ಲವ್ ಜಿಹಾದ್ ಮತಾಂತರ ದಂತಹ ನೈಜ ಘಟನೆಗಳ ಆಧಾರಿತ ಕೇರಳ ಸ್ಟೋರಿ 2 ಚಲನಚಿತ್ರ ವನ್ನು ಸೋಮವಾರ 16/03/2026 ರಂದು ರಾಮದುರ್ಗ ನಗರದ ಶ್ರೀನಿವಾಸ ಚಿತ್ರಮಂದಿರ ದಲ್ಲಿ ವಿಶ್ವಹಿಂದೂ ಪರಿಷತ್ – ಭಜರಂಗದಳ ವತಿಯಿಂದ ನಾಲ್ಕು ಆಟಗಳನ್ನು ಉಚಿತವಾಗಿ ಪ್ರದರ್ಶಿಸಲಾಯಿತು. ಹಿಂದೂ ಕಾರ್ಯಕರ್ತರೆಲ್ಲ ಸೇರಿ ಚಿತ್ರಮಂದಿರ ವನ್ನು ಕೇಸರಿ ಧ್ವಜ ಹಾಗೂ ಬಂಟಿಂಗ್ಸ್ ಗಳನ್ನು ಕಟ್ಟುವ ಮೂಲಕ ಉತ್ಸವದ ಕಳೆಯ ವಾತಾವರಣ ಸೃಷ್ಟಿಸಿದ್ದರು ತಾಲೂಕಿನ ಬೇರೆ ಬೇರೆ ಗ್ರಾಮಗಳಿಂದ ಹಿಂದೂ ಕಾರ್ಯಕರ್ತರು ವಾಹನ ಮಾಡಿಕೊಂಡು ತಮ್ಮ ಊರಿನ ಮಹಿಳೆಯರು ಹಾಗೂ ತರುಣಿಯರಿಗೆ ಈ ಚಲನಚಿತ್ರವನ್ನು ತೋರಿಸಿದರು ಮಾಧ್ಯಮದವರು ಸಂದರ್ಶನ ತೆಗೆದುಕೊಳ್ಳುವ ಸಂದರ್ಭದಲ್ಲಿ ಅದೆಷ್ಟೋ ಜನ ತಾಯಂದಿರು ಭಾವುಕರಾಗಿ ಕಣ್ಣೀರು ಹಾಕಿದ್ದು ಅವರ ಮನೋವೇದನೆಯನ್ನು ಹೊರಹಾಕಿತ್ತು ಅದೆಷ್ಟೋ ಹಿಂದೂ ಸಹೋದರಿಯರು ಬಜರಂಗದಳದ ಈ ಕಾರ್ಯವನ್ನು ಶ್ಲಾಘಿಸಿ ತಾವು ಸಹ ಮಹಿಳೆಯರಿಗಾಗಿ ಇರುವ ದುರ್ಗಾವಾಹಿನಿ ಹಾಗೂ ಮಾತೃಶಕ್ತಿ ವಿಭಾಗದಲ್ಲಿ ಸಕ್ರಿಯರಾಗಿ ತಮ್ಮನ್ನು ತೊಡಗಿಸಿಕೊಳ್ಳುವುದಾಗಿ ಹೇಳಿದರು. ಈ ಉಚಿತ ಚಲನಚಿತ್ರ ಪ್ರದರ್ಶನದ ಉದ್ಘಾಟನೆಯನ್ನು ಚಿತ್ರಮಂದಿರದ ಮಾಲೀಕರಾದ ಚನ್ನಬಸು ಹಿರೇರಡ್ಡಿ ಅವರು ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮಾಡಿ ಹಿಂದೂ ಸಮಾಜ ಲವ್ ಜಿಹಾದ್ ನಂತಹ ಷಡ್ಯಂತ್ರ ಗಳ ವಿರುದ್ಧ ಗಟ್ಟಿಯಾಗಿ ನಿಲ್ಲಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ವೆಂಕಟೇಶ ಹಿರೇರಡ್ಡಿ, ಅಮರ ಧೂತ, ಗಂಧಮಾಲಾ ಯಲಿಗೋಡ, ರಾಜು ಕೋಪರ್ಡೇ, ನಾಮದೇವ ಸೋರಿ, ವಿಜಯ ಜೋಷಿ, ಸುನಿತಾ ತಿಮ್ಮನಗೌಡರ, ಕುಬೇರ ಗರಡಿಮನಿ, ರವಿ ಹರವಿ, ರಮೇಶ ಜಲಗೇರಿ, ವಿಶ್ವಹಿಂದೂ ಪರಿಷತ್ ಅಧ್ಯಕ್ಷರಾದ ಪ್ರಕಾಶ ಸೂಳಿಬಾವಿ ಮುಂತಾದ ಹಿಂದೂಪರ ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು
ಬಜರಂಗದಳದಿಂದ ಕೇರಳ ಸ್ಟೋರಿ -2 ಚಲನಚಿತ್ರ ಉಚಿತ ಪ್ರದರ್ಶನ

WhatsApp Group
Join Now


