ರಾಷ್ಟ್ರಪಕ್ಷಿ ನವಿಲನ್ನು ಹಲಾಲ್ ಮಾಡಿ ಮಾಂಸ ಮಾರುತ್ತಿದ್ದ ಖದೀಮ ಅರೆಸ್ಟ್!

WhatsApp Group Join Now

​ಭಾರತದ ಹೆಮ್ಮೆಯ ರಾಷ್ಟ್ರಪಕ್ಷಿ ನವಿಲನ್ನು ಬೇಟೆಯಾಡಿ, ಹಲಾಲ್ ಮಾಡಿ ಮಾಂಸ ಮಾರಾಟ ಮಾಡುತ್ತಿದ್ದ ಭೀಕರ ದಂಧೆಯೊಂದನ್ನು ಬೆಂಗಳೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ! ಈ ಅಮಾನವೀಯ ಕೃತ್ಯ ಎಸಗುತ್ತಿದ್ದ ಆರೋಪಿಯನ್ನು ಖೆಡ್ಡಾಕ್ಕೆ ಕೆಡವಿ, ಆತನ ಬಳಿಯಿದ್ದ ನವಿಲಿನ ಮಾಂಸ ಹಾಗೂ ಮೊಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ.

​ಚಿಕ್ಕಬಳ್ಳಾಪುರ ತಾಲೂಕಿನ ಬೈಯಪ್ಪನಹಳ್ಳಿ ಗ್ರಾಮದ ತೋಟದ ಮನೆಯೊಂದರಲ್ಲಿ ಈ ಕರಾಳ ದಂಧೆ ರಾಜಾರೋಷವಾಗಿ ನಡೆಯುತ್ತಿತ್ತು. ಸಾದೀಕ್ ಪಾಷ ಬಂಧಿತ ಆರೋಪಿ. ಈತ ಕಾಡಿನಿಂದ ನವಿಲುಗಳನ್ನು ಸೆರೆಹಿಡಿದು ತಂದು, ಅವುಗಳನ್ನು ಹಲಾಲ್ ಮಾಡಿ ಮಾಂಸವನ್ನು ದುಬಾರಿ ಬೆಲೆಗೆ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.

​ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರಿ ದಳದ ಸಿಬ್ಬಂದಿ ತೋಟದ ಮನೆಗೆ ಹಠಾತ್ ದಾಳಿ ನಡೆಸಿದಾಗ ಅಲ್ಲಿನ ದೃಶ್ಯ ನೋಡಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ದಾಳಿ ವೇಳೆ ​3 ಕೆ.ಜಿ. ಹಸಿ ನವಿಲಿನ ಮಾಂಸ ಸಿಕ್ಕಿದ್ದು ​ನವಿಲಿನ ಮೂಳೆಗಳು ಮತ್ತು ಗರಿಗಳು
​ನವಿಲಿನ ಅಪರೂಪದ ಮೊಟ್ಟೆಗಳು ವಶಪಡಿಸಿಕೊಂಡಿದ್ದಾರೆ

​ಅದೃಷ್ಟವಶಾತ್ ಸಾವು ಗೆದ್ದು ಬದುಕಿದ್ದ ಒಂದು ಜೀವಂತ ನವಿಲನ್ನು ಅಧಿಕಾರಿಗಳು ಆತನ ಕಮ್ಯುನಿಟಿಯಿಂದ ರಕ್ಷಿಸಿದ್ದಾರೆ!

​ರಾಷ್ಟ್ರಪಕ್ಷಿ ನವಿಲನ್ನು ಕೊಲ್ಲುವುದು ಅಥವಾ ಅದರ ಮಾಂಸ, ಗರಿಗಳನ್ನು ಹೊಂದುವುದು ಕಾನೂನುಬದ್ಧವಾಗಿ ಗಂಭೀರ ಅಪರಾಧವಾಗಿದೆ. ಸದ್ಯ ಬಂಧಿತ ಆರೋಪಿ ಸಾದೀಕ್ ಪಾಷ ವಿರುದ್ಧ ಚಿಕ್ಕಬಳ್ಳಾಪುರ ಅರಣ್ಯ ಇಲಾಖೆ ಕಚೇರಿಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಜಾಮೀನು ರಹಿತ ಕಠಿಣ ಪ್ರಕರಣ ದಾಖಲಿಸಲಾಗಿದೆ.

​ಅರಣ್ಯ ಸಂಚಾರಿ ದಳದ ಈ ಭರ್ಜರಿ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಹಾಗೂ ಪ್ರಾಣಿ ಪ್ರೇಮಿಗಳಿಂದ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.

About The Author