ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ
ಚಿಂಚಖಂಡಿ ಗ್ರಾಮದಲ್ಲಿ ಎಕ್ಕೆರೆಮ್ಮ, ಕರೆಮ್ಮ ದೇವಿಗೆ ಹೂ ಕಟ್ಟುವ ಮೂಲಕ ಪವಾಡ ಜರಗುವುದು.
ನಿಮ್ಮದು ಯಾವುದೇ ಸಮಸ್ಯೆ ಇರಲಿ ಈ ದೇವರಿಗೆ ದಂಡಿ ಹಾಗೂ ಹೂ ಕಟ್ಟುವುದರಿಂದ ನಿಮ್ಮ ಸಮಸ್ಯೆ ಬಗೆ ಹರಿಯೋದು ಅಥವಾ ಇಲ್ಲ ಎಂಬುದು ಹೂವಿನ ಮುಖಾಂತರ ಈ ದೇವಿ ಭಕ್ತರೆ ತಿಳಿಸಿಕೊಡುತ್ತಾಳೆ.
ಭಕ್ತರು ತಮ್ಮ ಸಮಸ್ಯೆಗಳನ್ನು ದೇವಿಯ ಮುಂದೆ ಸಂಕಲ್ಪ ಮಾಡಿ ಬೇಡಿಕೊಂಡರೆ
ದೇವಿಯ ಮೇಲೆ ಇದ್ದಂತ ಹೂವಿನ ಮುಖಾಂತರ ಭಕ್ತರ ಕಷ್ಟಗಳು ಪರಿಹಾರ ಆಗುತ್ತದೆ ಅಥವಾ ಇಲ್ಲ ಎಂಬುವುದು ಹೂವಿನ ಮುಖಾಂತರ ದೇವಿಯು ತಿಳಿಸುತ್ತಾಳೆ ದೇವಿಯ ಬಲಗಡೆಯಿಂದ ಹೂಗಳು ಬಿದ್ದರೆ ನಿಮ್ಮ ಸಮಸ್ಯೆಯ ಬಗೆಹರಿಯುವುದು ಹಾಗೂ ದೇವಿಯ ಎಡಗಡೆಯಿಂದ ಹೂವು ಬಿದ್ದರೆ ಏನು ಸಮಸ್ಯೆ ಇದೆ ಎಂಬುದು ಸಾರ್ವಜನಿಕರ ಮೂಢನಂಬಿಕೆಯಾಗಿದೆ. ನಿಮ್ಮ ಕಷ್ಟ ಬಗೆ ಹರಿಯದೆ ಇದ್ದರೆ ಈ ದೇವಿಗೆ 5 ಮಂಗಳವಾರ ಅಥವಾ 9 ಮಂಗಳವಾರ ಬಂದು ಪೂಜೆ ಮಾಡಬೇಕು ಪೂಜೆ ವೇಳೆಯಲ್ಲಿ ಕಾಯಿ ಕಟ್ಟುವುದಾದರೆ ಪೂಜ್ಯರು ಹೇಳುತ್ತಾರೆ ನಿಮ್ಮ ಕಷ್ಟಗಳು ಪರಿಹಾರ ಆಗಬೇಕೆಂದು ಎಂದು ಸಂಕಲ್ಪ ಮಾಡಿಕೊಂಡು ದೇವರಿಗೆ ಕಾಯಿ ಕಟ್ಟುವುದರಿಂದ ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಕೂಡ ಬಗೆಹರಿಯುವುದು
ಹಾಗೂ ದೇವಿಗೆ ಬಲಗಡೆಯಿಂದ ಐದು ಸುತ್ತು ಪ್ರದರ್ಶನ ಹಾಗೂ ಎಡಗಡೆಯಿಂದ ಆರು ಸುತ್ತು ಪ್ರದರ್ಶನ ಹಾಕಬೇಕು ಪ್ರದರ್ಶನ ಹಾಕಿದ ಮೇಲೆ ನಿಮ್ಮ ಸಮಸ್ಯೆಗಳ ಬಗ್ಗೆ ಹೂವಿನ ಮುಖಾಂತರ ಎಕ್ಕೆರೆಮ್ಮ, ಕರೆಮ್ಮ ದೇವಿ ತಿಳಿಸಿಕೊಡುತ್ತಾಳೆ ಎಂದು ಭಕ್ತರ ನಂಬಿಕೆಯಾಗಿದೆ