ಪತ್ರಕರ್ತರನ್ನು ನಿಂದಿಸಿ ಧಮ್ಕಿ ಹಾಕಿದ ನೆಲಮಂಗಲ ಬಿಜೆಪಿ ಅಧ್ಯಕ್ಷ ಜಗದೀಶ್ ಚೌಧರಿ ವಿರುದ್ದ ಪತ್ರಕರ್ತರ ಪ್ರತಿಭಟನೆ.

WhatsApp Group Join Now

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕು ಪತ್ರಕರ್ತರನ್ನು ಬಿಜೆಪಿ ತಾಲ್ಲೂಕು ಅಧ್ಯಕ್ಷ ಜಗದೀಶ್ ಚೌದ್ರಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿರುವ ವಿಚಾರವಾಗಿ ನೆಲಮಂಗಲ ತಾಲ್ಲೂಕು ಸ್ವಾಭಿಮಾನಿ ಪತ್ರಕರ್ತರುಗಳು ಪ್ರೆಸ್ ಕ್ಲಬ್ ಕೌನ್ಸಿಲ್ ನೇತೃತ್ವದಲ್ಲಿ ನೆಲಮಂಗಲ ತಾಲ್ಲೂಕು ಕಚೇರಿ ಎದುರು ಜಗದೀಶ್ ಚೌದ್ರಿ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿ ರೌಡಿ ಶೀಟರ್ ಜಗದೀಶ್ ಚೌದ್ರಿರವರನ್ನು ಗಡಿಪಾರು ಮಾಡುವಂತೆ ಆಗ್ರಹಿಸಿದರು.

ನೆಲಮಂಗಲ ಪತ್ರಕರ್ತರ ಪ್ರತಿಭಟನೆಗೆ ವಕೀಲ್ ಸಾಬ್ ಎಂದೇ ಕ್ಯಾತಿಗಳಿಸಿರುವ ಬಿಗ್ ಬಾಸ್ ಸ್ಪರ್ದಿ ಲಾಯೆರ್ ಜಗದೀಶ್ ರವರು ಬೆಂಬಲ ನೀಡಿ ಪ್ರತಿಭಟನೆಯಲ್ಲಿ ಭಾಗವಹಿಸಿ ಪತ್ರಕರ್ತರ ಜೊತೆ ನಿಂತು ರೌಡಿ ಶೀಟರ್ ಜಗದೀಶ್ ಚೌದ್ರಿ ಹೆದರಿಕೆ ಬೆದರಿಕೆಗೆ ಪತ್ರಕರ್ತರು ಹೆದರಬಾರದು ರೌಡಿ ಶೀಟರ್ ನನ್ನು ಪೊಲೀಸರು ಮೊದಲು ಮಟ್ಟಹಾಕಿ ಪತ್ರಕರ್ತರನ್ನು ರಕ್ಷಣೆ ಮಾಡಬೇಕು. ನಾನು ಕೂಡ ನಿಮ್ಮ ಜೊತೆ ಇದ್ದೇನೆ ಪೊಲೀಸರು ಕೂಡಲೇ ಆತನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಸರ್ಕಾರಕ್ಕೆ ನಾನು ಒತ್ತಾಯ ಮಾಡುತ್ತೇನೆ ಎಂದು ತಿಳಿಸಿದರು.


ನೆಲಮಂಗಲ ತಾಲ್ಲೂಕು ಪತ್ರಕರ್ತರಿಗೆ ಜಗದೀಶ್ ಚೌದ್ರಿ ಕೆಲ ವರ್ಷಗಳ ಹಿಂದೆ ಜಾಹಿರಾತು ನೀಡಿದ್ದು ಆ ಹಣವನ್ನು ಫೋನ್ ಪೇ ಮೂಲಕ ನೀಡಿ ಇನ್ನುಳಿದ ಹಣವನ್ನು ನೀಡದೆ ಪತ್ರಕರ್ತರು ಹಣ ಕೇಳಿದ್ರೆ ಬೆದರಿಕೆ ಹಾಕಿ ಪತ್ರಕರ್ತರು ಬ್ಲಾಕ್ ಮೇಲರ್ ಎಂಬಂತೆ ಬಿಂಬಿಸಿದ್ದಾರೆ. 3 ದಿನದ ಹಿಂದೆ ಜಗದೀಶ್ ಚೌದ್ರಿ ವಿರುದ್ಧ ಟಿ.ಬೇಗೂರು ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಭ್ರಷ್ಟ ಅಧಿಕಾರಿಗಳಿಗೆ ಜಗದೀಶ್ ಚೌದ್ರಿ ಬೆಂಬಲ ನೀಡಬಾರದು ಎಂದು ತಿಳಿಸಿದ್ದು ಈ ಬಗ್ಗೆ ಸುದ್ದಿ ಮಾಡಿದ ಪತ್ರಕರ್ತರುಗಳಿಗೆ ಅವ್ಯಾಚ್ಚ ಶಬ್ದಗಳಿಂದ ನಿಂದಿಸಿ ಸುದ್ದಿ ಮಾಡಿದ ಪತ್ರಕರ್ತರನ್ನು ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ್ದು ಪತ್ರಕರ್ತರು ರೋಲ್ ಕಾಲ್ ಎಂದು ಜಗದೀಶ್ ಚೌದ್ರಿ ಸಾರ್ವಜನಿಕವಾಗಿ ಪತ್ರಕರ್ತರನ್ನು ನಿಂದಿಸಿದ್ದು

ಪ್ರೆಶ್ನೆ ಮಾಡಿದ ಪತ್ರಕರ್ತರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಹಚರ ಮೂಲಕ ತೇಜೋವದೆ ಮಾಡಲು ಮುಂದಾಗಿ ಪತ್ರಕರ್ತರ ಕುಟುಂಬದ ಸಣ್ಣ ಮಗು ಸಹಿತ ಕುಟುಂಬ ಸದಸ್ಯರ ಭಾವಚಿತ್ರಗಳನ್ನು ಹರಿಬಿಟ್ಟು ಹೆದರಿಕೆ ಹಾಕಿದ್ರು ಈ ಬಗ್ಗೆ ಆಕ್ರೋಶಗೊಂಡ ಪತ್ರಕರ್ತರು ರೌಡಿ ಶೀಟರ್ ಜಗದೀಶ್ ಚೌದ್ರಿ ಗಡಿ ಪಾರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಡಿವೈಎಸ್ಪಿ ಜಗದೀಶ್ ಹಾಗೂ ತಹಸೀಲ್ದಾರ್ ಅಮೃತ್ ಅತ್ರೆಶ್ ರವರಿಗೆ ಪತ್ರಕರ್ತರು ಮನವಿ ಸಲ್ಲಿಸಿದರು.

About The Author