ಹರಾಜು ಗೋಂಡ ಅಂಗಡಿ ನೀಡದೆ ಇರುವ ಪುರಸಭೆ ಅಧಿಕಾರಿಗಳು!

WhatsApp Group Join Now

ಪುರಸಭೆ ಮಾಲೀಕತ್ವದ ವಾಣಿಜ್ಯ ಅಂಗಡಿಗಳ ಹರಾಜು ಹೆಸರಿನಲ್ಲಿ ಟೆಂಡರ್ ಫಾರ್ಮ್ ಫೀ 500 ರೂ. ಗಳನ್ನು ಸಾರ್ವಜನಿಕರಿಂದ ದೋಚಿದ್ದು ಯಾಕೆ ?

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರತಕ್ಕಂತಹ ವಾಣಿಜ್ಯ ಮಳಿಗೆಗಳನ್ನು ದಿನಾಂಕ: 11-01-2022 ರಂದು ಪುರಸಭೆ ಮುಖ್ಯಾಧಿಕಾರಿ ರವಿ ಬಾಗಲಕೋಟೆ ಹಾಗೂ ಅಧ್ಯಕ್ಷ, ಉಪಾಧ್ಯಕ್ಷ, ಸರ್ವ ಸದಸ್ಯರ ಸಮ್ಮುಖದಲ್ಲಿ ಹರಾಜು ಪ್ರಕ್ರಿಯೇ ಸಭಾಂಗಣದಲ್ಲಿ ನಡೆಯಿತು.

ಮಳಿಗೆಗಳ ಬಹಿರಂಗ ಹರಾಜು ಷರತ್ತುಗಳು

1) ಬಹಿರಂಗ ಲಿಲಾವದಲ್ಲಿ ರೂ.50,000/- ಗಳ ಡಿ.ಡಿ. ಹಾಜರಪಡಿಸಿದವರಿಗೆ ಮಾತ್ರ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜಿನಲ್ಲಿ ಭಾಗವಹಿಸಿ ಮಾಗಣಿ ಬೇಡಲು ಅವಕಾಶವಿರುತ್ತದೆ.

2) ಪ್ರತಿಯೊಂದು ಮಳಿಗೆಯನ್ನು ಮಳಿಗೆ ಸಂಖ್ಯೆಯ ಆಧಾರದ ಮೇಲೆ ಪ್ರತ್ಯೇಕವಾಗಿ ಬಹಿರಂಗ ಹರಾಜು ಜರುಗಿಸಲಾಗುವುದು

3) ಮಳಿಗೆಗಳನ್ನು ಹೆಚ್ಚಿನ ಠೇವಣಿ (Deposit) ಮಾಗಣಿ ಮಾಡಿದವರಿಗೆ ಬಹಿರಂಗ ಹರಾಜಿನ ಮುಖಾಂತರ ಮಳಿಗೆಯನ್ನು ಹಂಚಿಕೆ ಮಾಡಲಾಗುವುದು.

4) ಮಳಿಗೆಗಳ ಗುತ್ತಿಗೆ ಅವಧಿ(ಲೀಜ್) 12 ವರ್ಷ ಮಾತ್ರ ಇರುತ್ತದೆ. ಅವಧಿ ಮುಗಿದ ಕೂಡಲೆ ಮಳಿಗೆಯನ್ನು ರಾಮದುರ್ಗ ಪುರಸಭೆಗೆ ಮರಳಿ ಹಸ್ತಾಂತರಿಸಬೇಕು.

5) ಹಂಚಿಕೆಯಾದ ಮಳಿಗೆಯನ್ನು ಬಾಡಿಗೆ ಮೊತ್ತದ ಮೇಲೆ ಪ್ರತಿ 3 ವರ್ಷಕ್ಕೊಮ್ಮೆ ಶೇ.10ರಷ್ಟು ಬಾಡಿಗೆಯನ್ನು ಹೆಚ್ಚಿಸಲಾಗುವುದು ಮತ್ತು ಕಾಲ ಕಾಲಕ್ಕೆ ಸರ್ಕಾರದಿಂದ ಹೊರಡಿಸಲಾಗುವ ಆದೇಶಗಳ ಅನುಸಾರ ಬಾಡಿಗೆಯನ್ನು ಹೆಚ್ಚಿಸುವ ಕುರಿತು ಕ್ರಮ ವಹಿಸಲಾಗುವುದು. ಮಳಿಗೆ ವಿದ್ಯುತ್ ಬಿಲ್ಲನ್ನು ಪ್ರತಿ ತಿಂಗಳು ನಿಗಧಿತ ಅವಧಿಯೊಳಗೆ ಲೀಜ್ ಮಂಜೂರಾದವರು ಸಂದಾಯ ಮಾಡಿ ರಾಮದುರ್ಗ ಪುರಸಭೆಗೆ ಮಾಹಿತಿ ಸಲ್ಲಿಸತಕ್ಕದ್ದು.

6) ತಮಗೆ ಮಂಜೂರಿಸಲಾದ ಮಳಿಗೆಯ ಬಾಡಿಗೆಯನ್ನು 10ನೇ ತಾರೀಖಿನ ಒಳಗಾಗಿ ಸಂದಾಯ ಮಾಡತಕ್ಕದ್ದು. ತಪ್ಪಿದಲ್ಲಿ ನಿಯಮಾನುಸಾರ ಬಡ್ಡಿ ಮತ್ತು ದಂಡ ವಸೂಲಿಸಲಾಗುವುದು.

7) ವಿಕಲಚೇತನರಿಗಾಗಿ ಕಾಯ್ದಿರಿಸಿದ ಮಳಿಗೆಯನ್ನು ಶೇ.50 ಕ್ಕಿಂತ ಹೆಚ್ಚಿಗೆ ಇರುವ ವಿಕಲಚೇತನದ ಕುರಿತು ವೈದ್ಯಕೀಯ ಪ್ರಮಾಣಪತ್ರವನ್ನು ಹಾಜರಪಡಿಸಬೇಕು ಮತ್ತು ಸ್ವೀಕೃತಗೊಂಡ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಲಾಟರಿ ಮುಖಾಂತರ ಹಂಚಿಕೆ ಮಾಡಲಾಗುವುದು, ನಿಗಧಿಪಡಿಸಿದ ಬಾಡಿಗೆ ಮತ್ತು ಠೇವಣಿ ಮೊತ್ತ ಸಂದಾಯ ಮಾಡಬೇಕು.

8) ಬಹಿರಂಗ ಹರಾಜಿನಲ್ಲಿ ಹೆಚ್ಚಿಗೆ ಠೇವಣಿ ಬೇಡಿದ ಬಿಡ್ಡುದಾರರ ದರಗಳನ್ನು ಮಾನ್ಯ ಜಿಲ್ಲಾಧಿಕಾರಿಗಳು ಬೆಳಗಾವಿರವರು ಅನುಮೋದನೆ ನೀಡಿ 12ವರ್ಷ ಲೀಜ್ ಮಂಜೂರಿಸಿದ್ದಲ್ಲಿ ಮಾತ್ರ ಮಳಿಗೆಗಳನ್ನು ಹಂಚಿಕೆ ಮಾಡಲಾಗುವುದು.

9) ಹರಾಜಿನಲ್ಲಿ ಮಂಜೂರಿಸಿದ ಮಳಿಗೆಯನ್ನು ಉಪಬಾಡಿಗೆಯಿಂದ ನೀಡಬಾರದು. ಇಂತಹ ಪ್ರಕರಣಗಳು ಕಂಡುಬಂದರೆ ಮಂಜೂರಿಸಲಾದ ಮಳಿಗೆಯ ಗುತ್ತಿಗೆ ಅವಧಿಯನ್ನು ಅಸಿಂಧುಗೊಳಿಸಲಾಗುವುದು (ರದ್ದುಪಡಿಸಲಾಗುವುದು) ಭರಣಾ ಮಾಡಿದ ಠೇವಣಿ ಮೊತ್ತವನ್ನು ಮುಟ್ಟುಗೋಲು ಹಾಕಿಕೊಂಡು ತಮಗೆ ಲೀಜ್ ಮೇಲೆ ಮಂಜೂರಿಸಿದ ಮಳಿಗೆಯನ್ನು ಪುನಃ ಬಹಿರಂಗ ಹರಾಜು ಮಾಡಲಾಗುವುದು.

10) ಸದರಿ ಮಳಿಗೆಗಳನ್ನು ಮಂಜೂರು ವ ನಾ ಮಂಜೂರು ಮಾಡುವ ಅಧಿಕಾರವನ್ನು ಪುರಸಭೆಯು ಕಾಯ್ದಿರಿಸಿಕೊಳ್ಳಲಾಗಿದೆ.

11) ಮಂಜೂರಿಸಿದ ಮಳಿಗೆಯ ಸುತ್ತಮುತ್ತಲಿನ ಜಾಗೆಯ ಸ್ವಚ್ಛತೆಯನ್ನು ಕಾಪಾಡಿಕೊಂಡಿರಬೇಕು.

12) ಹರಾಜಿನಲ್ಲಿ ಮಂಜೂರಾದ ಮಳಿಗೆಯ ಗುತ್ತಿಗೆ ಅವಧಿ(ಲೀಜ್) 12 ವರ್ಷ ಮುಕ್ತಾಯವಾದ ನಂತರ ಠೇವಣಿ ಹಣವನ್ನು ಸರ್ಕಾರದ ಸುತ್ತೋಲೆಯಂತೆ ಮರಳಿ ಪಾವತಿಸಲಾಗುವುದು.

13) ಹರಾಜಿನಲ್ಲಿ ಪಡೆದ ಮಳಿಗೆಯಲ್ಲಿ ಮಾದಕ ಪದಾರ್ಥ, ವಸತಿ ಗೃಹ, ಮಾಂಸದ ಅಂಗಡಿ, ಸ್ಫೋಟಕ ವಸ್ತುಗಳು ಮತ್ತು ಶಬ್ದ ಮಾಲಿನ್ಯ ಉಂಟು ಮಾಡುವ ವ್ಯಾಪಾರ ವಹಿವಾಟನ್ನು ಬಿಟ್ಟು ನಡೆಸತಕ್ಕದ್ದು.

14) ಪರಿಶಿಷ್ಠ ಜಾತಿ/ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟಿರುವ ಅಂಗಡಿಗಳಲ್ಲಿ ಭಾಗವಹಿಸುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರ ಹಾಜರಪಡಿಸಬೇಕು.

15) ಲಿಲಾವಿನಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಮಾಸ್ಕನ್ನು ಧರಿಸಬೇಕು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು.

16) ಸಂದರ್ಭ-3 ರನ್ವಯ ಸಾರ್ವಜನಿಕ ಬಹಿರಂಗ ಹರಾಜು ಮೂಲಕ ಹಾಲಿ ಇರುವ ವಾಣಿಜ್ಯ ಸಂಕೀರ್ಣದ ಭಾಡಿಗೆದಾರರು ಮೊದಲು
ಸಾಮಾನ್ಯ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ಅಥವಾ Right of First refusal ಆಯ್ಕೆ ಮಾಡಿಕೋಡುವ ಸಂಬಂಧ ಈ ಬಗ್ಗೆ ಲಿಖಿತವಾಗಿ ನಗರ ಸ್ಥಳೀಯ ಸಂಸ್ಥೆಗೆ 1 ವಾರ ಮುಂಚಿತವಾಗಿ ತಿಳಿಯಪಡಿಸತಕ್ಕದ್ದು. ನಿಗಧಿತ ದಿನಾಂಕ ಲಿಖಿತವಾಗಿ ತಿಳಿಸದಿದ್ದಲಿ ಅಂತಹ ಭಾಡಿಗೆದಾರರು Right of First refusal ಆಯ್ಕೆ ಮಾಡಲು ಅವಕಾಶ ಇರುವದಿಲ್ಲಾ. ಹಾಗೂ ಅಂತಹ ಭಾಡಿಗೆದಾರರು ಸಾಮಾನ್ಯ ಬಹಿರಂಗ ಹರಾಜದಲ್ಲಿ ಭಾಗವಹಿಸುತ್ತಾರೆಂದು ಪರಿಗಣಿಸಲಾಗುವದು. ಒಂದು ವೇಳೆ ಹಾಲಿ ಇರುವ ವಾಣಿಜ್ಯ ಸಂಕೀರ್ಣದ ಭಾಡಿಗೆದಾರರು Right of First refusal ಆಯ್ಕೆ ಮಾಡಿಕೊಂಡಲ್ಲಿ ಸಂಧರ್ಭ-3 ರನ್ವಯ ಸಾರ್ವಜನಿಕ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡುವಾಗ ಅಂತಹ ಭಾಡಗಿದಾರರಿಗೆ ಸಾಮಾನ್ಯ ಹರಾಜು ಪ್ರಕ್ರಿಯೆಯಲ್ಲಿ ಅಂತಿಮ ಬಿಡ್ ಮೊತ್ತಕ್ಕೆ Right of First refusal ರಂತೆ ಶೇ.5% ರಷ್ಟು ಹೆಚ್ಚಿಗೆ ನಿಗಧಿಪಡಿಸಿ ಮಳಿಗೆ ಭಾಗಡಿ ಪಡೆಯಲು ಅವಕಾಶ ಇರುತ್ತದೆ. ಸದರಿ ಬಿಡ್ ಮೊತ್ತಕ್ಕೆ ಶೇ. 5% ರಷ್ಟು ಹೆಚ್ಚಿಗೆ ನಿಗಧಿಪಡಿಸಿದ ಬಿಡ್ ಮೊತ್ತವನ್ನು ಪಾವತಿಸಿ ಅಂಗಡಿ ಭಾಡಿಗೆ ಪಡೆಯಲು ಹಾಲಿ ಇರುವ ವಾಣಿಜ್ಯ ಸಂಕೀರ್ಣದ ಭಾಡಿಗೆದಾರರು ಒಪ್ಪದ್ದಿದ್ದಲ್ಲಿ ಸಾಮಾನ್ಯ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ಯಶಸ್ವಿಯಾದ ಅಂತಿಮ ಬಿಡದಾರರಿಗೆ ಮಳಿಗೆಯನ್ನು ಭಾಡಿಗೆ ನೀಡಲಾಗುವದು.
ಎಂದು ಷರತ್ತುಗಳನ್ನು ಹಾಕಿದರು ಇವರ ಷರತ್ತುಗಳ ಪ್ರಕಾರ ಒಪ್ಪಿಕೊಂಡು ಹರಾಜು ಪ್ರಕ್ರಿಯೆಯಲ್ಲಿ ಸುಮಾರು ಜನರು ಭಾಗವಹಿಸಿ ಟೆಂಡರ್ ಫಾರ್ಮ್ ಫೀ 500 ರೂ. ಗಳನ್ನು ಹಾಗೂ ಇ. ಎಂ. ಡಿ. ಮೊತ್ತ 50.000 ರೂಪಾಯಿಗಳನ್ನು ತುಂಬಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದಾಗ ಅದರಲ್ಲಿ ಎಲ್ಲಾದರಕ್ಕಿಂತ ಹೆಚ್ಚಿಗೆ ಠೇವಣಿ ಮೊತ್ತವನ್ನು ಯಾರು ಬೇಡುತ್ತಾರೆ ಅವರಿಗೆ ಅಂಗಡಿಯನ್ನು ನೀಡುತ್ತಿವೆ ಎಂದು ಹೇಳಿ ಹರಾಜು ಪ್ರಕ್ರಿಯೆಯನ್ನು ಮುಂದುವರಿಸಿದರು ಅದರಲ್ಲಿ ನಾನು ಪ್ರಶಾಂತ ಶಿವಪ್ಪ ಅಂಗಡಿ ಎಂಬುವನು ಪುರಸಭೆ ಮಳಿಗೆಯ ವಿದ್ಯಾಚೇತನ ಶಾಲೆ ಹತ್ತಿರ ಇರುವ ನೆಲಮಹಡಿ 49 ನೇ ಅಂಗಡಿಗೆ ಭಾಗವಹಿಸಿ ಬಹಿರಂಗ ಹರಾಜಿನಲ್ಲಿ ಭಾಗವಹಿಸಿ 50.000 ರೂ. ಬೇಡಿದು ಇದೆ. ನಾನು ಬೇಡಿದ ಹಣವನ್ನು ಪುರಸಭೆಗೆ ಡಿ.ಡಿ ಮುಖಾಂತರ ಸಂದಾಯ ಮಾಡಿದ್ದು ಇದೆ. ಇದೂವರೆಗೆ ನಾನು ಬೇಡಿದ ಮಳಿಗೆಯನ್ನು ಕೊಟ್ಟಿರುವುದಿಲ್ಲ.ನಾನು ಬೇರೆ ಕಡೆಯಿಂದ ಸಾಲ ಮಾಡಿ ಪುರಸಭೆಗೆ ಅಂಗಡಿಯ ಸಲುವಾಗಿ ಟೆಂಡರ್ ಫಾರ್ಮ್ ಫೀ 500 ರೂ ಹಾಗೂ 50000 ಗಳನ್ನು ಡಿ.ಡಿ ಮುಖಾಂತರ ತುಂಬಿದ್ದು ಇರುತ್ತದೆ .

ಕೆಲವು ದಿನಗಳ ನಂತರ ಪುರಸಭೆಗೆ ಹೋಗಿ ಹರಾಜನಲ್ಲಿ ಪಡೆದಂತ ಅಂಗಡಿಯನ್ನು ಕೊಡಿ ಎಂದು ಕೇಳಿದಾಗ ಪುರಸಭೆಯ ಮುಖ್ಯಾ ಅಧಿಕಾರಿ ರವಿ ಬಾಗಲಕೋಟೆ ಅವರು ನಿಮಗೆ ನೀಡುತ್ತೇವೆ ಸ್ವಲ್ಪ ತಡೆಯಿರಿ ಮೊದಲಿನ ಬಾಡಿಗೆದಾರರು ಕೋರ್ಟಿಗೆ ಹೋಗಿದ್ದಾರೆ ಕೋರ್ಟ್ ಕೇಸ್ ಮುಗಿದ ನಂತರ ನಿಮಗೆ ಅಂಗಡಿಯನ್ನು ನೀಡುತ್ತಿವೆ ಎಂದು ಹೇಳಿದರು.

ಸುಮಾರು 2 ವರ್ಷ ಕಳೆದು ನಂತರ ನಮಗೆ ಅಂಗಡಿ ಕೋಡಿ ಅಂತ ಹೋದಾಗ ಪುರಸಭೆ ಸಿಬ್ಬಂದಿ ನೀವು ಕೊಟ್ಟಂತಹ ಡಿಡಿ ಅವಧಿ ಮುಗಿದಿದೆ ಬೇರೆ ಡಿಡಿ ಕೊಡಿ ಎಂದು ನನ್ನ ಡಿಡಿಯನ್ನು ನನಗೆ ವಾಪಸ್ ನೀಡಿ ನಿಮಗೆ ಅಂಗಡಿ ನೀಡುತ್ತೇವೆ ಸ್ವಲ್ಪ ದಿನ ಕಾಯಿರಿ ಅಂತ ಹೇಳಿದರು .

ಪುರಸಭೆ ಷರತ್ತುಗಳ ನಿಯಮ ನಂಬರ್ 6ರ ಪ್ರಕಾರ ತಮಗೆ ಮಂಜೂರಿಸಲಾದ ಮಳಿಗೆಯ ಬಾಡಿಗೆಯನ್ನು 10ನೇ ತಾರೀಖಿನ ಒಳಗಾಗಿ ಸಂದಾಯ ಮಾಡತಕ್ಕದ್ದು. ತಪ್ಪಿದಲ್ಲಿ ನಿಯಮಾನುಸಾರ ಬಡ್ಡಿ ಮತ್ತು ದಂಡ ವಸೂಲಿಸಲಾಗುವುದು. ಎಂದು ಹೇಳಿದವರು
3 ವರ್ಷ ಕಳೆದರೂ ಕೂಡ ನನಗೆ ಅಂಗಡಿ ನೀಡದೇ ನಾನು ತುಂಬಿದ 50,000 ರೂ. ಗಳಿಗೆ ಇದುವರೆಗೂ ನನಗೆ ಅಂಗಡಿ ಕೊಟ್ಟಿಲ್ಲ ಹಾಗೂ ನಾನು ತುಂಬಿದ ಹಣಕ್ಕೆ ಬಡ್ಡಿ ಮತ್ತು ದಂಡ ಯಾವುದು ಇಲ್ಲ ಪುರಸಭೆಯವರಿಗೆ ಒಂದು ನಿಯಮ ಸಾರ್ವಜನಿಕರಿಗೊಂದು ನಿಯಮ.
ಪುರಸಭೆ ಷರತ್ತುಗಳ ನಿಯಮ ನಂಬರ್ 9ರ ಪ್ರಕಾರ ಉಪಬಾಡಿಗೆಯಿಂದ ನೀಡಬಾರದು. ಎಂದು ಹೇಳಿದ್ದೀರಿ ಇದುವರೆಗೆ ಉಪಬಾಡಿಗೆ ನೀಡಿದವರ ಮೇಲೆ ಏನು ಕ್ರಮ ಕೈಗೊಂಡಿರಿ ?

ಪುರಸಭೆ ಷರತ್ತುಗಳ ನಿಯಮ ನಂಬರ್ 13ರ ಪ್ರಕಾರ ಮಾದಕ ಪದಾರ್ಥ, ಮಾಂಸದ ಅಂಗಡಿ, ಸ್ಫೋಟಕ ವಸ್ತುಗಳು ಮತ್ತು ಶಬ್ದ ಮಾಲಿನ್ಯ ಉಂಟು ಮಾಡುವ ವ್ಯಾಪಾರ ವಹಿವಾಟನ್ನು ಬಿಟ್ಟು ನಡೆಸತಕ್ಕದ್ದು. ಎಂದು ಹೇಳಿದ್ದೀರಿ ಇವರ ಮೇಲೆ ಏನು ಕ್ರಮ ಕೈಗೊಂಡಿರಿ ?

ಮತ್ತೆ ಪುರಸಭೆ ವ್ಯಾಪ್ತಿಯಲ್ಲಿ ಇರತಕ್ಕಂತಹ ಮಳಿಗೆಗಳ ಬಹಿರಂಗ ಹರಾಜು ಪ್ರಕಟಣೆ ಎಂದು ದಿನಾಂಕ. 27-12-2024 ರಲ್ಲಿ ಪುರಸಭೆ ಮುಖ್ಯಾಧಿಕಾರಿಗಳಾದ ಈರಣ್ಣ ಗುಡದಾರಿ ಹರಾಜು ಪ್ರಕ್ರಿಯೇ ಪುರಸಭೆ ಆವರಣದಲ್ಲಿ ಜರಗಿಸಲಾಗುವುದು ಎಂದು ಪ್ರಕಟಣೆ ತಿಳಿಸಿದರು. ದಿನಾಂಕ. 27-12-2024 ರಂದು ಸನ್ಮಾನ್ಯ ಶ್ರೀ ಮನಮೋಹನ ಶಿಂಗ ಪ್ರಧಾನ ಮಂತ್ರಿಗಳು ಇವರು ನಿಧನವಾಗಿದ್ದರಿಂದ ಸದರಿ ಲೀಲಾವು ದಿನಾಂಕವನ್ನು 11-02-2025 ರಂದು ಮಂಗಳವಾರ ಬೆಳಗ್ಗೆ 11 ಗಂಟೆಗೆ ಪುರಸಭೆಯ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು ಸದರಿ ಲೀಲಾ ವಿನಲ್ಲಿ ಭಾಗವಹಿಸಲು ತಿಳಿಸಿದರು. ಹರಾಜು ಪ್ರಕಟಣೆಯ ಪ್ರಕಾರ ಮತ್ತೆ ಸಾರ್ವಜನಿಕರು ಮಳಿಗೆಗಳ ಬಹಿರಂಗ ಹರಾಜುವಿನಲ್ಲಿ ಭಾಗವಹಿಸಿ ಟೆಂಡರ್ ಫಾರ್ಮ್ ಫೀ 500 ರೂ ಹಾಗೂ ಇ. ಎಂ. ಡಿ. ಮೊತ್ತ 30.000 ರೂಪಾಯಿಗಳನ್ನು ತುಂಬಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದಾಗ ಅದರಲ್ಲಿ ಎಲ್ಲಾದರಕ್ಕಿಂತ ಹೆಚ್ಚಿಗೆ ಠೇವಣಿ ಮೊತ್ತವನ್ನು ಯಾರು ಬೇಡುತ್ತಾರೆ ಅವರಿಗೆ ಅಂಗಡಿಯನ್ನು ನೀಡುತ್ತಿವೆ ಎಂದು ಹೇಳಿ ಹರಾಜು ಪ್ರಕ್ರಿಯೆಯನ್ನು ಮುಂದುವರಿಸಿದರು ಅದರಲ್ಲಿ ನಾನು ಪ್ರಶಾಂತ ಶಿವಪ್ಪ ಅಂಗಡಿ ಎಂಬುವನು ಪುರಸಭೆ ಮಳಿಗೆಯ ಅರಿಬೆಂಚಿ ಪೆಟ್ರೋಲ್ ಪಂಪ್ ಹತ್ತಿರ ನೆಲಮಹಡಿ ಮಳಿಗೆಯ ನಂಬರ 11 ನೇ ಅಂಗಡಿಗೆ ಭಾಗವಹಿಸಿ ಬಹಿರಂಗ ಹರಾಜಿನಲ್ಲಿ 65572 ರೂ. ಬೇಡಿದು ಇದೆ. ನಾನು ಬೇಡಿದ ಹಣವನ್ನು ಪುರಸಭೆಗೆ ಡಿ.ಡಿ ಮುಖಾಂತರ ಸಂದಾಯ ಮಾಡಿದ್ದು ಇದೆ. ಇದೂವರೆಗೆ ನಾನು ಬೇಡಿದ ಮಳಿಗೆಯನ್ನು ಕೊಟ್ಟಿರುವುದಿಲ್ಲ. ಸುಮಾರು ಒಂದು ವರ್ಷ ಕಳೆದರೂ ಹರಾಜಿನಲ್ಲಿ ಪಡೆದಂತ ಅಂಗಡಿಯನ್ನು ನೀಡದೆ ಇರುವುದು ಯಾಕೆ ಎಂಬುದು ಪ್ರಶ್ನೆಯಾಗಿದೆ?

ಇದರಲ್ಲಿ ರಾಜಕೀಯ ಕೈವಾಡ ಇದೆಯೇನೋ?

ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಇದರ ಬಗ್ಗೆ ಅರ್ಜಿ ಸಲ್ಲಿಸಿದರು ಜಿಲ್ಲಾಧಿಕಾರಿಗಳು ಮೌನ ಯಾಕೆ ಇದಾರೆ ಎಂಬುದು ಪ್ರಶ್ನೆ?

ಅಂಗಡಿ ನೀಡದೇ ಹೋದಲ್ಲಿ ಅಂಗಡಿಗಳನ್ನು ಹರಾಜು ಏಕೆ ಮಾಡಿದರು?

ಟೆಂಡರ್ ಫಾರ್ಮ್ ಫೀ ರೂ.500 ಸಲುವಾಗಿನಾ ?

ಹರಾಜು ಗೋಂಡ ಅಂಗಡಿ ಮೊದಲಿನವರಿಗೆ ಏಕೆ ನೀಡಿದರು ಅಲ್ಲಿ ಭ್ರಷ್ಟಾಚಾರ ನಡೆದಿದೆಯಾ?

ಹಾಗಾದರೆ ಹರಾಜಿನಲ್ಲಿ ಭಾಗವಹಿಸಿದವರ ಗತಿ ಏನು?

ಕೋರ್ಟ್ ಕೇಸ್ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಅರ್ಜಿ ಸಲ್ಲಿಸಿದರೆ ಯಾಕೆ ಮಾಹಿತಿ ನೀಡುತ್ತಿಲ್ಲ ಸಂಪೂರ್ಣ ಭ್ರಷ್ಟಾಚಾರ ಮುಳುಗಿದೆ ಎಂದು ಸಂಶಯ ವ್ಯಕ್ತವಾಗ್ತಾ ಇದೆ.

ರಾಮದುರ್ಗ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರತಕ್ಕಂತ ಅಂಗಡಿಗಳನ್ನು ಹರಾಜು ಮಾಡಿದ್ದು ಅದರಲ್ಲಿ ನಾನು 2021 ರಿಂದ ಹಿಡಿದು 2025 ರವರೆಗೆ ಮೂರು ಸಲ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು ಅದರಲ್ಲಿ 49ನೇ ಅಂಗಡಿ ಹಾಗೂ 11ನೇ ಅಂಗಡಿ ಹರಾಜ ನಲ್ಲಿ ಪಡೆದಿದ್ದು ಇರುತ್ತದೆ ಆದರೆ ಎಲ್ಲಾ ಅಮೌಂಟು ತುಂಬಿಸಿಕೊಂಡು ಇದುವರೆಗೂ ನನಗೆ ಅಂಗಡಿ ನೀಡಿರುವುದಿಲ್ಲ ಇದರ ಬಗ್ಗೆ ಸಾಕಷ್ಟು ಬಾರಿ ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಿದರು ಕೂಡ ಇದುವರೆಗೆ ನನಗೆ ಯಾವುದೇ ಉತ್ತರ ಬಂದಿಲ್ಲ ಹಾಗಾದರೆ ನಮಗೆ ಅಂಗಡಿ ಕೊಡುವುದು ಯಾವಾಗ ಎಂಬುವುದು ಪ್ರಶ್ನೆಯಾಗಿದೆ ?

About The Author