ಗದಗ ಸಾವಯವ ಕೃಷಿಕರ ಸಮ್ಮೇಳನ ಕಾರ್ಯಕ್ರಮ.

WhatsApp Group Join Now

ಗದಗ ಜಿಲ್ಲೆಯ ಕಡಕೋಳ ಗ್ರಾಮದಲ್ಲಿ ಶ್ರೀ ದೇವರೆಡ್ಡಿ ಅಗಸನಕಪ್ಪ ರವರ ಕೃಷಿ ಆಶ್ರಮದಲ್ಲಿ ಪೂಜ್ಯ ಶ್ರಿ ಕಾಡಸಿದ್ದೇಶ್ವರ ಮಹಾ ಸ್ವಾಮೀಜಿ ಕಣೇರಿ ಮಠ ಕೊಲ್ಹಾಪುರ್ ಹಾಗೂ ಕಪ್ಪತ್ ಗುಡ್ಡ ಶ್ರೀ ನಂದಿವೇರಿ ಸಂಸ್ಥಾನ ಮಠದ ಪೂಜ್ಯ ಶ್ರೀ ಶಿವಕುಮಾರ ಮಹಾ ಸ್ವಾಮೀಜಿಯವರ ನೇತೃತ್ವದಲ್ಲಿ ಜರುಗಿದ ರೈತರ ಸಮಾವೇಶದಲ್ಲಿ ಪೂಜ್ಯರೊಂದಿಗೆ ಶ್ರೀ ಬಾಲಚಂದ್ರ ಜಾಬಶೆಟ್ಟಿ ಅವರು ಕಪ್ಪತ್ ಗುಡ್ಡದ ಮಡಿಲಲ್ಲಿರುವ ಔಷಧಿ ಸಸ್ಯಗಳ ಸಂಗ್ರಹಕಾರ್ತಿ ಮತ್ತು ಪಾರಂಪರಿಕ ವೈದ್ಯೆ ಕಸ್ತೂರಿ ಅಮ್ಮನವರು ಸಂಗ್ರಹಿಸಿ ಪ್ರದರ್ಶಿಸುತ್ತಿರುವ ಮಳಿಗೆಗೆ ಭೇಟಿ ನೀಡಿದ ಸಂದರ್ಭ. ರಾಜ್ಯಾದ್ಯಂತದಿಂದ ಆಗಮಿಸಿದ 7 ನೂರಕ್ಕೂ ಹೆಚ್ಚು ಸಾವಯವ ಕೃಷಿಕರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಕೃಷಿ ಸಂಸ್ಕೃತಿಯ ಬಗ್ಗೆ ವಿಸ್ತೃತವಾಗಿ ಮಾತನಾಡಿದ ಕಣಿಗೇರಿ ಶ್ರೀಗಳು ಸಾವಯವ ಕೃಷಿಯಿಂದ ರೈತರು ಹಾಗೂ ಹಾಗೂ ಸಾತ್ವಿಕ ಮನೋಭಾವನೆಯಿಂದ ದೇಶಕ್ಕೆ ಮಾದರಿಯಾದ ಅನ್ನದಾತ ರಾಗಿದ್ದಾರೆ ಎಂದು ನುಡಿದರು.

ಕೃಷಿಯಲ್ಲಿ ಪಾರಂಪರಿಕ ಹಾಗೂ ಆಧುನಿಕ ಸಾವಯವ ಕೃಷಿ ಪದ್ಧತಿ ಅಳವಡಿಸಿ ರೈತನು ಆರ್ಥಿಕವಾಗಿ ಸದೃಢವಾಗಲು ಸೂಕ್ತ ತರಬೇತಿ ಅವಶ್ಯಕತೆ ಇದ್ದು ಆ ನಿಟ್ಟಿನಲ್ಲಿ ಗುರುಕುಲ ಮಾದರಿ ಶಿಕ್ಷಣ ನೀಡಲು ರಾಜ್ಯಾದ್ಯಂತ ಕೃಷಿ ಆಶ್ರಮ / ಕೃಷಿ ಪಾಠಶಾಲೆಗಳನ್ನು ಸ್ಥಾಪಿಸಲು ತೀರ್ಮಾನಿಸಲಾಗಿದ್ದು ಆ ನಿಟ್ಟಿನಲ್ಲಿ ಪಠ್ಯಕ್ರಮ ರಚಿಸಲಾಗಿದ್ದು ಕೃಷಿಯಲ್ಲಿ ಸಾಧನೆ ಮಾಡಿದ ತಜ್ಞರಿಂದ ಬೋಧಿಸುವ ಹಾಗೂ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಲಾಗುವುದು.

ಗೋ ಆಧಾರಿತ ಹಾಗೂ ನಂದಿಯಾದಾರಿತ ಕೃಷಿಯಿಂದ ವಿಷಮುಕ್ತ ಆಹಾರ ಬೆಳೆಯುವುದರಿಂದ ಸಾಮಾಜಿಕ ಸ್ವಾಸ್ಥ್ಯವನ್ನು ಕಾಯ್ದುಕೊಳ್ಳಬಹುದೆಂದು ಕಪ್ಪತಗುಡ್ಡದ ಶ್ರೀ ನಂದಿವೇರಿ ಸಂಸ್ಥಾನ ಮಠದ ಪೂಜ್ಯಶ್ರೀ ಶಿವಕುಮಾರ ಸ್ವಾಮೀಜಿ ಅವರು ಅಭಿಪ್ರಾಯ ಪಟ್ಟರು.
ಕೃಷಿಯಲ್ಲಿ ಮಹಿಳೆಯರು ಸ್ವಯಂ ಪ್ರೇರಿತವಾಗಿ ಭಾಗವಹಿಸಿದಾಗ ಕೃಷಿ ಯೊಂದು ಲಾಭದಾಯಕ ಉದ್ಯಮವಾಗಲು ಸಾಧ್ಯ ಎಂದು ಸಹ ಪೂಜ್ಯರು ತಿಳಿಸಿದರು.

ಶ್ರೀ ಕಪತ್ಗಿರಿ ಕೃಷಿ ಆಶ್ರಮ ಗೋ ಮಂದಿರ, ಶ್ರೀ ರಾಜೇಶ್ವರಿ ಕೃಷಿ ಆಶ್ರಮ ಹಾಗೂ ಶ್ರೀ ಭಾರದ್ವಾಜ ಆಶ್ರಮ ಕೃಷಿ ಆಶ್ರಮ ಗಳ ಉದ್ಘಾಟನೆಯನ್ನು ಉಭಯ ಶ್ರೀಗಳು ನೆರವೇರಿಸಿದರು.

ರಾಜ್ಯಾದ್ಯಂತ 1008 ಕೃಷಿ ಆಶ್ರಮಗಳನ್ನು ಸ್ಥಾಪಿಸುವ ಸಂಕಲ್ಪ ಮಾಡಿರುವ ಡಾ. ನಾಗಭೂಷಣರವರು ಸಾವಿರಾರು ರೈತರನ್ನು ಸಂಘಟಿಸಿ ಪ್ರೇರಣೆ ನೀಡುತ್ತಿರುವ ಕುರಿತು ಪೂಜ್ಯರು ಪ್ರಶಂಶಿಸಿದರು.
ಕಳೆದ ಎರಡು ದಶಕಗಳಿಂದ ಸಾವಯುವ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಶ್ರೀ ದೇವರೆಡ್ಡಿ ಅಗಸನಕೊಪ್ಪರವರ ಸಾಧನೆ ಅನುಕರಣೀಯವಾಗಿದೆ.
ಸಾವಯವ ಕೃಷಿಕರ ಪಡೆಯನ್ನು ಜಿಲ್ಲೆಯಾದ್ಯಂತ ಕಟ್ಟಿರುವ ಕೀರ್ತಿ ಗದಗಿನ ಧರಿತ್ರಿ ಕೃಷಿವಾರಕ್ಕೆ ಸಲ್ಲುತ್ತದೆ.
ಧರಿತ್ರಿ ಕೃಷಿ ಪರಿವಾರದ ಶ್ರೀ ಜಗದೀಶರವರ ಕಾರ್ಯವೈಖರಿ ಸ್ತುತ್ಯಾಹ೯ಗಿದೆ.
ಶ್ರೀ ರುದ್ರಣ್ಣ ಗುಳಗುಳಿ, ಶ್ರೀ ಸುರೇಶ ಗೌಡ ಪಾಟೀಲ, ಹಾಗೂ ಇನ್ನೂ ಅನೇಕ ಸಾವಯವ ಕೃಷಿಕರು ಉಪಸ್ಥಿತರಿದ್ದರು.

About The Author