ಬೆಳಗಾವಿ ಕೆ.ಎಲ್.ಇ ಛತ್ರಿಯ ಸಮೀವ ಕೊಲ್ಲಾಮರದಿಂದ ಧಾರವಾಡ ಕಡೆಗೆ ಸಾಗಿದ ರಾಷ್ಟ್ರೀಯ ಹೆದ್ದಾರಿ-48 ನೇದ್ದರ ಮೇಲೆ ಕಮ್ಲ ಬಣ್ಣದ ಕೀಯಾ ನೊನೆಟ್ ಕಾರ್ ನಂ. ಕೆಎ-25-ಎಮ್‌ಡಿ-6301 ನೇದ್ದರಲ್ಲಿ ಯಾರೋ ಇಬ್ಬರು ವ್ಯಕ್ತಿಗಳು ಕಮ್ಬ ಬಣ್ಣದ ಬ್ಯಾಗನಲ್ಲಿ ಪಿಸ್ತೂಲಗಳನ್ನು ಹಾಗೂ ಮದ್ದುಗುಂಡುಗಳನ್ನು ಇಟ್ಟುಕೊಂಡು ಹೈವೇ ಬದಿಗೆ ಕಾರನ್ನು ನಿಲ್ಲಿಸಿಕೊಂಡು ನಿಂತಿರುತ್ತಾರೆ ಅಂತಾ ಖಚಿತ ಮಾಹಿತಿಯನ್ನಾಧರಿಸಿ. ಶ್ರೀ ನಂತೋಷ ನತ್ಯನಾಯಿಕ ಎಸಿಪಿ ಮಾರ್ಕೇಟ್ ಉವವಿಭಾಗ ರವರು ಮಾರ್ಗದರ್ಶನ ಮೆರೆಗೆ ಶ್ರೀ. ಬಿ. ಆರ್. ಗಡ್ಡಕರ ಪಿಐ ಮಾಳಮಾರುತಿ ಠಾಣೆ ರವರ ನೇತೃತ್ವದಲ್ಲಿ ಶ್ರೀ ಹೊನ್ನಪ್ಪಾ ತಳವಾರ ಪಿ.ಎಸ್.ಐ ರವರು ತಮ್ಮ ಅಧೀನ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆರೋಪಿತರಾದ
1) ರವೀಂದ್ರ ಕುಂತಿನಾಥ ನಾಯಿಕ(37)
ಸಾ: ಅಂಗನೂರು
ತಾ: ಮೀರಜ ಜಿ:ಸಾಂಗಲಿ (ಮಹಾರಾಷ್ಟ್ರ)
2) ಶಾಹೀದ್ ರಯೀಸೊಹಮ್ಮದ್ ಪಟೇಲ್(21) ಸಾ: ಅಂಗನೂರು ತಾ: ಮೀರಜ ಜಿ:ಸಾಂಗಲಿ (ಮಹಾರಾಷ್ಟ್ರ)
ಇವರಿಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿ, ಅವರಿಂದ ಯಾವುದೇ ಅಧಿಕೃತ ಲೈಸನ್ ಇರದ 1) 2-ಕಂಟ್ರಿಮೇಡ ಪಿಸ್ತೂಲ ಅ.ಕಿ ರೂ.4,000/- 2) 4-ಜೀವಂತ ಗುಂಡು-ಮದ್ದುಗಳು 3) 8 ಜಿಬಿ ಮೆಮೊರಿ ಕಾರ್ಡ ಅ.ಕಿ ರೂ. 200/- 4) ಐಫೋನ್ ಅ.ಕಿ ರೂ.70.000/- 5) ಎಚ್‌ಎಮ್‌ಡಿ ಕೀಪ್ಯಾಡ್ ಮೊಬೈಲ್ ಫೋನ್ ರೂ.2000/- 6) ಕಿಯಾ ಸೊನೆಟ್ ಕಾರು ಅ.ಕಿ ರೂ.9.00,000/- ಸಮೇತ ಸಿಕ್ಕಿದ್ದನ್ನು ಜಪ್ತಪಡಿಸಿಕೊಂಡು ಆರೋಪಿತರ ವಿರುದ್ಧ ಮಾಳಮಾರುತಿ ಪೊಲೀಸ್ ಠಾಣಿ ಪ್ರ ಸಂ.22/2026 ಕಲಂ.61(1) ಸಹ ಕಲಂ 3(5) ಬಿಎನ್‌ಎಸ್-2023 ಹಾಗೂ ಕಲಂ 25(1ಎ), 29(ಎ)&(ಬಿ) ಇಂಡಿಯನ್ ಆರ್ಮ ಆಕ್ಷ 1959 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಿ, ಪ್ರಕರಣದ ತನಿಖೆ ಮುಂದುವರೆಸಲಾಗಿದೆ.
ಈ ಆರೋಪಿತರನ್ನು ವಶಕ್ಕೆ ವಡೆದುಕೊಂಡು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿದ ಪಿ.ಐ. ಶ್ರೀ. ಬಿ ಆರ್.ಗಡ್ಡಕರ, ಶ್ರೀ. ಹೊನ್ನಪ್ಪ ತಳವಾರ ಪಿಎಸ್‌ಐ, ಶ್ರೀ ಶ್ರೀಶೈಲ್ ಹುಳಗೇರಿ ಪಿ.ಎಸ್.ಐ, ಶ್ರೀ ಉದಯ ಪಾಟೀಲ ಪಿ.ಎಸ್.ಐ. ಶ್ರೀ ಪಿ. ಎಮ್. ಮೋಹಿತೆ ಪಿ.ಎನ್.ಐ ಹಾಗೂ ಸಿಬ್ಬಂದಿಯವರಾದ ಠಾಣೆಯ ಸಿಬ್ಬಂದಿಯವರಾದ ಶ್ರೀ ಬಿ. ಎಫ್. ಬಸ್ತವಾಡ ಎಎಸ್‌ಐ, ಅರುಣ ಕಾಂಬಳೆ, ಸಿ. ಐ. ಚಿಗರಿ, ಮಾರುತಿ ಕುರೇರ.. ಕೆ. ಬಿ. ಗೌರಾಣಿ, ಸಿ. ಜೆ. ಚಿನ್ನವ್ವಗೋಳ, ಮಲ್ಲಿಕಾರ್ಜುನ ಗಾಡವಿ, ಮಹೇಶ ವಡೆಯರ್, ಪ್ರಕಾಶ ಕೊನೆಣ್ಣವರ, ಗೋವಾಲ ಲಟ್ಟಿ, ದೀವಕ ಬಿಚಗತ್ತಿ ಹಾಗೂ ತಾಂತ್ರಿಕ ವಿಭಾಗ ಸಿಬ್ಬಂದಿಯರಾದ ರಮೇಶ ಅಕ್ಕಿ, ಮಹಾದೇವ ಕಾಶಿದ್ ಇವರ ಕಾರ್ಯವನ್ನು ಪೊಲೀಸ್ ಆಯುಕ್ತರು, ಬೆಳಗಾವಿ ನಗರ ಹಾಗೂ ಡಿಸಿಪಿ ರವರುಗಳು: ಶ್ಲಾಘಿಸಿರುತ್ತಾರೆ.



