ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ” ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶಿಂಧೆ ಉದ್ಘಾಟಿಸಿದರು

WhatsApp Group Join Now

ಬೆಳಗಾವಿ ನಗರದ ಹಳೆ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಬುಧವಾರ “ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ” ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶಿಂಧೆ ಅವರು ಶಶಿಗೆ
ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ. ಈಗಿನ ಪ್ರಸ್ತುತ ಸಮಾಜದಲ್ಲಿ
ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ತಮ್ಮದೆಯಾದ ಚಾಪನ್ನು
ಮೂಡಿಸಿದ್ದಾರೆ ಹಾಗೂ ಎಲ್ಲ ಸ್ತ್ರೀಯರ ಪಾತ್ರವೂ
ಬಹುಮುಖ್ಯವಾಗಿದ್ದು, ಎಲ್ಲ ಮಹಿಳೆಯರನ್ನು ಗೌರವಿಸಿ
ಹಾಗೂ ಜಿಲ್ಲಾ ಪಂಚಾಯತಿ ಕಛೇರಿಯ ವಾತಾವರಣ ಒಂದೇ
ಕುಟುಂಬದಂತೆ ಇರಬೇಕು ಎಂದು ಕಛೇರಿಯ ಸಿಬ್ಬಂದಿಗಳಿಗೆ ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶಿಂಧೆ ರವರು ಹೇಳಿದರು.

ಈ ಒಂದು ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿಯ ಬಸವರಾಜ
ಅಡವಿಮಠ ಉಪಕಾರ್ಯದರ್ಶಿ ರೇಖಾ ಡೊಳ್ಳಿನವರ ಉಪಕಾರ್ಯದರ್ಶಿ ಗಂಗಾಧರ
ದಿವಟರ್ ಯೋಜನಾ ನಿರ್ದೇಶಕರು, ಜಯಶ್ರೀ ನಂದೆಣ್ಣವರ
ಸಹಾಯಕ ನಿರ್ದೇಶಕರು, ಕಛೇರಿಯ ವ್ಯವಸ್ಥಾಪಕರು ಹಾಗೂ
ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು .

About The Author