ಇದರಲ್ಲಿರುವವರು ಶಿವಮೊಗ್ಗ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಎಂದು ಹೇಳಲಾಗುತ್ತಿದೆ. ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಯಲು ಬಂದ ಅವರಿಗೆ ಫೋನಿನಲ್ಲಿ ಇನ್ನೊಂದು ಕಡೆಯಿಂದ ಬೈದು ಬೆದರಿಕೆ ಹಾಕುತ್ತಿರುವವರು ಜಿಲ್ಲೆಯ ಶಾಸಕರೊಬ್ಬರ ಪುತ್ರ ಎನ್ನಲಾಗುತ್ತಿದೆ. ಆ ಪರಮಕೊಳಕ ಕ್ರಿಮಿನಲ್ ಯಾರೆಂದು ನಿಮಗೆ ಗೊತ್ತೇ?
ಅಂದಹಾಗೆ, ಎಲ್ಲಿಯವರೆಗೆ ಸರ್ಕಾರಿ ಅಧಿಕಾರಿಗಳು ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ತಮ್ಮ ಕೆಲಸ ಮಾಡುವುದಿಲ್ಲವೋ ಅಲ್ಲಿಯವರೆಗೆ ಭ್ರಷ್ಟ ಮತ್ತು ಕ್ರಿಮಿನಲ್ ರಾಜಕಾರಣಿಗಳು ಅವರಿಗೆ ಬೆಲೆ ಕೊಡುವುದಿಲ್ಲ. ಈ ತರಹದ ಘಟನೆಗಳು ನಡೆಯುತ್ತಿರುತ್ತವೆ. ಒಮ್ಮೆ ಬಹುಸಂಖ್ಯಾತ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲು ಆರಂಭಿಸಿದರೆ ಪೋಕರಿಗಳೆಲ್ಲ ತಮ್ಮ ಬಿಲ ಸೇರುತ್ತಾರೆ. ಇಲ್ಲವಾದರೆ ಅಲ್ಲೊಬ್ಬರು ಇಲ್ಲೊಬ್ಬರು ಪ್ರಾಮಾಣಿಕರು ಈ ತರಹ ದಾಳಿಗೆ ಒಳಗಾಗುತ್ತಾರೆ ಮತ್ತು ಮಿಕ್ಕ ಭ್ರಷ್ಟ ಅಧಿಕಾರಿಗಳು ಭ್ರಷ್ಟರ ಮನೆಯ ಕಕ್ಕಸುಗುಂಡಿ ತೊಳೆಯುತ್ತಾರೆ.
ಈ ಕೂಡಲೇ ಸರ್ಕಾರ ಈ ಅಧಿಕಾರಿಗೆ ರಕ್ಷಣೆ ಕೊಡಬೇಕು ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ಕೂಡಲೇ Suo Moto ಪ್ರಕರಣ ದಾಖಲಿಸಿ ಬೆದರಿಕೆ ಹಾಕಿದ ನೀಚನ ಮೇಲೆ ಕ್ರಮ ಜರುಗಿಸಬೇಕು.
ರಾಜ್ಯದಾದ್ಯಂತ ಇರುವ ಪ್ರಾಮಾಣಿಕ ಸರ್ಕಾರಿ ಅಧಿಕಾರಿಗಳು ಈ ಮಹಿಳಾ ಅಧಿಕಾರಿಯ ಬೆಂಬಲಕ್ಕೆ ನಿಲ್ಲಬೇಕು.
ಶಿವಮೊಗ್ಗ ಜಿಲ್ಲೆಯ KRS ಪಕ್ಷದ ಮುಖಂಡರು ಈ ಕೂಡಲೇ ಈ ಅಧಿಕಾರಿಯನ್ನು ಭೇಟಿ ಮಾಡಿ ನೈತಿಕ ಬೆಂಬಲ ನೀಡಬೇಕು ಮತ್ತು ಅವರು ಪೊಲೀಸರಿಗೆ ದೂರು ನೀಡಲು ಒತ್ತಾಯಿಸಬೇಕು ಎಂದು ಈ ಮೂಲಕ ನಾನು ಸೂಚಿಸುತಿದ್ದೇನೆ.
– ರವಿ ಕೃಷ್ಣಾರೆಡ್ಡಿ ರಾಜ್ಯಾಧ್ಯಕ್ಷ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ.