ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮದ ಹತ್ತಿರ ಮುದುಕವಿ ಘಾಟನಲ್ಲಿ ಸಕ್ಕರೆ ತುಂಬಿದ ಲಾರಿ ಪಲ್ಟಿ ಯಾಗಿದ್ದು ಸ್ಥಳದಲ್ಲಿ ಒಬ್ಬರು ಸಾವನ್ನು ಒಪ್ಪಿದ್ದಾರೆ ನಾಲ್ಕು ಜನರಿಗೆ ಗಂಭೀರ ಗಾಯವಾಗಿದ್ದು.
ಗಾಯವಾದವರನ್ನು ರಾಮದುರ್ಗ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲೆ ಮಾಡಲಾಗಿದೆ.
ಸಕ್ಕರೆ ತುಂಬಿಕೊಂಡು ಕುಳಗೇರಿಯಿಂದ ರಾಮದುರ್ಗಕ್ಕೆ ಬರುವಾಗ ರವಿವಾರ ರಾತ್ರಿ 10.30 ಗಂಟೆಗೆ ಈ ಘಟನೆ ನಡೆದಿದ್ದು ಲಾರಿಯ ನಂಬರ್ kA-29 B6983 ಲಾರಿಯಲ್ಲಿ ಹಲಗತ್ತಿ ಗ್ರಾಮದ ಮೂರು ಜನ ಹಾಗೂ ಹೊಸಕೋಟೆ ಗ್ರಾಮದ ಎರಡು ಜನ ಒಟ್ಟು ಐದು ಜನ ಸೇರಿ ಬಾಗಲಕೋಟೆಗೆ ಹೋಗಿದ್ದರು ತಮ್ಮನಿಗೆ ಹೋಗಬೇಕಾದರೆ ರಾತ್ರಿ ಯಾವುದೇ ವಾಹನ ಇಲ್ಲದ ಕಾರಣ ಇವರು ಸಕ್ಕರೆ ತುಂಬಿದ ಲಾರಿಯಲ್ಲಿ ಪ್ರಯಾಣ ಮಾಡುವಾಗ ಮುದಕವಿ ಘಾಟ್ ನಲ್ಲಿ ಲಾರಿ ಪಲ್ಟಿ ಆಗಿದೆ ಈ ವಾಹನದಲ್ಲಿ ಇದ್ದಂತೆ ಐದು ಜನರಲ್ಲಿ ಬಾಲಪ್ಪ ತಿಮ್ಮಣ್ಣ ಮುದುಕವಿ ಇವರು ಸಾವನ್ನು ಒಪ್ಪಿದ್ದಾರೆ. ಇನ್ನುಳಿದ ನಾಲ್ಕು ಜನರ ಯಲ್ಲವ್ವ ಉಮೇಶ್ ದಾಸಪ್ಪನವರ , ರುಕ್ಮವ್ವ ಕಾಣಪ್ಪ ಗಿಡ್ಡಣ್ಣವರ, ಉಮೇಶ ಯಂಕಪ್ಪ ದಾಸಪ್ಪನವರ , ಮಂಜುಳಾ ತಿಮ್ಮಣ್ಣ ಮುದುಕವಿ ಎಂಬವರಿಗೆ ಗಂಭೀರ ಗಾಯಗಳಾಗಿದ್ದರೆ ಅವರನ್ನು ತಾಲೂಕ ಆಸ್ಪತ್ರೆಗೆ ದಾಖಲಿಸಲಾಗಿದೆ ಹೆಚ್ಚಿನ ಚಿಕಿತ್ಸೆಗಾಗಿ ರಾಮದುರ್ಗದ ಮಲ್ಟಿ ಸ್ಪೆಷಾಲಿಟ್ ಆಸ್ಪತ್ರೆಯಲ್ಲಿ ದಾಖಲೆ ಮಾಡಲಾಗಿದ್ದು
ಚಿಕಿತ್ಸೆ ಫಲಕಾರಿಯಾಗದೆ ಯಲ್ಲವ್ವ ಉಮೇಶ್ ದಾಸಪ್ಪ ನವರ ಕೂಡ ಸಾವನ್ನು ಒಪ್ಪಿದ್ದಾರೆ
