ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸಮೀಪ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಚಲಿಸುತ್ತಿದ್ದ ಸಿಎನ್‌ಜಿ (CNG) ಕಾರೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.
ಕಾರಿನಲ್ಲಿದ್ದ ರಾಮದುರ್ಗ ಪಟ್ಟಣದ ನಿವಾಸಿಯಾಗಿರುವ ಪ್ರಶಾಂತ್ ಕಲಾದಗಿ ಅವರು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.

ಪ್ರಶಾಂತ್ ಅವರು ರಾಮದುರ್ಗದಿಂದ ಹುಬ್ಬಳ್ಳಿ ಮೂಲಕ ಬೆಂಗಳೂರಿಗೆ ಹೋಗುವ ಸಂಧರ್ಭ ತನ್ನ ಸ್ವಂತ ಕಾರು ರಿಪೇರಿಗೆ ಅಂತಾ ಹುಬ್ಬಳ್ಳಿಯಲ್ಲಿ ಬಿಟ್ಟು ಬೆಂಗಳೂರುಗೆ ಟ್ರೇನಿಂಗ್ ಅಂತಾ ಹೋಗಿದ್ದರು ಟ್ರೇನಿಂಗ್ ಮುಗಿಸಿಕೊಂಡು ಬರುವ ಸಂಧರ್ಭ ಹುಬ್ಬಳ್ಳಿಯಲ್ಲಿದ್ದ ಕಾರ ತಾನೇ ಸ್ವಂತ ಚಲಾವಣೆ ಮಾಡಿಕೊಂಡು ಬರುವಾಗ ಆಕಸ್ಮಿಕ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿತು ಆ ವೇಳೆ ಗಾಬರಿಗೊಂಡು ಏನು ಮಾಡಬೇಕು ಅಂತಾ ತಿಳಿಯಲಾರದೆ ರಸ್ತೆ ಮಧ್ಯ ಇದ್ದ ಕೆನಾಲಿಗೆ ಕಟ್ಟಿದ ಡಿವೈಡರಗೆ ವೇಗವಾಗಿ ಬಂದ CNG ಕಾರು ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್‌ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ, ಬೆಂಕಿ ಕ್ಷಣಮಾತ್ರದಲ್ಲಿ ಕಾರಿನಾದ್ಯಂತ ಆವರಿಸಿಕೊಂಡಿದ್ದು, ಇಡೀ ಕಾರು ಜವರಾಯನ ಕೆಂಡದಂತಾಗಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ, ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸಕಾಲದಲ್ಲಿ ಎಚ್ಚೆತ್ತ ಪ್ರಶಾಂತ್ ಕಲಾದಗಿ ಅವರು ತಕ್ಷಣವೇ ಅಸುಪಾಸಿನಲ್ಲಿದ್ದ ರೈತರು ಓಡಿ ಬಂದು ಕಾರಿನಿಂದ ಹೊರಗೆ ತಗೆದಿದ್ದಾರೆ ಇದರಿಂದಾಗಿ ಅವರು ಭೀಕರ ಪ್ರಾಣಾಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಪ್ರಶಾಂತ್ ಕಲಾದಗಿ ಅವರಿಗೆ ಎರಡು ಕಾಲು ಮುರದಿವೇ ಮತ್ತು ದೇಹಕ್ಕೆ ಸಣ್ಣ ಪುಟ್ಟ ಗಾಯವಾಗಿದೆ ಅವರಿಗೆ ಬೆಳಗಾವಿ ವಿಜಯಾ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರು ಮತ್ತು ಸವದತ್ತಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸಿದರಾದರೂ, ಅಷ್ಟರಲ್ಲಾಗಲೇ ಕಾರು ಸಂಪೂರ್ಣವಾಗಿ ಅಸ್ಥಿಪಂಜರವಾಗಿದೆ.



