ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸಿದ್ಧಾಳ ಗ್ರಾಮದಲ್ಲಿ ಕೆನರಾ ಬ್ಯಾಂಕ್ ಕೇಂದ್ರ ಕಚೇರಿ ಬೆಂಗಳೂರ, ನಬಾರ್ಡ ಕೇಂದ್ರ ಕಚೇರಿ ಮುಂಬೈ, ಕೆನರಾ ಆರ್ಥಿಕ ಸಲಹಾ ಟ್ರಸ್ಟ್, ಅಮೂಲ್ಯ ಆರ್ಥಿಕ ಸಾಕ್ಷರತೆ ಕೇಂದ್ರ ಹಾಗೂ ಗ್ರಾ.ಪಂ. ಗೊಡಚಿ ಇವುಗಳ ಸಂಯುಕ್ತ ಆಶ್ರಯದಲ್ಲಿ ರೈತರಿಗಾಗಿ ಆರ್ಥಿಕ ಸಾಕ್ಷರತೆ ಹಾಗೂ ಡಿಜಿಟಿಲ್ ವ್ಯವಹಾರ ಕುರಿತಾದ ಕಾರ್ಯಕ್ರಮದಲ್ಲಿ ನಬಾರ್ಡ ಡಿ.ಡಿ.ಎಂ. ಅಭಿನವ ಯಾದವ ಭಾಗವಹಿಸಿ ಅವರು ಮಾತನಾಡಿದರು.
ನಬಾರ್ಡದಿಂದ ಎಲ್ಲ ರಾಷ್ಟ್ರೀಕೃತ ಬ್ಯಾಂಕಗಳ ಮೂಲಕ ಸಾಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ರೈತರು ತಮ್ಮ ಜಮೀನುಗಳಲ್ಲಿ ತಮ್ಮ ಕೃಷಿ ಸರಕುಗಳನ್ನು ದಾಸ್ತಾನು ಮಾಡಲು ಗೋದಾಮಿ ನಿರ್ಮಿಸಲು, ಹೈನುಗಾರಿಕೆಗೆ ಡೈರಿ ನಿರ್ಮಾಣ, ಗೋಟ್ ಫಾರ್ಮ ನಿರ್ಮಾಣ, ರೈತರಿಗೆ ಕೃಷಿ ಸಾಲ ಸೇರಿದಂತೆ ಅನೇಕ ಯೋಜನೆಗಳಿದ್ದು, ಅವುಗಳ ಸದುಪಯೋಗ ಪಡೆಸಿಕೊಳ್ಳಬೇಕೆಂದು ಅವರು ತಿಳಿಸಿದರು.
ಬೆಳಗಾವಿಯ ಎಲ್.ಡಿ.ಎಂ. ಪ್ರಶಾಂತ ಘೋಡಕೆ ಮಾತನಾಡಿ, ಎಲ್ಲ ಸ್ತರದ ಜನಾಂಗದವರು ಆರ್ಥಿಕ ಸಾಕ್ಷರತೆ ಜ್ಞಾನ ಪಡೆದುಕೊಳ್ಳಬೇಕು.
ಸಾಮಾಜಿಕ ಸುರಕ್ಷಾ ವಿಮಾ ಯೋಜನೆಗಳನ್ನು ಮಾಡಿಸಬೇಕು. ಸೈಬರ್ ಕ್ರೈಂ ಬಗ್ಗೆ ಜಾಗೃತರಾಗಿರಬೇಕು. ಅಪರಿಚರತಿಂದ ಬರುವ ಪೋನ್ ಕರೆ ಹಾಗೂ ಸಂದೇಶಗಳಿಗೆ ಪ್ರತಿಕ್ರಿಯೇ ನೀಡಬಾರದು ಎಂದು ಮಾಹಿತಿ ನೀಡಿದರು.
ಅಮೂಲ್ಯ ಆರ್ಥಿಕ ಸಾಕ್ಷರತೆ ಕೇಂದ್ರ ಸಮಾಲೋಚಕ ಮಲ್ಲಿಕಾರ್ಜುನರಡ್ಡಿ ಗೊಂದಿ ಆರ್ಥಿಕ ಸಾಕ್ಷರತೆ ಹಾಗೂ ನಗದು ರಹಿತ ವ್ಯವಹಾರ ಮಾಡುವ ಬಗ್ಗೆ ಅನುಸರಿಸುವ ಕ್ರಮ ಮತ್ತು ಜಾಗೃತಿ ಬಗ್ಗೆ ತಿಳುವಳಿಕೆ ನೀಡಿದರು.
ಈ ಸಂದರ್ಭದಲ್ಲಿ ಪಿ.ಕೆ.ಪಿ.ಎಸ್. ಅಧ್ಯಕ್ಷ ಬಸನಗೌಡ ದ್ಯಾಮನಗೌಡ್ರ, ಪಿ.ಡಿ.ಓ. ಮಂಜುನಾಥ ದೇವರಡ್ಡಿ, ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮದುರ್ಗ, ತಾಲೂಕು ಅಧ್ಯಕ್ಷ ಸುರೇಶ ಗುಂಜೇರಿ, ಗ್ರಾಮದ ಮುಖಂಡರಾದ ರಾಚನಗೌಡ ಪಾಟೀಲ, ನಿಂಗಪ್ಪ ಜೋಗಿ, ಬಸವರಾಜ ಯಾದವಾಡ ಸೇರಿದಂತೆ ಮತ್ತಿತರರಿದ್ದರು.



