ಆನ್ ಲೈನ್ ನಲ್ಲಿ ಮದ್ಯ ಖರೀದಿಸಲು ಹೋಗಿ 3.38 ಲಕ್ಷ ರೂ.ಕಳೆದುಕೊಂಡ ಫೈನಾನ್ಸ್ ಅನಾಲಿಸ್ಟ್!
ಬೆಂಗಳೂರು: ಮತ್ತೊಂದು ಆನ್‌ಲೈನ್ ವಂಚನೆ ಪ್ರಕರಣದಲ್ಲಿ, 41 ವರ್ಷದ ಫೈನಾನ್ಸ್ ಅನಾಲಿಸ್ಟ್ ಆನ್‌ಲೈನ್‌ನಲ್ಲಿ ಮದ್ಯ ಖರೀದಿಸಲು ಹೋಗಿ 3.38 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಮೋಸಗೊಳಗಾದವರು ದೇಬಾಶಿಶ್ ಬಯೆನ್ ಎಂದು ಗುರುತಿಸಲಾಗಿದೆ.ಕೋಲ್ಕತ್ತಾ ಮೂಲದ ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ವಾಸಿಸುವ ಪ್ರೀಮಿಯರ್ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಕೋಲ್ಕತ್ತಾ (IIMC)ಯಿಂದ ಸ್ನಾತಕೋತ್ತರ ಪದವೀಧರರಾಗಿರುವ ದೇಬಾಶಿಶ್ ಬಯೆನ್ ಭಾನುವಾರ ಎರಡು ವಹಿವಾಟುಗಳಲ್ಲಿ ತನ್ನ ಹಣವನ್ನು ಕಳೆದುಕೊಂಡಿದ್ದಾರೆ. ಕೊತ್ತನೂರಿನ ಪ್ರತಿಷ್ಠಿತ ಮದ್ಯದ ಅಂಗಡಿಯ ವೆಬ್‌ಸೈಟ್‌ನಿಂದ ಆನ್‌ಲೈನ್‌ನಲ್ಲಿ ಮದ್ಯ ಖರೀದಿಸಲು ಪ್ರಯತ್ನಿಸಿ ಸಿಕ್ಕ ನಂಬರ್‌ಗೆ ಸಂಪರ್ಕಿಸಿದಾಗ ವಾಟ್ಸ್‌ಆ್ಯಪ್‌ನಲ್ಲಿ…