ಬಾಣಂತಿಯರ ಸಾವು: ಕ್ರಮಕ್ಕೆ ಮಹಿಳಾ ಆಯೋಗ ಆಗ್ರಹ

WhatsApp Group Join Now

ಬಾಣಂತಿಯರ ಸಾವು: ಕ್ರಮಕ್ಕೆ ಮಹಿಳಾ ಆಯೋಗ ಆಗ್ರಹ ತಾಯಂದಿರ ಸಾವು ಹೆಚ್ಚುತ್ತಿರುವುದರಿಂದ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಬಾಣಂತಿಯರ ಸಾವು ಯಾವ ಕಾರಣಕ್ಕೆ ಸಂಭವಿಸುತ್ತಿದೆ ಎಂದು ಅಧ್ಯ ಯನ ನಡೆಸಲು ರಾಜ್ಯಮಟ್ಟದ ತಜ್ಞ ವೈದ್ಯರ ತಂಡ ರಚಿಸಬೇಕು. ವರದಿ ಪಡೆದು ಸಾವು ತಡೆಗಟ್ಟಬೇಕು ಎಂದಿದ್ದಾರೆ.

ಇದನ್ನು ಓದಿ: https://sancharisathya.in/kannada-rajyotsava-and-kanakadasa-jayanthotsava-celebrations-organized-by-rashtrakuta-kannada-friends-association/

ಬಾಣಂತಿಯರ ಸಾವಿಗೆ ಆಸ್ಪತ್ರೆಯ ಸಿಬ್ಬಂದಿ, ಆಡಳಿತ ಮಂಡ ಆಯ ನಿರ್ಲಕ್ಷ್ಯ ಕಂಡು ಬಂದರೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಸಾವಿಗೆ ಪರಿ ಹಾರ ನೀಡಬೇಕು. ಗರ್ಭ ಧಾರಣೆಯ ನಂತರ ಸುಸೂತ್ರ ಹೆರಿಗೆಯವರೆಗೂ ಕೈಗೊಳ್ಳ ಬೇಕಾದ ಮಾರ್ಗಸೂಚಿಗಳನ್ನು ರಚಿಸಿ ಇವುಗಳನ್ನು ಕಡ್ಡಾಯವಾಗಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಪಾಲಿ ಸುವಂತೆ ಸರ್ಕಾರ ಸೂಚಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

About The Author