
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಬುದ್ನಿ ಖುರ್ದ ಗ್ರಾಮದ ಡಾ| ಬಿ.ಆರ್. ಅಂಬೇಡ್ಕರ್ ರಂಗ ಮಂದಿರದಲ್ಲಿ ಜಾನಪದ ಕಲಾ ಪರಿಷತ್ (ರಿ) ಹಲಗತ್ತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡ ಜಾನಪದ ಮತ್ತು ಸಂಗೀತ ಉತ್ಸವ ಹಾಗೂ ಸನ್ಮಾನ ಸಮಾರಂಭದಲ್ಲಿ ಕಲಾ ಪ್ರೇಮಿ ಶಂಕರ ಬಣಪ್ಪನವರ ಪಾಲ್ಗೊಂಡು ಮಾತನಾಡಿದರು.
ಜಾನಪದ ಕಲೆ ತನ್ನದೇ ಆದ ಒಂದು ಇತಿಹಾಸ ಹೊಂದಿದೆ. ಹಳ್ಳಿಯ ಸೊಗಡಿನಲ್ಲಿ ಜಾನಪದ, ಭಜನಾ, ಸೋಬಾನ ಪದ, ರಿವಾಯತ್ ಪದ, ಸುಗಮ ಸಂಗೀತ ದಂತಹ ಕಲೆಗಳು ನಮ್ಮ ಪರಂಪರೆ ಸಂಸ್ಕಾರದ ಪರಿಚಯ ಮಾಡುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಲಾವಿದರನ್ನು ಹಾಗೂ ಗಣ್ಯಮಾನ್ಯರನ್ನು ಜಾನಪದ ಕಲಾ ಪರಿಷತ್ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕಲಾ ತಂಡದವರು ಗ್ರಾಮೀಣ ಭಾಗದ ಜಾನಪದ ಕಲೆ ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸಿದರು.
ಸುಭಾಸ ಸಂಶಿ ಅಧ್ಯಕ್ಷತೆ ವಹಿಸಿದ್ದರು. ನಿಂಗಪ್ಪ ಮಾದರ, ಹಣಮಂತ ಮೇತ್ರಿ, ಈಶ್ವರಪ್ಪ ಬಣಪ್ಪನವರ, ರಾಮಣ್ಣ ಸಂಶಿ, ಲಕ್ಷ್ಮಣ ಮಾದರ, ದುರ್ಗಪ್ಪ ಮಾದರ, ಕಲಾವಿದರು, ಗ್ರಾಮಸ್ಥರು ಇದ್ದರು.