ಸವದತ್ತಿ ನ್ಯಾಯಾಲಯದ ಆವರಣದಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಹವ್ಮಿುಕೊಳ್ಳಲಾಗಿತ್ತು.

WhatsApp Group Join Now

ಸವದತ್ತಿ ತಾಲೂಕಾ ಕಾನೂನು ಸೇವೆಗಳ ಸಮಿತಿ ಹಾಗೂ ನ್ಯಾಯವಾದಿಗಳ ಸಂಘ ಇವರುಗಳ ಸಹಯೋಗದಲ್ಲಿ ದಿನಾಂಕಃ 21-06-2026 ರಂದು ಮುಂಜಾನೆ 07.00 ಗಂಟೆಗೆ ನ್ಯಾಯಾಲಯದ ಆವರಣದಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಹವ್ಮಿುಕೊಳ್ಳಲಾಗಿತ್ತು.

ಹಿರಿಯ ಶ್ರೇಣಿ ಸಿವಿಲ್‍ ನ್ಯಾಯಾಧೀಶರು ಹಾಗೂ ತಾಲೂಕಾ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾದ ಸಿದ್ದರಾಮ, ರವರು ಸಸಿಗೆ ನೀರೆರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಪಾಟಿಸಿದರು. ನಂತರ ಮಾತನಾಡಿದ ಅವರು ಯೋಗದಲ್ಲಿ ಅನೇಕ ವಿಧಗಳಿವೆ, ಪ್ರತಿಯೊಬ್ಬರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಯೋಗವನ್ನು ಅನುಸರಿಸುತ್ತಾರೆ ಮತ್ತು ಅದನ್ನು ವ್ಯಾಖ್ಯಾನಿಸುತ್ತಾರೆ. ಜೂನ್‍ 21 ರಂದು ಪ್ರತಿ ವರ್ಷ ಹವ್ಮಿುಕೊಳ್ಳಲಾಗುವ ಅಂತರಾಷ್ಟ್ರೀಯ ಯೋಗ ದಿನದಂದು ಯೋಗದ ಕುರಿತು ಆಸನಕ್ಕಿಂತ ಹೊರತಾದ ಅನುಸಂಧಾನ ನಮಗೆಲ್ಲ ಸಾಧ್ಯವಾದರೆ ಅದು ಯೋಗ ದಿನಾಚರಣೆಯ ಸಾರ್ಥಕತೆ ಹೌದು ಎಂದು ಹೇಳಿದರು.

ಮುಖ್ಯ ಅತಿಥಿ ಭಾಷಣ ಮಾಡಿದ 1ನೇ ಹೆಚ್ಚುವರಿ ಸಿವಿಲ್‍ ನ್ಯಾಯಾಧೀಶರಾದ ಅರ್ಪಿತಾ ಬಿ ಬೆಲ್ಲದ, ರವರು ಮಾತನಾಡಿ ಯೋಗದ ಮಹತ್ವವನ್ನು ಪ್ರಪಂಚಕ್ಕೆ ಸಾರುವುದಕ್ಕಾಗಿ ಪ್ರತಿ ವರ್ಷ ಜೂನ್‌ 21 ರಂದು ಯೋಗ ದಿನಾಚರಣೆಯನ್ನು ಆಚರಿಸಲಾಗುವುದು. ಯೋಗ ಎನ್ನುವುದು ನಿನ್ನೆ, ಮೊನ್ನೆ ಹುಟ್ಟಿಕೊಂಡ ಸಾಧನೆಯಲ್ಲ. ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಲ್ಲರೂ ಯೋಗವನ್ನು ಮಾಡಿ ಎಂದು ಹೇಳಿದರು.

ಉಪನ್ಯಾಸ ಭಾಷಣ ಮಾಡಿದ ಯೋಗ ಗುರುಗಳಾದ ಶ್ರೀ. ಎಮ್.ಸಿ.ಮಲ್ಲೇಶನವರ ರವರು ಮಾತನಾಡಿ ಯೋಗವು ಅನೂಚಾನವಾಗಿ, ಸಣ್ಣ ಪ್ರಮಾಣದಲ್ಲಿಯೇ ಆದರೂ ನಿಯಮಿತವಾಗಿ ರೂಢಿಸಿಕೊಂಡು ಬಂದಿರುವ ಆಸನ ಪ್ರಾಣಾಯಾಮಗಳು ತಪಸ್ಸಿನಂತೆಯೇ ಸರಿ. ಅವಕ್ಕೆ ಬದುಕಿಗೊಂದು ಶ್ರುತಿ ಹಿಡಿದು ಲಯ ತಪ್ಪದಂತೆ ಮುನ್ನಡೆಸುವ ಶಕ್ತಿ ಇದೆ. ಒಂದೇ ಮಾತಿನಲ್ಲಿ ಹೕೆಳುವುದಾದರೆ ನಿಯಮಿತತೆ ಮತ್ತು ಸಂಯಮ ಇವೆರಡು ಯೋಗದ ಆದ್ಯ ತತ್ವಗಳು. ಯೋಗವೆಂದರೆ ಆಸನ-ಪ್ರಾಣಾಯಾಮಗಳಷ್ಟೆ ಅಲ್ಲದೆ, ಎಂಟು ಅಂಗಗಳಿರುವ ಯೋಗಶಾಸ್ತ್ರವಷ್ಟೆ ಅಲ್ಲದೇ ಅದು ಭಾರತವು ಸಾಕ್ಷಾತ್ಕರಿಸಿಕೊಂಡಿರುವ ಒಂದು ಜೀವನದೃಷ್ಟಿಯಾಗಿದೆ. ಯೋಗವೆನ್ನುವ ಪದವನ್ನು ನಾನಾ ಶಾಸ್ತ್ರಗಳು ಬಳಸಿಕೊಂಡಿವೆ ಎಂದು ಹೇಳಿದರು ಅದರ ಜೊತೆಗೆ ನೆರದಿರುವ ಎಲ್ಲರಿಗೂ ಯೋಗಾಸನಗಳನ್ನು ಮಾಡಿಸಿದರು.

ಕಾರ್ಯಕ್ರಮದಲ್ಲಿ ನ್ಯಾಯವಾದಿಗಳ ಸಂಘದ ಕಾರ್ಯದರ್ಶಿಯಾದ ಎಸ್.ಎಸ್.ಕಾಳಪ್ಪನವರ, ನ್ಯಾಯವಾದಿಗಳಾದ ಎಮ್.ಬಿ.ದ್ಯಾಮನಗೌಡರ, ವಾಯ್.ಎನ್. ಪಾಸ್ತೆ ಇತತರು ಉಪಸ್ಥಿತದ್ದರು.

ನ್ಯಾಯಾಲಯದ ಆಡಳಿತ ಶಿರಸ್ತೆದಾರರಾದ ಎಮ್.ಎ.ಅಂಗಡಿ ರವರು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

About The Author