ಮಾಜಿ ಶಾಸಕ ಮಹದೇವಪ್ಪ ಯಾದವಾಡ ಅವರಿಗೆ ಜಿಲ್ಲಾ ಪಂಚಾಯಿತಿ ಭಾಗದಲ್ಲಿ ಪ್ರಚಾರಕ್ಕೆ ಬಿಡದ ಬಿಜೆಪಿ ಕಾರ್ಯಕರ್ತರು

WhatsApp Group Join Now

ರಾಮದುರ್ಗ: ಹುಲಕುಂದ ಜಿಲ್ಲಾ ಪಂಚಾಯತ್ ಭಾಗದಲ್ಲಿ ಲೋಕಸಭಾ ಚುನಾವಣೆ ಪ್ರಚಾರಕ್ಕೆ ಬೆಳಗಾವಿ ಲೋಕಸಭಾ ಬಿಜೆಪಿ ಅಭ್ಯರ್ಥಿಯಾದ ಜಗದೀಶ್ ಶೆಟ್ಟರ ಜೋತೆಗೆ ಮಾಜಿ ಶಾಸಕ,ಮಹಾದೇವಪ್ಪ ಯಾದವಾಡ ಚುನಾವಣೆ ಪ್ರಚಾರಕ್ಕೆ ತರಳಿದರು,

ಈ ಸಂದರ್ಭದಲ್ಲಿ ರಾಮದುರ್ಗ ತಾಲೂಕಿನ ಹುಲಕುಂದ ಜಿಲ್ಲಾ ಪಂಚಾಯತ್ ಭಾಗದ ಬಿಜೆಪಿ ಕಾರ್ಯಕರ್ತರು ನಾವು ಯಾರ ಪರವಾಗಿಯೂ ಇಲ್ಲ ಕೇವಲ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಿಗೆ ಮಾತ್ರ ವಿರೋಧ ಮಾಡುತ್ತಿದ್ದೇವೆ ಎಂದು ಹೇಳಿ ಪ್ರಚಾರಕ್ಕೆ ಬಿಡದ ಬಿಜೆಪಿ ಕಾರ್ಯಕರ್ತರು ಗಾಡಿ ತಡೆದು ಲೋಕಸಭಾ ಚುನಾವಣೆ ಪ್ರಚಾರ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ಮಾಜಿ ಶಾಸಕರಾದ ಮಹದೇವಪ್ಪ ಯಾದವಾಡ ಅವರನ್ನು ಕರೆದುಕೊಂಡು ಬಂದಿದ್ದಕ್ಕೆ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನು ಕರೆದುಕೊಂಡು ನಮ್ಮ ಗ್ರಾಮಕ್ಕೆ ಬರಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾವು ಬಿಜೆಪಿ ಯನ್ನು ಬೆಂಬಲಿಸುತ್ತೇವೆ ಎಂದು ರೇಗಾಡಿದರು ಹುಲ್ಕುಂದ್ ಜಿಲ್ಲಾ ಪಂಚಾಯಿತಿ ಬಹುತೇಕ ಗ್ರಾಮಗಳಲ್ಲಿ ಪ್ರತಿರೋಧ ಎದುರಿಸಬೇಕಾಗಿ ಕಂಡುಬಂತು

About The Author