ಫೋನ್ ಚಾರ್ಜ್ ಮಾಡುವ ಅಗತ್ಯವೇ ಇಲ್ಲ: ಶೀಘ್ರದಲ್ಲೇ ಬರಲಿದೆ 50 ವರ್ಷ ತಾಳಿಕೆ ಬರುವ ಬ್ಯಾಟರಿ!!
ಬೀಜಿಂಗ್: ಬ್ಯಾಟರಿ ಖಾಲಿಯಾಗಿ ಮೊಬೈಲ್ಫೋನ್ ಬಂದಾದರೆ ಜೀವವೇ ಹೋದಂತಾಗುತ್ತದೆ. ಆದರೆ, ಈಗ ಹೊಸ ಬ್ಯಾಟರಿಯೊಂದನ್ನು ಸಂಶೋಧನೆ ಮಾಡಲಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡುವ ಅಗತ್ಯವೇ ಇಲ್ಲ. ಇದು 50 ವರ್ಷಗಳವರೆಗೆ ಬಾಳಿಕೆ ಬರುತ್ತದೆ. ಚಾರ್ಜಿಂಗ್ ಅಥವಾ ನಿರ್ವಹಣೆಯ ಅಗತ್ಯವಿಲ್ಲದೆ 50 ವರ್ಷಗಳವರೆಗೆ ವಿದ್ಯುತ್ ಉತ್ಪಾದಿಸಬಹುದು ಎಂದು ಹೇಳಲಾಗುವ ಹೊಸ ಬ್ಯಾಟರಿಯನ್ನು ಚೀನಾದಲ್ಲಿ ಸ್ಟಾರ್ಟ್-ಅಪ್ ಕಂಪನಿಯೊಂದು ಅಭಿವೃದ್ಧಿಪಡಿಸಿದೆ. ದಿ ಇಂಡಿಪೆಂಡೆಂಟ್ನಲ್ಲಿ ಈ ಕುರಿತು ವರದಿಯೊಂದು ಪ್ರಕಟವಾಗಿದೆ. ಈ ಕಂಪನಿಯು ಪರೀಕ್ಷೆಯನ್ನು ಪೂರ್ಣಗೊಳಿಸಿದ ನಂತರ ಮತ್ತು ಅಗತ್ಯವಿರುವ ಎಲ್ಲಾ ಅನುಮತಿಗಳನ್ನು…