ಬೆಳಗಾವಿ ಬಸವೇಶ್ವರ ದ್ವಾದಶ ಸೂತ್ರ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು

WhatsApp Group Join Now

ಬೆಳಗಾವಿ: ಬಸವೇಶ್ವರ ದ್ವಾದಶ ಸೂತ್ರ ಕುರಿತು ಉಪನ್ಯಾಸ ಕಾರ್ಯಕ್ರಮ
ಬೆಳಗಾವಿಯ ಮಹಾಂತೇಶ ನಗರದಲ್ಲಿರುವ ಪಿತಾಮಹ ಡಾ. ಫ.ಗು. ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ದಿ. 18-01-2026ರಂದು ಬಸವೇಶ್ವರ ದ್ವಾದಶ ಸೂತ್ರ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಪ್ರಾರoಭದಲ್ಲಿ ಮೂನ್ನೆ ಲಿoಗೈಕ್ಯರಾದ ಶ್ರೀ ಬೀಮಣ್ಣಾ ಕoಡ್ರೆಯವರಿಗೆ ಲಿoಗೈಕ್ಯ ಕರುಣಿಸಲೆoದು ಪ್ರಾಥಿ೯ಸಲಾಯಿತು
ಶರಣ ಯು.ಎನ್. ಸಂಗನಾಳಮಠ ಅವರು ಉಪನ್ಯಾಸ ನೀಡುತ್ತಾ, ಬಸವೇಶ್ವರರ ದ್ವಾದಶ ಸೂತ್ರಗಳು ಮಾನವ ಜೀವನಕ್ಕೆ ದಾರಿ ತೋರಿಸುವ ಮೌಲ್ಯಯುತ ಸಂದೇಶಗಳಾಗಿದ್ದು, ಸಾಮಾಜಿಕ ಸಮಾನತೆ, ದಾಸೋಹ ಮತ್ತು ಕಾಯಕ ತತ್ವಗಳ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಮಂಜುನಾಥ ಅಂಗಡಿ ಅವರು ದಾಸೋಹ ಸೇವೆಗೈದರು. ಶರಣೆ ಮಹಾದೇವಿ ಅರಳಿ ಅವರು ಸಾಮೂಹಿಕ ಪ್ರಾರ್ಥನೆಯನ್ನು ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರಣ ಈರಣ್ಣಾ ದೇಯಣ್ಣವರ ವಹಿಸಿದ್ದರು. ಅತಿಥಿಗಳ ಪರಿಚಯವನ್ನು ಶರಣ ಎಂ.ವೈ. ಮೆಣಸಿನಕಾಯಿ ಅವರು ಮಾಡಿದರು.ಸoಗಮೇಶ ಅರಳಿ ಕಾಯ೯ಕ್ರಮ ನಿರೂಪಿಸಿದರು ಶಶಿಭೂಷಣ ಪಾಟೀಲ, ಸದಾಶಿವ ದೇವರಮನಿ, ಶoಕರ ಗುಡಸ, ಸುನoದಾ ಮಹದೇವ ಕೆoಪಿಗೌಡ್ರ, ನೇತ್ರಾ ಕೆoಪಣ್ಣ ರಾಮಾಪೂರಿ, ವಿದ್ಯಾ ಕರಕಿ, ಶಾಂತಾ ಕoಬಿ, ನoದಾ ಬಗಲಿ, ಶಿವಲೀಲಾ ಗೌಡರ, ಬಸವರಾಜ ಕರಡಿಮಠ, ಸುದೀರ ರಘಶೆಟ್ಟಿ,
ಬಸವರಾಜ ಬಿಜ್ಜರಗಿ, ಲಕ್ಸ್ಮಿಕಾoತ ಗುರವ, ಶಿವಾನoದ ನಾಯಕ, ಪ. ಬ.ಕರಿಕಟ್ಟಿ, ಚoದ್ರಪ್ಪ ಅoಗಡಿ, ಶಿವಾನoದ ತಲ್ಲೂರ, ಮ. ಬ. ಕಾಡೆ, ಆನಂದ ಕರಕಿ, ವಿ.ಕೆ. ಪಾಟೀಲ, ಮಹಾದೇವಿ ಅರಳಿ, ಜೆ.ಪಿ. ಜವಣಿ, ಮೋಹನ ಗುಂಡ್ಲೂರ ಹಾಗೂ ಬಸವರಾಜ ಇಂಚಲ ಅವರು ವಚನಗಳ ಕುರಿತು ವಿಶ್ಲೇಷಣೆ ಮಾಡಿದರು.
ಕಾರ್ಯಕ್ರಮದಲ್ಲಿ ಸ.ರಾ. ಸುಳಕೂಡೆ, ಗುರುಸಿದ್ದಪ್ಪ ರೇವಣ್ಣವರ ಸೇರಿದಂತೆ ಅನೇಕ ಶರಣರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.

About The Author