ಪವರ್ ಮ್ಯಾನ್ ಮತ್ತು ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಪವರ್ ಮ್ಯಾನಗಳಿಗೆ ಸನ್ಮಾನ ಹಾಗೂ ಅಭಿನಂದನ ಪತ್ರ ವಿತರಣೆ

WhatsApp Group Join Now

ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಕ. ವಿ. ಪ್ರ. ನಿ. ನಿ ಮತ್ತು ಹೆಸ್ಕಾಂ, 659 ಸಂಘದ ವತಿಯಿಂದ ಪವರ್ ಮ್ಯಾನ್ ಮತ್ತು ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹೆಸ್ಕಾಂ ಉಪ ವಿಭಾಗದ ಆವರಣದಲ್ಲಿ ವೇದಿಕೆ ಮೇಲಿನ ಎಲ್ಲ ಗಣ್ಯರಿಂದ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.


ವಿನಾಯಕ ಸೋಮನಟ್ಟಿ ಅವರು ಮಾತನಾಡಿ ಪವರ್ ಮ್ಯಾನ್ ಎನ್ನುವುದು ನಾವು ನಿಜವಾಗಲೂ ನಮ್ಮ ಧರ್ಮವನ್ನು ಪಾಲಿಸಿದಂಗ. ಧರ್ಮ ಎಂದರೇನು? ಧರ್ಮೋ ರಕ್ಷತ ರಕ್ಷತಾ ಎಂದು ಎಲ್ಲರಿಗೂ ತಿಳಿದಿದ್ದೇವೆ. ನಮ್ಮ ಧರ್ಮ ಏನೆಂದರೆ, ನಾವು ಒಂದು ವಿದ್ಯುತ್ ಇಲಾಖೆಯಲ್ಲಿ ಇದ್ದೇವೆ ಹಾಗೂ ಸರಿಯಾಗಿ ವಿದ್ಯುತ್ ಪೂರೈಕೆ ಮಾಡುವುದು ಇದಕ್ಕೆ ಸಂಬಂಧಪಟ್ಟಂತ ಕೆಲಸ ಮಾಡುವುದು ಎಂದು ಹೇಳಿದರು.
ಸಂಘಟನಾ ಕಾರ್ಯದರ್ಶಿ ಮಾರುತಿ ದೊಡಮನಿ ಅವರು ಮಾತನಾಡಿ ಪವರ್ ಮ್ಯಾನಗಳಿಗೆ ಸೇಪ್ಟಿ ಹಾಗೂ ಸುರಕ್ಷತೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಟ್ರಾನ್ಸ್ಫರ್ ಮೇಲೆ ಹತ್ತಿದಾಗ ಪವರ್ ಮ್ಯಾನ್ ಗಳು ಮೊಬೈಲ್ ಬ್ಲೂಟೂತ್ ಗಳನ್ನು ಬಳಕೆ ಮಾಡದೆ ನಿಮ್ಮ ಕೆಲಸವನ್ನು ಸುರಕ್ಷಿತವಾಗಿ ಮುಗಿಸಿ ಸುರಕ್ಷಿತವಾಗಿರಿ ಎಂದು ಪವರ್ ಮ್ಯಾನಗಳಿಗೆ ತಿಳುವಳಿಕೆ ಹೇಳಿದರು.
ಮುತ್ತು ಬನ್ನೂರ್ ಅವರು ಮಾತನಾಡಿ ನಮ್ಮ ಇಲಾಖೆಯಲ್ಲಿ ಸಣ್ಣಪುಟ್ಟ ಅಂಗಾಗಳನ್ನು ಕಳೆದುಕೊಂಡಂತಹ ಪವರ್ ಮ್ಯಾನ್ ಗಳಿಗೆ ಹಾಗೂ ತೀರಿ ಹೋದವರು ಆಗಿರಬಹುದು ಅವರನ್ನು ಸ್ಮರಿಸುವಂತಹ ದಿನ ಆಗಲಿ ಎಂದು ಹೇಳಿದರು.
ಸಹಾಯಕ ಕಾರ್ಯನಿರ್ವಾಹಕ ಅಭಿಯಂತಕರು ಶಿವಪ್ರಕಾಶ್ ಕರಡಿ ಮಾತನಾಡಿ ಪವರ್ ಮ್ಯಾನ್ ಗಳು ಇಲ್ಲದೆ ಇದ್ದರೆ ಇಲಾಖೆ ಇಲ್ಲ ಗ್ರಾಹಕರು ಇಲ್ಲದಿದ್ದರೆ ನಮ್ಮ ಇಲಾಖೆ ಇಲ್ಲ. ಯಾವಾಗಲೂ ಒತ್ತಡದಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲಿ ಇರುತ್ತದೆ. ನಮ್ಮ ನಡುವೆ ಕೆಲಸ ಮಾಡುವ ಪವರ್ ಮ್ಯಾನ್ ಗಳು ದೇಶ ಕಾಯುವ ಯೋಧರಿಗೆ ಸಮಾನ ಮಳೆ, ಗಾಳಿ,ಬಿಸಿಲು,ಚಳಿ ಎನ್ನದೆ ತುರ್ತು ಪರಿಸ್ಥಿತಿಯಲ್ಲಿ ಜೀವದ ಹಂಗು ತೊರೆದು ಅಪಾಯಕಾರಿ ವಿದ್ಯುತ್ ಜೊತೆ ಕೆಲಸ ಮಾಡುವ ಇವರುಗಳನ್ನು ನಮ್ಮ ಹೆಮ್ಮೆಯ ಸೈನಿಕರೆಂದು ಹೇಳುತ್ತೇವೆ ಎಂದು ಹೇಳಿದರು
ಕಾರ್ಯನಿರ್ವಾಹಕ ಅಭಿಯಂತರರು ಹೆಸ್ಕಾಂ ಡಿವಿಜನ್ ರಾಮದುರ್ಗ ಕಿರಣ್ ಸಣ್ಣಕ್ಕಿ ಇವರು ಮಾತನಾಡಿ ಪವರ್ ಮ್ಯಾನ್ ಗಳು ಸೈನಿಕರಿಗಿಂತ ಹೆಚ್ಚು ಕಾರ್ಯ ನಿರ್ವಹಿಸುತ್ತಿದ್ದಾರೆ. ಪವರ್ ಮ್ಯಾನ್ ಗಳು ಬರಿ ಕೆಲಸ ಕೆಲಸ ಎನ್ನುತ್ತಾರೆ ಅದರಲ್ಲಿಯೂ ಕೂಡ ಒಳ್ಳೆಯ ಕ್ರೀಡಾಪಟುಗಳು ಇದ್ದಾರೆ, ಸಂಗೀತಗಾರರು ಇದ್ದಾರೆ ಇಂತಹ ಒಂದು ಕಲೆ ಇರುವ ನಮ್ಮ ಪವರ್ ಮ್ಯಾನಗಳಿಗೆ ಪವರ್ ಮ್ಯಾನ ದಿನದಂದು ಒಂದು ಒಳ್ಳೆಯ ವೇದಿಕೆಯಾಗಿ ಅವರನ್ನು ಗುರುತಿಸಲಿ ಎಂದು ಹೇಳಿದರು.
CEC ರಾಮದುರ್ಗ ಮಧುಸೂದನ ಮಾಳದಕರ ಪ್ರಸ್ತಾವಿಕವಾಗಿ ಮಾತನಾಡಿದರು
ಈ ವೇಳೆ ಪವರ್ ಮ್ಯಾನಗಳಿಗೆ ಸನ್ಮಾನ ಹಾಗೂ ಅಭಿನಂದನ ಪತ್ರ ವಿತರಣೆ ಮಾಡಿದರು


ಈ ಒಂದು ಕಾರ್ಯಕ್ರಮದಲ್ಲಿ ಸ್ಥಳೀಯ ಸಮಿತಿ ಅಧ್ಯಕ್ಷರು ಸಂತೋಷ್ ಹಡಪದ, , ನಗರ ಕಾರ್ಯದರ್ಶಿ ಗುರುಪ್ರಸಾದ್ ಚೌಧರಿ, ಸ್ಥಳೀಯ ಸಮಿತಿಯ ಅಧ್ಯಕ್ಷರು ಗ್ರಾಮೀಣ ಎಮ್ ಕೆ ಭಾಗವಾನ್, CEC ಬೆಳಗಾವಿ ಗ್ರಾಮೀಣ ಹರೀಶ್ ಕಡ್ಡುಗೋಳ, CEC ಸಿಂಧೆ ಉಪಾಧ್ಯಕ್ಷರು ಬೆಳಗಾವಿ ವಲಯ, , ಈರಣ್ಣ ನಾಯಕರ ಕಲ್ಯಾಣ ಸಂಸ್ಥೆಯ ಅಧ್ಯಕ್ಷರು , ನಟರಾಜ ಸುಲಾಕೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತಕರು LTMR, ವೀಣಾ ಎಸ್ ಲಟ್ಟಿ, ನಾಗರಾಜ್ ಸೋನಾರ್,ಶಶಿಕಾಂತ್ ಗಾಡಿ ವಡ್ಡರ್, ತಾಲೂಕಿನ ಎಲ್ಲಾ ಪವರ್ ಮ್ಯಾನ್ ಗಳು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

About The Author