ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಜರಗಿತ್ತು.
ರಾಮದುರ್ಗ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 27 ಸದಸ್ಯರ ಹೊಂದಿದೆ ಇದರಲ್ಲಿ ಕಾಂಗ್ರೆಸ್ 10, ಪಕ್ಷತ್ರ 1, ಬಿಜೆಪಿ 16, ಇದ್ದು ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ನಾಮಪತ್ರ ಸಲ್ಲಿಸಿದರು ಕಾಂಗ್ರೆಸಿನಲ್ಲಿ ಶಂಕ್ರಪ್ಪ ಸೋಳ್ಳೇಭಾವಿ, ಬಿಜೆಪಿಯಲ್ಲಿ ,ಲಕ್ಷ್ಮಿ ಜಗದೀಶ್ ಕಟಕೋಳ, ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಒಂದು ನಾಮಪತ್ರ ಸಲ್ಲಿಸಿದರು ಸರಿತಾ ಧೂತ, ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ ನಾಮಪತ್ರ ಹಿಂಪಡೆದ ಶಂಕ್ರಪ್ಪ ಸುಳ್ಳಿಬಾವಿ
ರಾಮದುರ್ಗ ಪಟ್ಟಣದ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳಿಗೆ ನಿಯಮಾನುಸಾರ ಚುನಾವಣೆ ಅಧಿಕಾರಿಯಾದ ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಚುನಾವಣೆಯನ್ನು ನಡಸಿದರು.
ಮೀಸಲಾತಿ ಅಧಿಸೂಚನೆಯ ಪ್ರಕಾರ ಅಧ್ಯಕ್ಷ ಸ್ಥಾನದ ಮೀಸಲಾತಿಯು ಹಿಂದುಳಿದ ವರ್ಗ “ಅ” ಹಾಗೂ ಉಪಾಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ “ಬ” (ಮಹಿಳೆ) ಗಾಗಿ ಕಾಯ್ದಿರಿಸಲಾಗಿತ್ತು.
ಪುರಸಭೆ ಅಧ್ಯಕ್ಷರಾಗಿ ಬಿಜೆಪಿಯ ಲಕ್ಷ್ಮಿ ಜಗದೀಶ್ ಕಡಕೋಳ, ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿಯ ಸರಿತಾ ಧೂತ, ಆಯ್ಕೆ ಆದರೂ ಎಂದು ಚುನಾವಣಾ ಅಧಿಕಾರಿ ತಹಶೀಲ್ದಾರ್ ಪ್ರಕಾಶ್ ಹೊಳೆಪ್ಪಗೋಳ ಸುದ್ದಿಗಾರರಿಗೆ ತಿಳಿಸಿದರು.
ಈ ಸಂಧರ್ಭದಲ್ಲಿ ಪುರಸಭೆಯ ಮುಖ್ಯಧಿಕಾರಿ ಈರಣ್ಣ ಗುಡದಾರಿ ಉಪಸ್ಥಿತರಿದ್ದರು.