
ಹಲಗತ್ತಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮನೆ ಮನದಲ್ಲಿ ವೇಮನ 174ನೇ ಮಾಸಿಕ ತತ್ವ ಚಿಂತನ ಹಾಗೂ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಚಿಂತಕ ಪ್ರದೀಪ ಗುರೂಜಿ ಮಾತನಾಡಿದರು.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮದಲ್ಲಿ ಹೇಮ ವೇಮ ಸೇವಾ ಸಮಿತಿಯ ಆಶ್ರಯದಲ್ಲಿ ಬೆನಕಟ್ಟಿಯ ಹೇಮ ವೇಮನ ಸದ್ಬೋಧನ ಪೀಠ ಹಮ್ಮಿಕೊಂಡಿದ್ದ ಮನೆ ಮನದಲ್ಲಿ ವೇಮನ 174ನೇ ಮಾಸಿಕ ತತ್ವ ಚಿಂತನ ಹಾಗೂ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ವೇಮನರ ವಚನ ಕುರಿತು ಬಾಗಲಕೋಟದ ಆಧ್ಯಾತ್ಮಿಕ ಚಿಂತಕ ಪ್ರದೀಪ ಗುರೂಜಿಚಿಂತನ ನಡೆಸಿ ಅವರು ಮಾತನಾಡಿದರು.ನಾವಾಡುವ ಮಾತು, ಕೃತಿ ಒಂದಾದಾಗ ಮಾತ್ರ ನಮ್ಮ ಬದುಕನ್ನು ಸುಂದರಮಯ ವಾಗಿಸಿಕೊಳ್ಳಲು ಸಾಧ್ಯ. ಮಹಾತ್ಮರು, ಶರಣರು ಹಾಗೆ ಬದುಕಿದ್ದರಿಂದಲೇ ಅವರು…