ಕಾಗವಾಡ ಪೊಲೀಸರಿಂದ ಅಂತರಾಜ್ಯ ಕಳ್ಳರ ಬಂಧನ

WhatsApp Group Join Now

ಬೆಳಗಾವಿ ಜಿಲ್ಲೆ ಕಾಗವಾಡ ಪೊಲೀಸ್ ಠಾಣೆಗೆ ಶ್ರೀಮತಿ ಚೆನ್ನವ್ವಾ ಗಂಡ ರಾಮು ಬಹುರುಪಿ ಸಾ:-ಸಂಕೊನಟ್ಟಿ, ತಾ:-ಅಥಣಿ ಇವರು ಠಾಣೆಗೆ ಹಾಜರಾಗಿ ದಿನಾಂಕ: 19-01-2026 ರಂದು ಪಿರ್ಯಾದಿಯನ್ನು ಕೊಟ್ಟಿದ್ದು ಅದರಲ್ಲಿ ದಿನಾಂಕ: 18-01-2026 ರಂದು 12-30 ಗಂಟೆಯ ಸುಮಾರಿಗೆ ಮಂಗಸೂಳಿ ಗ್ರಾಮದ ಬಸಸ್ಟ್ಯಾಂಡದಲ್ಲಿ ಬಸ್ಸಿನಲ್ಲಿ ಇರುವಾಗ ಯಾರೋ ಕಳ್ಳರು ಪಿರ್ಯಾದಿಯವರ ಕೊರಳಲ್ಲಿ ಧರಿಸಿರುವ 12 ಗ್ರಾಂ ತೂಕದ ಬಂಗಾರದ ತಾಳಿ ಅಕಿ= 1.20.000/-ರೂ ಕಿಮ್ಮತ್ತಿನ ಆಭರಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಅವರ ಮೇಲೆ ನನ್ನದು ಪಿರ್ಯಾದಿ ಇದ್ದು ಮುಂದಿನ ಕಾನೂನಿನ ಕ್ರಮ ಕೈಕೊಳ್ಳಲು ವಿನಂತಿ ಇರುತ್ತದೆ ಅಂತ ವೈಗರೆ ನಮೂದ ಅದೆ ಕಾಗವಾಡ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 13/2026 ಕಲಂ:303[2] ಬಿಎನ್‌ಎಸ್-2023 ನೇದ್ದರಡಿಯಲ್ಲಿ ಪ್ರಕರಣ ದಾಖಲಾಗಿದ್ದು.

ಸದರಿ ಪ್ರಕರಣವನ್ನು ಪತ್ತೆ ಮಾಡಲು ಮಾನ್ಯ ಶ್ರೀ ಕೆ.ರಾಮರಾಜನ ಐಪಿಎಸ್. ಪೊಲೀಸ ಅಧೀಕ್ಷಕರು ಬೆಳಗಾವಿ ಜಿಲ್ಲೆ ಮತ್ತು ಶ್ರೀ ಆರ್.ಬಿ, ಬಸರಗಿ ಹೆಚ್ಚುವರಿ ಪೊಲೀಸ ಅಧೀಕ್ಷಕರು ಬೆಳಗಾವಿ ಜಿಲ್ಲೆ, ಶ್ರೀ ಪ್ರಶಾಂತ ಮುನ್ನೋಳ್ಳಿ ಡಿಎಸ್‌ಪಿ ಅಥಣಿ ರವರ ಮಾರ್ಗದರ್ಶನದಲ್ಲಿ ಶ್ರೀ ಸಂತೋಷ ಹಳ್ಳೂರ ಸಿಪಿಐ ಅಥಣಿ ವೃತ್ತ ರವರ ನೇತೃತ್ವದಲ್ಲಿ ಶ್ರೀ ರಾಘವೇಂದ್ರ ಖೋತ ಪಿಎಸ್‌ಐ ಕಾಗವಾಡ ಇವರ ಮುಂದಾಳತ್ವದಲ್ಲಿ ಅಪರಾಧ ತಂಡವನ್ನು ರಚಿಸಲಾಗಿತ್ತು. ಸದರಿ ಪ್ರಕರಣದಲ್ಲಿ ಆರೋಪಿತರಾದ

1] ಜಾಕಿ @ ಜಕೀರಹ್ಮದ ತಂದೆ ಉಮರದರಾಜ್ ಸಾ:ದೋಹಲಿ ತಾ: ಚಾಂದಪೂರ ಜಿ:ಬುಲೆಂದಶಹರ

2] ಅಪಸನ ಗಂಡ ಇರ್ಶಾದ ಸಾ: ಹಾತಮ್ಮಾಬಾದ ಜಿ:ಬುಲೆಂದಶಹರ

3] ಮೊಬಿನಖಾನ ತಂದೆ ಖಲೀಲಖಾನ ಸಾ: ಕುಚೇಜಾ ತಾ:ಜಿ: ಬುಲೆಂದಶಹರ ರಾಜ್ಯ ಉತ್ತರ ಪ್ರದೇಶ

4] ಇಂದ್ರಜೀತ ತಂದೆ ಲಾಲಸಿಂಗ್ ಸಾ: ಧಮೋಡಾನಾರಾ ತಾ:ಸಿಕಂದರಬಾದ ಜಿ:ಬುಲಂದಶಹರ

5] ಮಹ್ಮದಯುಸುಪ ತಂದೆ ಇಸ್ಲಾಮುದ್ದಿನ ಸಾ: ಪೈಸಲಾಬಾದ ತಾ:ಜಿ: ಬುಲೆಂದಶಹರ ಉತ್ತರ ಪ್ರದೇಶ

ಇವರಿಂದ ಒಟ್ಟು 6 ಪ್ರಕರಣ [ ಕಾಗವಾಡ ಪೊಲೀಸ ಠಾಣೆ-4, ಅಥಣಿ ಪೊಲೀಸ ಠಾಣೆ-01, ಚಿಕ್ಕೋಡಿ ಪೊಲೀಸ ಠಾಣೆ-01 ] ಗಳಲ್ಲಿಯ ಕಳುವಿಗೆ ಹೋದ ಒಟ್ಟು 25.80.000/- ರೂ ಕಿಮ್ಮತ್ತಿನ 172 ಗ್ರಾಂ ತೂಕದ ಬಂಗಾರದ, ಆಭರಣಗಳನ್ನು ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಇರುತ್ತದೆ. ಸದರಿ ತನಿಖಾ ತಂಡದಲ್ಲಿ ಶ್ರೀ ಆರ್ ಪಿ ಕಾಟೇಕರಿ ಸಿಎಚ್‌ 1487, ಶ್ರೀ ಎಸ್ ಪಿ ಮುಗ್ಗನ್ನವರ ಸಿಎಚ್ ಸಿ -2692, ಎಮ್ ಎಮ್ ಜಂಬಗಿ ಸಿಪಿಸಿ -2817, ಎಸ್.ಎಸ್.ನಂದಿವಾಲೆ ಸಿಪಿಸಿ ಬನಂ:3525. ಎಸ್.ಡಿ,ದೇವರುಷಿ ಸಿಪಿಸಿ-3449. ಎ,ಜೆ,ಜಾಯಗೋಣೆ ಸಿಪಿಸಿ-4232.ಎಮ್,ಎಸ್,ಕಕಮರಿ ಸಿಪಿಸಿ-4233 ತಾಂತ್ರಿಕ ವಿಭಾಗದ ಶ್ರೀ ವಿನೋಧ ಠಕ್ಕನ್ನವರ ರವರು ಇದ್ದರು. ಸದರಿ ಕಾರ್ಯವನ್ನು ಮಾನ್ಯ ಎಸ್.ಪಿ ಬೆಳಗಾವಿ ರವರು ಶ್ಲಾಘಿಸಿದ್ದಾರೆ.

About The Author