ಪ್ರತಿ 3 ತಿಂಗಳಿಗೊಮ್ಮೆ ತಾಲೂಕು ಮಟ್ಟದಲ್ಲಿ ಎಸ್.ಸಿ., ಎಸ್.ಟಿ. ಸಮುದಾಯದ ಕುಂದುಕೊರತೆಗಳ ಸಭೆ ಜರುಗಿಸಿ: ಜಿಲ್ಲಾಧಿಕಾರಿ ದಿವ್ಯ ಪ್ರಭು

ಧಾರವಾಡ ಜಿಲ್ಲಾ ಮಟ್ಟದಲ್ಲಿ ಜರುಗುವ ರೀತಿಯಲ್ಲಿ ಎಲ್ಲ ತಾಲೂಕು ಮಟ್ಟದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದ ಕುಂದುಕೊರತೆಗಳನ್ನು ಆಲಿಸಿ, ಪರಿಹರಿಸಲು ಪ್ರತಿ ಮೂರು ತಿಂಗಳಿಗೊಮ್ಮೆ ಕಂದಾಯ, ಪೋಲಿಸ್ , ಸಮಾಜ ಕಲ್ಯಾಣ ಪಂಚಾಯತ ರಾಜ್ ಇಲಾಖೆಗಳು ಜಂಟಿಯಾಗಿ ಸಭೆ ಜರುಗಿಸಬೇಕೆಂದು ಸಮಿತಿಗಳ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ನಿರ್ದೇಶಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ 2024-25 ಸಾಲಿನ ಫೆಬ್ರವರಿ-2025 ರವರೆಗಿನ ವಿವಿಧ ಇಲಾಖೆಗಳ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ…

Read More

ಸವದತ್ತಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ” ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ

ಸವದತ್ತಿ, ತಾಲೂಕಾ ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಸಹಯೋಗದಲ್ಲಿ ಮಾರ್ಚ್ 18-2025 ರಂದು ನ್ಯಾಯವಾದಿಗಳ ಹೊಸ ಸಬಾಭವನದಲ್ಲಿ “ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ” ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಹವ್ಮಿುಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಗೌರವಾನ್ವಿತ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರು ಹಾಗೂ ತಾಲೂಕಾ ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ. ಶಶಿಧರ ಎಮ್.ಗೌಡ ರವರು ಸಸಿಗೆ ನೀರೆರೆಯುವುದರ ಮೂಲಕ ಉದ್ಫಾಟನೆ ನೇರವೇರಿಸಿದರು. ನಂತರ ಮಾತನಾಡಿದ ಅವರು ಜಗತ್ತಿನ ಎಲ್ಲ ದೇಶಗಳು ಸಹ ಅಭಿವೃದ್ಧಿಯ ಪಥದಲ್ಲಿ ತಾವು…

Read More

ಕಿಟೆಲ್ ಕಲಾ ಮಹಾವಿದ್ಯಾಲಯಕ್ಕೆ ಉತ್ಕøಷ್ಟ ಎನ್.ಎಸ್.ಎಸ್. ಘಟಕ ಮತ್ತುಡಾ. ಸುರೇಶ ಬಿ. ನ್ಯಾಮತಿ ಅವರಿಗೆ ಅತ್ಯುತ್ತಮ ಕಾರ್ಯಕ್ರಮ ಅಧಿಕಾರಿ ಪ್ರಶಸ್ತಿ ಪ್ರಧಾನ

ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯ ಮತ್ತು ರಾಜ್ಯ ಎನ್.ಎಸ್.ಎಸ್. ಕೋಶದ ವತಿಯಿಂದ ಮಾರ್ಚ 17, 2025 ರಂದು ರಾಜಭವನದ ಗಾಜಿನಮನೆಯಲ್ಲಿ ರಾಜ್ಯ ಪ್ರಶಸ್ತಿ ವಿತರಣಾ ಸಮಾರಂಭ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು 2022-23 ಸಾಲಿನ ಎನ್.ಎಸ್.ಎಸ್. ರಾಜ್ಯ ಪ್ರಶಸ್ತಿಗಳನ್ನು ಪ್ರಧಾನ ಮಾಡಿದರು. ಕಿಟೆಲ್ ಕಲಾ ಮಹಾವಿದ್ಯಾಲಯಕ್ಕೆ ಉತ್ಕøಷ್ಟ ಎನ್.ಎಸ್.ಎಸ್. ಘಟಕ ಪ್ರಶಸ್ತಿಯನ್ನು ಧಾರವಾಡ ಕಿಟೆಲ್ ಕಲಾ ಮಹಾವಿದ್ಯಾಲಯ ಪ್ರಾಚಾರ್ಯರಾದ ಡಾ. ರೇಖಾ ಜೋಗುಳ ಮತ್ತು ಅತ್ಯುತ್ತಮ…

Read More

ರಾಜ್ಯ ಎನ್.ಎಸ್.ಎಸ್. ಸ್ವಯಂಸೇವಕ ಪ್ರಶಸ್ತಿಯನ್ನು ರಾಜ್ಯಪಾಲ ತಾವರ್ ಚಂದ್ ಗೆಹಲೋಟ್ ಅವರು ಗಂಗಾಧರ ಮಲ್ಲಿಕಾರ್ಜುನ್ ಕುರಬಗಟ್ಟಿ ಅವರಿಗೆ ಪ್ರಶಸ್ತಿಯನ್ನು ನೀಡಿದರು.

ಬೆಂಗಳೂರು ರಾಜ ಭವನದಲ್ಲಿ ನಡೆದ ಕರ್ನಾಟಕ ಸರ್ಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ರಾಷ್ಟ್ರೀಯ ಸೇವಾ ಯೋಜನೆ ಘಟಕ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಸನ್ 2022-23 ನೇ ಸಾಲಿನ ರಾಜ್ಯ ಎನ್.ಎಸ್.ಎಸ್.ಸ್ವಯಂಸೇವಕ ಪ್ರಶಸ್ತಿಯನ್ನು ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಮುನವಳ್ಳಿ ಜಿ.ಎಸ್‌.ಪಿ. ಸಂಘದ ಅಜ್ಜಪ್ಪ ಗಡಮಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಗಂಗಾಧರ ಮಲ್ಲಿಕಾರ್ಜುನ ಕುರಬಗಟ್ಟಿ ಇವರಿಗೆ ಮಾರ್ಚ್ 17ರಂದು ರಾಜ ಭವನದಲ್ಲಿ ರಾಜ್ಯಪಾಲ ತಾವರ್ ಚಂದ್ ಗೆಹಲೋಟ್ ಅವರು ಪ್ರಶಸ್ತಿಯನ್ನು ನೀಡಿ…

Read More

ಅನಧಿಕೃತ ವಸತಿ ಶಾಲೆಗಳು ಬೇಸಿಗೆ ತರಬೇತಿ ಶಿಬಿರಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಿ,: ಸಿದ್ದು ಪಟ್ಟೇದಾರ

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನಾದ್ಯಂತ ಹಲವು ಬೇಸಿಗೆ ತರಬೇತಿ ಶಿಬಿರಗಳು ಪಠ್ಯಕ್ರಮಕ್ಕೆ ಅನುಗುಣವಾಗಿ, ವಿಶೇಷವಾಗಿ 5ನೇ ತರಗತಿ ವಿದ್ಯಾರ್ಥಿಗಳಿಗೆ ನವೋದಯ, ಸೈನಿಕ,ಆದರ್ಶ ವಿಶೇಷ ತರಬೇತಿ ಹೆಸರಿನಲ್ಲಿ ಬೇಸಿಗೆ ತರಬೇತಿ ಶಿಬಿರಗಳನ್ನು ಪ್ರಾರಂಭಿಸಿ, ಪ್ರವೇಶ ಪಡೆದು ಅಕ್ರಮ ಹಣ ಸಂಪಾದಿಸುತ್ತಿರುವ ಅನಧೀಕೃತ ವಸತಿ ಶಾಲೆಗಳು ಹಾಗೂ ಬೇಸಿಗೆ ತರಬೇತಿ ಶಿಬಿರಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಮ್ಮ ಕರ್ನಾಟಕ ಸೇನೆ ಶಹಾಪುರ ತಾಲ್ಲೂಕು ಅಧ್ಯಕ್ಷ ಸಿದ್ದು ಪಟ್ಟೇದಾರ ಅವರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,…

Read More

ಮಾಹಿತಿ ಹಕ್ಕು ಕೇಳಿದ ಪತ್ರಕರ್ತನಿಗೆ ಬೇದರಿಕೆ ಹಾಕಿದ ಪಿಡಿಓ

ಚಿತ್ತಾಪುರ ಮಾಹಿತಿ ಹಕ್ಕು ಕೇಳಿದ ಪತ್ರಕರ್ತನಿಗೆ ಗ್ರಾಮ ಪಂಚಾಯತ್ ಪಿಡಿಓ ಬೆದರಿಕೆ ಹಾಕಿದ ಘಟನೆ ಚಿತ್ತಾಪುರ ತಾಲೂಕಿನ ಅಳ್ಳೋಳ್ಳಿ ಗ್ರಾಮ ಪಂಚಾಯತಿಯಿಂದ ವರದಿಯಾಗಿದೆ. ಚಿತ್ತಾಪುರ ತಾಲೂಕು ಸಂಯುಕ್ತ ಕರ್ನಾಟಕ ಪತ್ರಕರ್ತ ನಾಗಯ್ಯ ಸ್ವಾಮಿ ಅಲ್ಲೂರ ಅವರು ಅಳ್ಳೋಳ್ಳಿ ಗ್ರಾಮ ಪಂಚಾಯತಿಯ 15 ನೇ ಹಣಕಾಸಿನ ಯೋಜನೆಯಲ್ಲಿ ಭಾರಿ ಅವವ್ಯಹಾರ ನಡೆದ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿರುವದರಿಂದ ಮಾಹಿತಿ ಆದರಿಸಿ ವರದಿ ಬರೆಯಲು ಅವರು ಮಾರ್ಚ1 ರಂದು ತಾಲೂಕಿನ ಅಳ್ಳೋಳ್ಳಿ ಗ್ರಾಮ ಪಂಚಾಯತ್ .ಕಚೇರಿಗೆ ಹೋಗಿ 15 ನೇ…

Read More

ಯಲ್ಲಮ್ಮನ ದೇವಸ್ಥಾನದ ಹುಂಡಿಯಲ್ಲಿ ಕಳೆದ ಮೂರು ತಿಂಗಳಲ್ಲಿ 3.68 ಕೋಟಿ ರೂ. ನಗದು ಕಾಣಿಕೆ ಸಂಗ್ರಹವಾಗಿದೆ.

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ಯಲ್ಲಮ್ಮನ ದೇವಸ್ಥಾನದ ಹುಂಡಿಯಲ್ಲಿ ಕಳೆದ ಮೂರು ತಿಂಗಳಲ್ಲಿ 3.68 ಕೋಟಿ ರೂ. ನಗದು ಕಾಣಿಕೆ ಸಂಗ್ರಹವಾಗಿದೆ. ಪ್ರತಿಬಾರಿ ಎಣಿಕೆ ನಡೆದಾಗ ರೂ. 1 ಕೋಟಿಯಿಂದ ರೂ. 1.5 ಕೋಟಿಯವರೆಗೆ ಕಾಣಿಕೆ ಸಂಗ್ರಹವಾಗುತ್ತಿತ್ತು. ಆದರೆ, ಈ ಬಾರಿ 3.68 ರೂ. ಕೋಟಿ ಸಂಗ್ರಹವಾಗಿದ್ದು ದಾಖಲೆಯಾಗಿದೆ. 2024 ರ ಡಿಸೆಂಬ‌ರ್ 14 ರಿಂದ 2025 ರ ಮಾರ್ಚ್ 12 ರವರೆಗೆ(89ದಿನ) ಯಲ್ಲಮ್ಮ ದೇವಸ್ಥಾನ ಮತ್ತು ಇತರೆ ಪರಿವಾರದ ದೇವಸ್ಥಾನಗಳ ಹುಂಡಿಗಳಲ್ಲಿ ಸಂಗ್ರಹವಾದ…

Read More

ರಾಮದುರ್ಗ ಪುರಸಭೆಯ ಮಾದರಿ ಸ್ವಚ್ಛ ಘನ ತ್ಯಾಜ್ಯ ಸಂಸ್ಕರಣ ಘಟಕವಾಗಿದೆ.

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ತುರನೂರು ಗ್ರಾಮದ ಹೊರವಲಯದಲ್ಲಿ ರಾಮದುರ್ಗ ಪುರಸಭೆಯ ಮಾದರಿ ಸ್ವಚ್ಛ ಘನ ತ್ಯಾಜ್ಯ ಸಂಸ್ಕರಣ ಘಟಕವಾಗಿದ್ದು ಗೋಡೆಯ ಮೇಲೆ ಚಿತ್ರಗಳ ಅಲಂಕಾರ, ಉದ್ಯಾನವನ, ಎಲ್ಲಿ ನೋಡಿದರೂ ಸಸಿಗಳ ಆಕರ್ಷಣೆ ಇವುಗಳನ್ನೆಲ್ಲ ನೋಡಿದರೆ ಇದ್ದು ಪುರಸಭೆಯ ಘನ ತ್ಯಾಜ್ಯ ಸಂಸ್ಕರಣ ಘಟಕವು ಅಥವಾ ಉದ್ಯಾನವನವು ಎಂದು ಗೊತ್ತಾಗಲಾರದು. ಅಷ್ಟು ಸ್ವಚ್ಛತೆಯಲ್ಲಿ ಘನ ತ್ಯಾಜ್ಯ ಸಂಸ್ಕರಣ ಘಟಕ ಇದೆ. ಒಂದು ಕಾಲದಲ್ಲಿ ಈ ಪುರಸಭೆಯ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಪ್ರತಿನಿತ್ಯ ಬರುತ್ತಿದ್ದ ಘನತ್ಯಾಜ್ಯದಿಂದಾಗಿ ಅಕ್ಕಪಕ್ಕದ…

Read More

ಪವರ್ ಮ್ಯಾನ್ ಮತ್ತು ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಪವರ್ ಮ್ಯಾನಗಳಿಗೆ ಸನ್ಮಾನ ಹಾಗೂ ಅಭಿನಂದನ ಪತ್ರ ವಿತರಣೆ

ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಕ. ವಿ. ಪ್ರ. ನಿ. ನಿ ಮತ್ತು ಹೆಸ್ಕಾಂ, 659 ಸಂಘದ ವತಿಯಿಂದ ಪವರ್ ಮ್ಯಾನ್ ಮತ್ತು ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹೆಸ್ಕಾಂ ಉಪ ವಿಭಾಗದ ಆವರಣದಲ್ಲಿ ವೇದಿಕೆ ಮೇಲಿನ ಎಲ್ಲ ಗಣ್ಯರಿಂದ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ವಿನಾಯಕ ಸೋಮನಟ್ಟಿ ಅವರು ಮಾತನಾಡಿ ಪವರ್ ಮ್ಯಾನ್ ಎನ್ನುವುದು ನಾವು ನಿಜವಾಗಲೂ ನಮ್ಮ ಧರ್ಮವನ್ನು ಪಾಲಿಸಿದಂಗ. ಧರ್ಮ ಎಂದರೇನು? ಧರ್ಮೋ ರಕ್ಷತ ರಕ್ಷತಾ ಎಂದು ಎಲ್ಲರಿಗೂ ತಿಳಿದಿದ್ದೇವೆ. ನಮ್ಮ…

Read More

ಸವದತ್ತಿ ಶ್ರೀ ಕಾಯಕಯೋಗಿ ಶಿವಶರಣರ ಜಯಂತಿಯನ್ನು ತಾಲೂಕ ಪಂಚಾಯತ ಸಭಾಂಗಣದಲ್ಲಿ ಆಚರಿಸಲಾಯಿತು.

ಬೆಳಗಾವಿ ಜಿಲ್ಲೆ ಸವದತ್ತಿ ಪಟ್ಟಣದ ತಾಲೂಕು ಪಂಚಾಯತ್ ಸಭಾ ಭವನದಲ್ಲಿ ಶ್ರೀ ಕಾಯಕಯೋಗಿ ಶಿವಶರಣರ ಜಯಂತಿಯನ್ನುಸವದತ್ತಿಯ ಜನಪ್ರಿಯ ಶಾಸಕರಾದ ವಿಶ್ವಾಸ್ ವಸಂತ್ ವೈದ್ಯ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅಜಾತ ನಾಗಲಿಂಗ ಮಹಾಸ್ವಾಮಿಗಳು ಚಿಕ್ಕುಂಬಿ , ಶಿವಾನಂದ ಮಹಾಸ್ವಾಮಿಗಳು ಬ್ರಹ್ಮಾರೂಢ ಮಠ ಸವದತ್ತಿ ಹಾಗೂ ಶ್ರೀ ಪರಮಪೂಜ್ಯ ಭಾರ್ಗವಗಿರಿ ಮಹಾಸ್ವಾಮಿಗಳು ಸಾಕಿನ್ ಹೂಲಿಕಟ್ಟಿ ವಸಿಕೊಂಡಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭೆ ಅಧ್ಯಕ್ಷರಾದ ಶ್ರೀಮತಿ ಚಿನ್ನವ ಹುಂಚಣ್ಣವರ ವಹಿಸಿಕೊಂಡಿದ್ದರು, ಮುಖ್ಯ ಅತಿಥಿಗಳಾಗಿ ಸವದತ್ತಿ ತಹಶೀಲ್ದಾರ ಮಲ್ಲಿಕಾರ್ಜುನ್…

Read More