ಮುದಕವಿ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ಜಾತ್ರೆಯ ನಿಮಿತ್ಯ ಕರಡಿ ಮಜಲು ಪ್ರದರ್ಶನ.

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮುದಕವಿ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ಜಾತ್ರೆಯ ನಿಮಿತ್ಯ ಕರಡಿ ಮಜಲನ್ನು ನಾಗಪ್ಪ ಯಲ್ಲಪ್ಪ ರಕ್ಷಿ ಗುರುಗಳು ಹಾಗೂ ಅವರ ತಂಡದವರು ಜಾತ್ರೆಯಲ್ಲಿ ಪ್ರದರ್ಶಿಸಿದರು.

ಕರಡಿ ಮಜಲು ಉತ್ತರ ಕರ್ನಾಟಕದ ಜನಪ್ರಿಯ ಜಾನಪದ ಕಲೆಯಾಗಿದ್ದು, ಕರಡಿ ವಾದ್ಯ, ಡೊಳ್ಳು, ತಾಳ ಮತ್ತು ಸನಾದಿ ಬಳಸಿ ಪ್ರದರ್ಶಿಸಲಾಗುವ ಲವಲವಿಕೆಯ ವಾದ್ಯ ನೃತ್ಯವಾಗಿದೆ.

ವಾದ್ಯಗಳು: ಕರಡಿ (ಕರಡಿ ಗುಡುಗಿನಂತಿರುವ ವಾದ್ಯ), ಡೊಳ್ಳು, ತಾಳ, ಮತ್ತು ಸನಾದಿ ಮುಖ್ಯವಾದ್ಯಗಳು,

ಪ್ರದರ್ಶನ ಶೈಲಿ: ಕಲಾವಿದರು ಲಯಬದ್ಧವಾಗಿ ಕುಣಿಯುತ್ತಾ, ವಾದ್ಯಗಳನ್ನು ಜೋರಾಗಿ ಬಾರಿಸುತ್ತಾರೆ.

ಪ್ರದೇಶ: ಮುಖ್ಯವಾಗಿ ಬೆಳಗಾವಿ,ಕೊಪ್ಪಳ, ಗದಗ, ಹಾವೇರಿ ಮತ್ತು ಬಳ್ಳಾರಿ ಮುಂತಾದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಈ ಕಲೆ ಹೆಚ್ಚು ಪ್ರಚಲಿತದಲ್ಲಿದೆ.

ಗ್ರಾಮದ ಜಾತ್ರೆಗಳು, ಶುಭ ಸಮಾರಂಭಗಳು, ಮತ್ತು ಸಾಂಸ್ಕೃತಿಕ ಉತ್ಸವಗಳಲ್ಲಿ ಕರಡಿ ಮಜಲು ಪ್ರಮುಖ ಆಕರ್ಷಣೆಯಾಗಿರುತ್ತದೆ,

ಶುಭ ಸಮಾರಂಭ ಹಾಗೂ ಜಾತ್ರೆಗಳಲ್ಲಿ ಕರಡಿ ಮಜಲು ಬೇಕಾದಲ್ಲಿ ಇವರನ್ನು ಸಂಪರ್ಕಿಸಬಹುದು. 9353499014, 9380287304, 9019391542, 6361397050

About The Author