ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನಲ್ಲಿ ಅನಧಿಕೃತ ಕೋಚಿಂಗ್ ಸೆಂಟರಗಳ ಹಾವಳಿ ಹೆಚ್ಚಾಗಿದೆ. ರಾಮದುರ್ಗ ತಾಲೂಕಿನಲ್ಲಿ ನಡೆಯುತ್ತಿರುವ ಅನಧಿಕೃತ ಕೋಚಿಂಗ್ ಸೆಂಟರಗಳ ಮೇಲೆ ಕ್ರಮ ಜರುಗಿಸಬೇಕೆಂದು ದಿನಾಂಕ.27/06/2024 ರಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಾರ್ಯಾಲಯ ಬೆಳಗಾವಿ, ಆಯುಕ್ತರ ಕಾರ್ಯಾಲಯ ಶಾಲಾ ಶಿಕ್ಷಣ ಇಲಾಖೆ ಧಾರವಾಡ, ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ನೃಪತುಂಗ ರಸ್ತೆ ಬೆಂಗಳೂರು ಇವರಿಗೆ ಅರ್ಜಿ ಸಲ್ಲಿಸಿದರು ಕೂಡ ಇದುವರೆಗೆ ನಿಲ್ಲಲಾರದ ಅನಧಿಕೃತ ಕೋಚಿಂಗ್ ಸೆಂಟರಗಳು.
ಅರ್ಜಿ ಸಲ್ಲಿಸಿ 4 ತಿಂಗಳು ಕಳೆದರೂ ಕೂಡ ಇದುವರೆಗೆ ನನ್ನ ಅರ್ಜಿಗೆ ಯಾವುದೇ ಉತ್ತರ ಬಂದಿಲ್ಲ ಇದನ್ನೆಲ್ಲ ಗಮನಿಸಿದರೆ ಎಷ್ಟರಮಟ್ಟಿಗೆ ಅನಧಿಕೃತ ಕೋಚಿಂಗ್ ಸೆಂಟರಗಳ ಜೊತೆ ಶಾಮೀಲು ಇರಬಹುದು.
ತಾಲೂಕಿನಲ್ಲಿ ಅನುಮತಿ ಪಡೆಯಿದೇ ರಾಜಾರೋಶವಾಗಿ ನಡೆಯುತ್ತಿರುವ ಅನಧಿಕೃತ ಕೋಚಿಂಗ್ ಸೆಂಟರ್ ನಡೆಸುತ್ತಿದ್ದದ್ದು ಕಂಡುಬಂದಿದೆ. ಕೆಲವು ವಸತಿ ಸಹಿತವಾಗಿದ್ದರೆ ಇನ್ನೂ ಕೆಲವು ವಸತಿ ರಹಿತವಾಗಿ ನಡೆಸುತ್ತಿದ್ದು ಕಂಡು ಬಂದಿದೆ . ಶಿಕ್ಷಣ ಕಾಯಿದೆ ನಿಯಮ ರಂತೆ ಯಾವುದೇ ಶಿಕ್ಷಣ ಸಂಸ್ಥೆ ಅಥವಾ ಕೋಚಿಂಗ್ ಸೆಂಟರ್ ಇಲಾಖೆ ನೋಂದಣಿ ಇಲ್ಲದೆ ನಡೆಸಲು ಅವಕಾಶವಿರುವುದಿಲ್ಲ. ಪ್ರತಿ ಶೈಕ್ಷಣಿಕ ವರ್ಷದ ಪೂರ್ವದಲ್ಲಿ ಆಯಾ ತಾಲೂಕು ವ್ಯಾಪ್ತಿಯಲ್ಲಿ ಕಾರ್ಯಾಚರಣೆಯಲ್ಲಿರುವ ಎಲ್ಲಾ ಅಧಿಕೃತ ಮತ್ತು ಅನಧಿಕೃತ ಸಂಸ್ಥೆಗಳ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ನಿರಂತರವಾಗಿ ಸೂಚಿಸುತ್ತಿದ್ದರೂ ಗಮನಹರಿಸದಿರುವುದು ಕಂಡುಬಂದಿದೆ. ಅನಧಿಕೃತ ಕೋಚಿಂಗ್ ಸೆಂಟರ್ ಬಗ್ಗೆ ರಾಮದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿಗಲಾದ ಆರ್.ಟಿ.ಬಳಿಗಾರ ಇವರ ಗಮನಕ್ಕೆ ತಂದರು ಇದುವರೆಗೆ ಕ್ಯಾರೆ ಎನ್ನದ ಅಧೀಕಾರಿ ಇದನ್ನೆಲ್ಲಾ ನೋಡಿದರೆ ಶಿಕ್ಷಣ ಇಲಾಖೆ ಖದೀಮರ ಸಾರಥ್ಯದಲ್ಲಿ ಕೋಚಿಂಗ್ ಸೆಂಟರಗಳು ನಡಿತೀರಬಹುದು.
ಮಾಹಿತಿ ಹಕ್ಕಿನಲ್ಲಿ ದಿನಾಂಕ.5/9/2024 ರಂದು ರಾಮದುರ್ಗ ತಾಲೂಕಿನಲ್ಲಿ ಅನುಮತಿ ಪಡೆದ ತರಗತಿಗಳ ಕೂಚಿಂಗ ಕೇಂದ್ರ (ಟ್ಯೂಶನ ಸೆಂಟರ)ಗಳ ವಿವರ ಮತ್ತು ಅನುಮತಿ ಪಡೆಯದೆ ಇರುವ ಕೊಚಿಂಗ ಕೇಂದ್ರಗಳ ಮೇಲೆ ಕೈಕೊಂಡ ಕ್ರಮಗಳ ಮಾಹಿತಿ ವಿವರ ಇವುಗಳನ್ನು ದೃಢೀಕೃತ ರೂಪದಲ್ಲಿ ಮಾಹಿತಿ ಸಲ್ಲಿಸಿರಿ. ಎಂದು ಅರ್ಜಿ ಸಲ್ಲಿಸಿದಾಗ ದಿನಾಂಕ.19/9/2024 ರಂದು ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ರಾಮದುರ್ಗ ಇವರಿಂದ ಶಿಕ್ಷಣ ಸಂಯೋಜಕರ ವರದಿಯಂತೆ ಅನಧಿಕೃತ ಕೋಚಿಂಗ ಸೆಂಟರಗಳ ನಡೆಯುತ್ತೀರುವುದಿಲ್ಲವೆಂದು ಈ ಮೂಲಕ ತಮ್ಮಗೆ ತಿಳಿಸಲಾಗಿದೆ. ಎಂದು ಉಡಾಪಿ ಉತ್ತರ ನೀಡುತ್ತಿರುವ ಕ್ಷೇತ್ರ ಶಿಕ್ಷಣಾಧಿಕಾರಿ.
ರಾಮದುರ್ಗ ತಾಲೂಕಿನಲ್ಲಿ ಕೆಲವೊಂದು ಕಡೆ ತಗಡಿನ ಶೆಡ್ ಗಳನ್ನು ನಿರ್ಮಾಣ ಮಾಡಿ ಯಾವುದೇ ಅನುಮತಿ ಪಡೆಯದೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಕೋಚಿಂಗ ಸೆಂಟರಗಳನ್ನು ನಡೆಸುತ್ತಿದ್ದರು ಶಿಕ್ಷಣ ಇಲಾಖೆ ಸುಮ್ಮನಿರುವುದು ಏಕೆ ಎಂಬುದು ಪ್ರಶ್ನೆಯಾಗಿದೆ. ಹಾಗಾದರೆ ಕೋಚಿಂಗ ಸೆಂಟರಗಳಲ್ಲಿ ಕಳೆಯುತ್ತಿರುವ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರ ಶಾಲಾ ದಾಖಲೆ ಎಲ್ಲಿ ಎಂಬುದು ಪ್ರಶ್ನೆಯಾಗಿದೆ
ಅನಧಿಕೃತ ಶಾಲೆಗಳಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡಿದಲ್ಲಿ ಅವರ ಶೈಕ್ಷಣಿಕ ದಾಖಲೆಗಳನ್ನು ಅಧಿಕೃತಗೊಳಿಸಿ ನೀಡಲು ಸಾಧ್ಯವಾಗುವುದಿಲ್ಲ. ಅನಧಿಕೃತ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಸಹ ಪರಿಗಣಿಸಲು ಅವಕಾಶವಿರುವುದಿಲ್ಲ. ಒಂದು ವೇಳೆ ಇಂತಹ ಶಾಲೆಗಳಲ್ಲಿ ಕಲಿತ ಮಕ್ಕಳ ಶೈಕ್ಷಣಿಕ ದಾಖಲೆಗಳನ್ನು ಮುಂದಿನ ವ್ಯಾಸಂಗ ಅಥವಾ ಉದ್ಯೋಗಕ್ಕಾಗಿ ಅಧಿಕೃತ ಎಂದು ಪರಿಗಣಿಸಲು ಸಾಧ್ಯವಿರುವುದಿಲ್ಲ. ಈ ಕಟುಸತ್ಯ ಗೊತ್ತಿದ್ದರೂ ಕೂಡ ಖಾಸಗಿ ಶಾಲೆಗಳ ಜೊತೆ ಒಳ ಒಪ್ಪಂದ ಮಾಡಿಕೊಂಡು ಕೆಲ ಬಿಇಒ ಮತ್ತು ಡಿಡಿಪಿಐಗಳು ಮನಸೋ ಇಚ್ಚೆ ನಿಯಮ ಬಾಹಿರಾಗಿ ಕಾರ್ಯ ಮಾಡುತ್ತಿದ್ದಾರೆ.
ರಾಜ್ಯದಲ್ಲಿರುವ ಕೋಚಿಂಗ್ ಸೆಂಟರಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳುವುದು. ತಪ್ಪಿದಲ್ಲಿ ಕರ್ನಾಟಕ ಶಿಕ್ಷಣ ಕಾಯ್ದೆ-1983 ಯ ಸೆಕ್ಷನ್ 2 ರ ಕ್ಲಾಸ್ (31) ರ ಅನ್ವಯ ನಿಯಮಾನುಸಾರ ಕ್ರಮ ಕೈಗೂಳ್ಳಲಾಗುವುದು ಎಂದು ಗೊತ್ತಿದ್ದರೂ ಕೂಡ ರಾಜಾರೋಷವಾಗಿ ನಡೆಯುತ್ತಿರುವ ಅನಧಿಕೃತ ಕೋಚಿಂಗ್ ಸೆಂಟರ್‌ಗಳ ಹಾವಳಿ ಹೆಚ್ಚಾಗಿದೆ.