ತುರುನೂರು ದಿಂದ ಸುನ್ನಾಳವರೆಗೆ ಅದೇಗೆಟ್ಟ ರಸ್ತೆ : ಯಾಮಾರಿದರೆ ದವಾಖಾನೆ ಬಿಲ್ ಗ್ಯಾರಂಟಿ

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ತುರುನೂರು ದಿಂದ ಸುನ್ನಾಳವರೆಗೆ ಅದೇಗೆಟ್ಟ ರಸ್ತೆ. ರಸ್ತೆ ತುಂಬ ಗುಂಡಿಗಳ ದರ್ಬಾರ್ ಯಾಮಾರಿದರೆ ಕೈಕಾಲು ಮುರಿದು ದವಾಖಾನೆ ಅಡ್ಮಿಟ್ಟೆ ಆಸ್ಪತ್ರೆ ಬಿಲ್ ಗ್ಯಾರಂಟಿ

ರಸ್ತೆಗಳನ್ನು ಹುಡುಕಿ ವಾಹನ ಸಂಚಾರ ಮಾಡಬೇಕಾದ ಪರಿಸ್ಥಿತಿ ಇದೆ. ರಸ್ತೆ ಹಾಳಾಗಿ ವರ್ಷಗಳೇ ಕಳೆದರೂ ದುರಸ್ತಿಗೆ ಅಧಿಕಾರಿಗಳು ಇನ್ನೂ ಮನಸ್ಸು ಮಾಡಿಲ್ಲ. ಹೀಗಾಗಿ ರಸ್ತೆ ಮಧ್ಯೆ ದೊಡ್ಡ ಗುಂಡಿಗಳು ನಿರ್ಮಾಣವಾಗಿ ಸಂಚಾರಕ್ಕೆ ಅಡಚಣೆ ಉಂಟು ಮಾಡಿದೆ ಯಾಮಾರಿದರೆ ದವಾಖಾನೆ ಬಿಲ್ ಗ್ಯಾರಂಟಿ

ರಸ್ತೆಯಲ್ಲಿ ಸಂಚರಿಸುವ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ. ರಸ್ತೆಯನ್ನು ಅಭಿವೃದ್ಧಿ ಮಾಡಿಸಿಕೊಡು ವಂತೆ ಸಾರ್ವಜನಿಕರ ವಿನಂತಿಸಿಕೊಂಡಿದ್ದಾರೆ

About The Author