನಾಡದ್ರೋಹಿ ಶುಭಂ ವಿಕ್ರಾಂತ ಶೇಳಕೆ ಇತನನ್ನು ಗಡಿಪಾರು ಮಾಡಬೇಕೆಂದು ರಾಮದುರ್ಗ ತಹಶೀಲ್ದಾರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಕನ್ನಡ, ನಾಡು, ನುಡಿ, ನೆಲ ಜಲ ವಿಷಯದಲ್ಲಿ ಪದೇ ಪದೇ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಎಮ್.ಇ.ಎಸ್ ನ ಗುಂಡಾ ರೌಡಿ ಶುಭಂ ವಿಕ್ರಾಂತ ಶೇಳಕೆ ಇತನು ಬೆಳಗಾವಿಯಲ್ಲಿ ಇತನ ಕುಮ್ಮಕ್ಕಿನಿಂದ ಪದೇ ಪದೇ ಎಮ್.ಇ.ಎಸ ನ ನಾಲಾಯಕರು ಕನ್ನಡ ನಾಡು ನುಡಿ ವಿಚಾರದಲ್ಲಿ ಹಾಗೂ ಕನ್ನಡ ಹೋರಾಟಗಾರರ ವಿಚಾರದಲ್ಲಿ ಪ್ರಚೋದನೆ ಹೇಳಿಕೆ ನೀಡಿಕೊಂಡು ಕನ್ನಡ ಮತ್ತು ಮರಾಠಿ ಜನರಲ್ಲಿ ದ್ವೇಷದ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಈ ಎಮ್.ಇ.ಎಸ ನ ಪುಂಡ ಶುಭಂ ವಿಕ್ರಾಂತ ಶೇಳಕೆ ಇತನ ಮೇಲೆ ರೌಡಿ ಶೀಟರ ಕೇಸ ದಾಖಲು ಮಾಡಿ ಕರ್ನಾಟಕ ರಾಜ್ಯದಿಂದ ಗಡಿಪಾರು ಮಾಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇವೆ ಇಲ್ಲವಾದರೆ ಇಡಿ ರಾಜ್ಯಾದ್ಯಂತ ಕರ್ನಾಟಕ ರಕ್ಷಣಾ ವೇದಿಕೆ ಉಗ್ರವಾದ ಹೋರಾಟ
ಮಾಡಬೇಕಾಗುತ್ತದೆ ಎಂದು ಹೇಳಿದರು.

ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಾಣದ ತಾಲೂಕ ಅಧ್ಯಕ್ಷ ವಿಜಯಕುಮಾರ ರಾಠೋಡ ಉಪಾಧ್ಯಕ್ಷ ಗಣೇಶ್ ದೊಡ್ಡಮನಿ ಗೌರವಾಧ್ಯಕ್ಷ ಜಹೂರ್ ಹಾಜಿ ಪ್ರಧಾನ ಕಾರ್ಯದರ್ಶಿ ಆನಂದ ಜಾದವ ಮಹಿಳಾ ಘಟಕದ ಅಧ್ಯಕ್ಷ ರೂಪ ಅರಮನಿ ಗಾಯತ್ರಿ ದೇವಿ ದೇವಾಂಗ ಮಠ ದೀಪಾ ತಿಳಗಂಜಿ. ಪದಗಳಾದ ಹನುಮಂತ ಕೃಷ್ಣ ರಾಥೋಡ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

About The Author