ಗದಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಾದ ಸಾವಿತ್ರಿ ಮೇಡಂ ಹಾಗೂ ಮೋಹನ್ ಲಾಲ ಇವರ ಗಮನಕ್ಕೆ ತಂದರು ಕೂಡ ಇದುವರೆಗೂ ಬೋಟ್ ಬಳಸುವವರ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ ಸಾಕಷ್ಟು ಬಾರಿ ಅರ್ಜಿ ಸಲ್ಲಿಸಿದರೆ ಇದ್ದವರಿಗೆ ಉತ್ತರ ಕೂಡ ಇಲ್ಲ.

ರೋಣ ಹಾಗೂ ನರಗುಂದ ತಾಲೂಕಿನ ಸುತ್ತಮುತ್ತ ಇದ್ದಂತ ಲೀಸ್ ಪಾಯಿಂಟ್ ನಲ್ಲಿ ಲೀಸ್ ಹೋಲ್ಡರ್ ಬೋಟ್ ಬಳಸಿ ಗಣಿಗಾರಿಕೆ ನಡೆಸುತ್ತಿದ್ದಾರೆ. ತಕ್ಷದಿಂದಲೇ ಅದನ್ನು ನಿಲ್ಲಿಸಬೇಕು.
ಕಾನೂನುಬಾಹಿರವಾಗಿ ನದಿಗಳಲ್ಲಿ ಮರಳು ತೆಗೆಯಲು ಬೋಟ್ಗಳನ್ನು ಬಳಸಲಾಗುತ್ತಿದೆ, ನಡುಭಾಗದಲ್ಲಿ ಬೃಹತ್ ಗಾತ್ರದ ಬೋಟ್ ನಿಲ್ಲಿಸಿ, ಅದರಲ್ಲಿ ಬಾರಿ ದೊಡ್ಡ ಪ್ರಮಾಣದ ಪಂಪ್ ಅಳವಡಿಸಲಾಗಿದೆ. ಪಂಪ್ಗೆ ಪೈಪ್ ಅಳವಡಿಸಿ ದಡಕ್ಕೆ ತಲುಪಿಸಲಾಗಿದೆ.

ನದಿಗಳಲ್ಲಿ ಸರಕಾರದ ಅನುಮತಿಯಿಲ್ಲದೆ, ಬೋಟ್ಗಳನ್ನು ಬಳಸಿ ಮರಳನ್ನು ಅಕ್ರಮವಾಗಿ ತೆಗೆಯುವುದು.
ತಾಲೂಕಿನ ಹಲವು ಕಡೆಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ಕಾನೂನು ಕ್ರಮದ ಭಯವಿಲ್ಲದೇ ನಿರಂತರವಾಗಿ ನಡೆಯುತ್ತಿದೆ.
ಈ ಚಟುವಟಿಕೆಗಳು ಪರಿಸರಕ್ಕೆ ಹಾನಿ ಮಾಡುತ್ತವೆ ಮತ್ತು ನದಿಯ ಮೂಲಸೌಕರ್ಯಕ್ಕೆ ಧಕ್ಕೆಯುಂಟುಮಾಡುತ್ತವೆ.
ನೀರಿನ ನಡುವೆ ಬೋಟ್ ಮೋಟಾರ್:
ರೋಣ ಹಾಗೂ ನರಗುಂದ ತಾಲೂಕಿನ ವಾಸನ, ಕಲ್ಲಾಪುರ, ಶಿರೋಳ, ಮಣಸಗಿ, ಹೊಳೆಆಲೂರ ಹಾಗೂ ಇನ್ನೂ ಅನೇಕ ಕಡೆ ಲೀಸ್ ಪ್ಯಾಂಟ್ ಓನರ್ ಹಾಗೂ ಕೆಲವೊಂದು ಕಡೆ ಅಕ್ರಮ ದಂಧೆ ಕೋರರು, ಬೋಟ್ ಬಳಸಿ ಮರಳು ದಂಧೆ ನಡೆಸುತ್ತಿದ್ದಾರೆ
ನದಿಯ ಪರಿಸರ ವ್ಯವಸ್ಥೆ ನಾಶ : ನದಿಯ ತಳದಿಂದ ಮರಳು ತೆಗೆಯುವುದರಿಂದ ನದಿಪಾತ್ರದ ಪರಿಸರ ನಾಶವಾಗಿ, ನದಿಯ ಆಳ ಮತ್ತು ಅಗಲ ಬದಲಾಗುತ್ತದೆ.
ನೀರು ಕಲುಷಿತ: ಮರಳು ಗಣಿಗಾರಿಕೆಯಿಂದ ನದಿ ನೀರು ಮಣ್ಣಿನಿಂದ ಕಲುಷಿತಗೊಂಡು, ಕುಡಿಯುವ ನೀರು ಮತ್ತು ಕೃಷಿಗೆ ಬಳಕೆಯಾಗದಂತೆ ಆಗುತ್ತದೆ.
ಜಲಚರಗಳ ನಾಶ : ನದಿ ಮತ್ತು ಹಿನ್ನೀರಿನಲ್ಲಿ ವಾಸಿಸುವ ಮೀನುಗಳು ಮತ್ತು ಇತರ ಜೀವಿಗಳು ತಮ್ಮ ಆವಾಸಸ್ಥಾನ ಕಳೆದುಕೊಳ್ಳುತ್ತವೆ.
ಭೂಕುಸಿತ : ನದಿಯ ದಡದಿಂದ ಮರಳು ತೆಗೆದರೆ ನದಿ ದಡ ಕುಸಿಯುವ ಅಪಾಯವಿರುತ್ತದೆ, ಇದು ಕೃಷಿ ಭೂಮಿಗೆ ಹಾನಿ ಉಂಟುಮಾಡುತ್ತದೆ.
ನದಿಯ ಹರಿವಿನ ದಿಶೆ ಬದಲಾಗಿ, ನೀರು ಹರಿಯುವ ರೀತಿ ಬದಲಾಗಿ ಕೃಷಿ ಭೂಮಿಗೆ ನೀರು ಸಿಗದೆ ಸಮಸ್ಯೆ ಉಂಟಾಗುತ್ತದೆ. ನಡುಭಾಗದಲ್ಲಿ ಬೃಹತ್ ಗಾತ್ರದ ಬೋಟ್ ನಿಲ್ಲಿಸಿ, ಅದರಲ್ಲಿ ಬಾರಿ ದೊಡ್ಡ ಪ್ರಮಾಣದ ಪಂಪ್ ಅಳವಡಿಸಲಾಗಿದೆ. ಪಂಪ್ಗೆ ಪೈಪ್ ಅಳವಡಿಸಿ ದಡಕ್ಕೆ ತಲುಪಿಸಲಾಗಿದೆ. ಮೋಟಾರ್ ಪಂಪ್ ಚಾಲನೆ ಮಾಡುತ್ತಿದ್ದಂತೆಯೇ ನೀರಿನ ತಳದಲ್ಲಿ ನಿಂತಿರುವ ಮರಳನ್ನು ಪಂಪ್ ದಡಕ್ಕೆ ತಂದು ರಾಶಿ ಹಾಕುತ್ತದೆ. ಕೇವಲ ಗಂಟೆಯೊಳಗಾಗಿ ಐದಾರು ಟಿಪ್ಪರ್ ಲೋಡಿನಷ್ಟು ಮರಳನ್ನು ಮೇಲಕ್ಕೆತ್ತುವ ಸಾಮರ್ಥ್ಯವನ್ನು ಈ ಮೋಟಾರ್ ಹೊಂದಿದೆ.
ಅಕ್ರಮ ದಂಧೆ ನಡೆಯುತ್ತಿದ್ದರೂ, ಇಲಾಖೆಯ ಅಧಿಕಾರಿಗಳು ಅದನ್ನು ತಡೆಯುವ ಗೋಜಿಗೆ ಹೋಗುತ್ತಿಲ್ಲ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ , ಪೊಲೀಸ್ ಇಲಾಖೆ , ಕಂದಾಯ ಇಲಾಖೆ , ಅಧಿಕಾರಿಗಳಿಗೆ ಅಕ್ರಮದ ಕುರಿತು ಸಂಪೂರ್ಣ ಮಾಹಿತಿ ಇದ್ದರೂ, ಮೌನಕ್ಕೆ ಶರಣಾಗಿದ್ದಾರೆ ದಾಳಿ ಮಾಡಿ, ಅಕ್ರಮ ಬೋಟ್ಗಳನ್ನು ಏಕೆ ವಶಪಡಿಸಿಕೊಂಡಿಲ್ಲ.
ಅಕ್ರಮ ಮರಳು ಗಣಿಗಾರಿಕೆ ಗದಗ ಜಿಲ್ಲೆಯಲ್ಲಿ ತಲೆಯೆತ್ತಿ ನಿಂತಿದೆ. ಪರಿಸರಕ್ಕೆ ಹಾನಿ ಮಾಡುತ್ತಿದೆ ಬೇಕಾಬಿಟ್ಟಿ ಯಂತ್ರ ಬಳಸಿ ಮರಳು ತೆಗೆಯುತ್ತಿದ್ದರೂ, ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಅಕ್ರಮ ನಡೆಸಿರುವವರ ವಿರುದ್ಧ ಹಾಗೂ ಅಕ್ರಮ ತಡೆಯುವಲ್ಲಿ ವಿಫಲರಾಗಿರುವ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು.
ಕೆಲ ಪ್ರಭಾವಿ ಅಧಿಕಾರಿಗಳು ಅಕ್ರಮಕ್ಕೆ ಬೆಂಬಲವಾಗಿ ನಿಂತಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆ ಕೇಳಿ ಬಂದಿದೆ.


