BREAKING NEWS

ಬೆಟಗೇರಿ:ಕೆನರಾ ಬ್ಯಾಂಕ್‌ನಲ್ಲಿ ಸಾಲ ಮರುಪಾವತಿ ಮತ್ತು ಸ್ವ ಸಹಾಯ ಸಂಘಗಳ ಮೇಳದ ಕಾರ್ಯಕ್ರಮ.

ಸಕಾಲದಲ್ಲಿ ಸಾಲ ಮರುಪಾವತಿಸಿ ಬ್ಯಾಂಕಿನ ಪ್ರಗತಿಗೆ ಸಹಕರಿಸಿ: ಎಮ್.ಪನೀಶಾಯಣ್ಣಬೆಟಗೇರಿ:ವಿವಿಧ ಯೋಜನೆಗಳಡಿಯಲ್ಲಿ ರೈತರಿಗೆ ಮತ್ತು ಸ್ವಸಹಾಯ ಸಂಘಗಳಿಗೆ ಹಾಗೂ ಗ್ರಾಹಕರಿಗೆ, ಗ್ರಾಮೀಣ ವಲಯದ ಕೆನರಾ ಬ್ಯಾಂಕನಿಂದ ದೊರಕುವ ಸಾಲ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಚಿಕ್ಕೋಡಿ ಕೆನರಾ ಬ್ಯಾಂಕ್ ರಿಜನಲ್ ಆಫೀಸ್‌ನ ಎಜಿಎಮ್ ಎಮ್.ಪನೀಶಾಯಣ್ಣ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಕೆನರಾ ಬ್ಯಾಂಕ್ ಶಾಖೆಯ ವತಿಯಿಂದ ಇತ್ತೀಚೆಗೆ ನಡೆದ ಸಾಲ ಮರುಪಾವತಿ ಮತ್ತು ಸ್ವ ಸಹಾಯ ಸಂಘಗಳ ಮೇಳ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಬ್ಯಾಂಕಿನಿAದ ಪಡೆದ…

Read More

ಒಳಮೀಸಲಾತಿ ಹಂಚಿಕೆಯಲ್ಲಿ 63 ಸಮುದಾಯಗಳಿಗೆ ನ್ಯಾಯ ಒದಗಿಸಿಕೊಡಬೇಕೆಂದು ಬಂಜಾರ, ಬೋವಿ ವಡ್ಡರ, ಸಮುದಾಯಗಳಿಂದ ಮಾನ್ಯ ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಅಂಬೇಡ್ಕರ ಸರ್ಕಲದಲ್ಲಿ ಒಳಮೀಸಲಾತಿಯಿಂದ ಅನ್ಯಾಯಕ್ಕೊಳಗಾದ ಬಂಜಾರ, ಭೋವಿವಡ್ಡರ, ಕೊರಮ, ಕೊರಚ ಸಮುದಾಯಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಿ ಮಾನ್ಯ ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಭಾರತದಲ್ಲಿ ಸಹಸ್ರಾರು ವರ್ಷಗಳಿಂದ ಜಾರಿಯಲ್ಲಿರುವ ವರ್ಣವ್ಯವಸ್ಥೆ, ಜಾತಿಪದ್ಧತಿ ಮತ್ತು ಅಸ್ಪೃಶ್ಯತೆಯಿಂದಾಗಿ ನೂರಾರು ಜಾತಿಗಳು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುತ್ತಾರೆ. ಸ್ವಾತಂತ್ರ್ಯಾ ನಂತರ ಶೋಷಿತ ವರ್ಗಗಳಿಗೆ ನ್ಯಾಯ ಒದಗಿಸಿ ಪರಿಶಿಷ್ಟ ಜಾತಿ & ಪ.ಪಂಗಡಗಳೆಂದು ಸಂವಿಧಾನಾತ್ಮಕವಾಗಿ ಹಲವು ಸೌಲಭ್ಯಗಳನ್ನು ಪಡೆಯಲು ಡಾ. ಬಾಬಾಸಾಹೇಬ ಅಂಬೇಡ್ಕರವರು…

Read More

ಹಲಗತ್ತಿ ಗ್ರಾಮದಲ್ಲಿ 12 ಅಡಿ ಎತ್ತರದ ಗಣಪತಿ ಪ್ರತಿಷ್ಠಾಪನೆ.

ಹಲಗತ್ತಿ ಗ್ರಾಮದ ಗಣೇಶನ ಹಬ್ಬದಲ್ಲಿ ಹೆಚ್ಚಾಗಿ ಗಮನ ಸೆಳೆಯುವುದು 12 ಅಡಿ ಎತ್ತರ ಗಾತ್ರದ ಗಣೇಶ ಮೂರ್ತಿಗಳು. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಶ್ರೀ ಬಸವೇಶ್ವರ ಗಜಾನನ ಉತ್ಸವ ಕಮಿಟಿಯಿಂದ 13ನೇ ವರ್ಷದ ಅದ್ದೂರಿ ಗಣೇಶ ಉತ್ಸವದಂದು ಆಗಸ್ಟ್ 27ರಂದು 12 ಅಡಿ ಎತ್ತರದ ಗಣಪತಿಯನ್ನು 11 ದಿನಗಳವರೆಗೆ ಪ್ರತಿಷ್ಠಾಪಿಸಲಾಗಿದೆ. ಸೆಪ್ಟೆಂಬರ್ 5 ರಂದು ಹೋಳಗಿ ಊಟದ ಪ್ರಸಾದ ಇರುತ್ತದೆ. ಹಾಗೂ ಸೆಪ್ಟೆಂಬರ್ 6 ರಂದು ರಾಮದುರ್ಗ ತಾಲೂಕಿನ ಘಟಕನೂರು…

Read More

ರಾಮದುರ್ಗ | ವಾಜಪೇಯಿ ನಗರದ 5ನೇ ದಿನದ ಗಣಪತಿ ವಿಸರ್ಜನೆ.

ಬೆಳಗಾವಿ ಜಿಲ್ಲೆ, ರಾಮದುರ್ಗ ಪಟ್ಟಣದ ವಾಜಪೇಯಿ ನಗರದಲ್ಲಿ ಗಣೇಶೋತ್ಸವ ನಿಮಿತ್ತ ಆ. 27ರಂದು ಪ್ರತಿಷ್ಠಾಪಿಸಲಾಗಿದ್ದ ಹಲವು ಗಣಪತಿ ಮೂರ್ತಿಗಳನ್ನು ಐದನೇ ದಿನವಾದ ಭಾನುವಾರ ವಿಸರ್ಜಿಸಲಾಯಿತು. ಪಟ್ಟಣದ ಸಾರ್ವಜನಿಕ ಸ್ಥಳಗಳು ಹಾಗೂ ಮನೆಗಳಲ್ಲಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಮನೆಗಳಲ್ಲಿ ಪ್ರತಿಷ್ಠಾಪಿಸಲಾದ ಮೂರ್ತಿಗಳನ್ನು ಕುಟುಂಬದ ಸದಸ್ಯರೆಲ್ಲರೂ ಸೇರಿಕೊಂಡು ವಿಸರ್ಜನಾ ಸ್ಥಳಕ್ಕೆ ಕೊಂಡೊಯ್ದು ವಿಸರ್ಜಿಸಿದರು. ಸಾರ್ವಜನಿಕ ಗಣಪತಿ ಮೂರ್ತಿಗಳನ್ನು ಟ್ರ್ಯಾಕ್ಟರಗಳ ಮೂಲಕ ವಿಸರ್ಜನಾ ಸ್ಥಳಕ್ಕೆ ಕೊಂಡೊಯ್ಯಲಾಯಿತು. ಮೆರವಣಿಗೆಯುದ್ದಕ್ಕೂ ಜಮಾಯಿಸಿದ್ದ ಯುವಜನತೆ, ಕುಣಿತದೊಂದಿಗೆ ಪಟಾಕಿಗಳ ಸದ್ದು ಸಹ ಜೋರಾಗಿತ್ತು. ರಾಮದುರ್ಗ ಪಟ್ಟಣದಲ್ಲಿರುವ ಮಲಪ್ರಭಾ…

Read More

ಬೆಳಗಾವಿ ಜಪ್ತಿಯಾದ ಮರಳನ್ನು ವಿಲೇವಾರಿ ಮಾಡಲು ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಗಣಿ- ಭೂವಿಜ್ಞಾನ ಇಲಾಖೆ ಅಧಿಕಾರಿ

ಬೆಳಗಾವಿ‌ ಜಪ್ತಿಯಾದ ಮರಳನ್ನು ವಿಲೇವಾರಿ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬೆಳಗಾವಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಫಯಾಝ್‌ ಅಹ್ಮದ್ ಶೇಖ್ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಅಥಣಿ ಪಟ್ಟಣದ ನಿವಾಸಿ ಶೀತಲ್ ಗೋಪಾಲ ಸನದಿ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಲೋಕಾಯುಕ್ತ ಇಲಾಖೆ ಈ ಕಾರ್ಯಾಚರಣೆ ನಡೆಸಿದೆ. ಶೀತಲ್ ಅವರ ಪರಿಚಯದ ಗುತ್ತಿಗೆದಾರ ಬಿ.ಕೆ.ಮಗದುಮ್ಮ ಅವರಿಗೆ ಐನಾಪೂರ ಗ್ರಾಮದ ಎಸ್.ಸಿ ಕಾಲೋನಿಯಲ್ಲಿ ಸಿ.ಸಿ ರಸ್ತೆ ಕಾಮಗಾರಿಗೆ, ಲೋಕೋಪಯೋಗಿ ಇಲಾಖೆಯ…

Read More

ರಾಮದುರ್ಗದಲ್ಲಿ ಸಂಭ್ರಮದಿಂದ ಗಣೇಶ ಹಬ್ಬ ಆಚರಣೆ.

ರಾಮದುರ್ಗ ತಾಲೂಕಿನಾದ್ಯಂತ ಸೇರಿದಂತೆ ಗಣೇಶ ಹಬ್ಬವನ್ನು ಬುಧವಾರ ಸಂಭ್ರಮದಿಂದ ಆಚರಿಸಲಾಯಿತು. ಜನರು ಮನೆಗಳಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಿದರು. ಹಾಗೆಯೇ ಕೆಲವು ಆಯ್ದ ಸ್ಥಳಗಳಲ್ಲಿ ಯುವಕರು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ನಗರಾದ್ಯಂತ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಈ ಬಾರಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಸ್ಥಳಗಳಲ್ಲಿ ಪೊಲೀಸರು ಹೆಚ್ಚಿನ ನಿಗಾವಹಿಸಿದ್ದಾರೆ. ಪ್ರತಿಷ್ಠಾಪನೆ : ಪಟ್ಟಣದ ವಾಜಪೇಯಿ ನಗರ, ಗಾಂಧಿನಗರ, ವಡ್ಡರ ಓಣಿ, ಮಡ್ಡಿಓಣಿ, ಜುನೀಪೇಠ, ಈಟಿಓಣಿ, ನವೀಪೇಠ, ರಾಧಾಪೂರಪೇಠ, ಕಾಶಿಪೇಠ,ನಾರಾಯಣಪೇಠ, ನಿಂಗಾಪೂರಪೇಠ, ಬಾಣಕಾರಪೇಠ, ತೇರಬಜಾರ, ನಾಗಪ್ಪನಕಟ್ಟಿಯಾನಂಪೇಠ,…

Read More

ಚಿಲಮೂರ ಗ್ರಾಮದ ಸರ್ಕಾರಿ ಶಾಲೆಯ ಶಾಲಾ ಸುಧಾರಣಾ ಸಮಿತಿ ರಚನೆ

ಚಿಲಮೂರ ಗ್ರಾಮದ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ನೂತನವಾಗಿ ಶಾಲಾ ಸುಧಾರಣಾ ಸಮಿತಿಯನ್ನು ಚೀಟಿ ಎತ್ತುವ ಮೂಲಕ ಸದಸ್ಯರನ್ನು ಆಯ್ಕೆ ಮಾಡಲಾಯಿತು, ಊರಿನ ಗ್ರಾಮಸ್ಥರ ಸಮ್ಮುಖದಲ್ಲಿ ಹತ್ತು ಜನ ಪುರುಷ ಸದಸ್ಯರು ಎಂಟು ಜನ ಮಹಿಳಾ ಸದಸ್ಯರು ಆಯ್ಕೆ ಮಾಡುವ ಕಾರ್ಯಕ್ರಮವು ನಡೆದಿದ್ದು, ಸದಸ್ಯರನ್ನು ಆಯ್ಕೆಮಾಡಿಕೊಂಡು, ಸಮಿತಿಯ ಅಧ್ಯಕ್ಷರನ್ನಾಗಿ ಶ್ರೀ ಫಕೀರಪ್ಪ ಯಮನಪ್ಪ ದಳವಾಯಿ, ಉಪಾಧ್ಯಕ್ಷರನ್ನಾಗಿ ಶ್ರೀಮತಿ ಫಕೀರವ ಭೀಮಪ್ಪ ರೊಟ್ಟಿ, ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು, ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ನೋಡಲ್ ಅಧಿಕಾರಿಗಳು ಶಾಲಾ…

Read More

ಗೌರಿ ಗಣೇಶ ಮತ್ತು ಈದ್‌ ಮಿಲಾದ್‌ ಹಬ್ಬದ ನಿಮಿತ್ತ ರಾಮದುರ್ಗ ಪಟ್ಟಣದಲ್ಲಿ ಡಿ.ವಾಯ್.ಎಸ್. ಪಿ. ಚಿದಂಬರ ಮಡಿವಾಳರ ನೇತೃತ್ವದಲ್ಲಿ ಪೊಲೀಸ್ ಪಥಸಂಚಲನ

ಗೌರಿ ಗಣೇಶ ಮತ್ತು ಈದ್‌ ಮಿಲಾದ್‌ ಹಬ್ಬದ ನಿಮಿತ್ತ ರಾಮದುರ್ಗ ಪಟ್ಟಣದಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳುವ ನಿಟ್ಟಿನಲ್ಲಿ ಪಟ್ಟಣದ ಡಿ.ವಾಯ್.ಎಸ್. ಪಿ. ಚಿದಂಬರ ಮಡಿವಾಳರ ನೇತೃತ್ವದಲ್ಲಿ ಪೊಲೀಸರು ಮಂಗಳವಾರ ಪಥಸಂಚಲನ ನಡೆಸಿದರು. ಈ ಸಂದರ್ಭದಲ್ಲಿ ರಾಮದುರ್ಗ ಪೊಲೀಸ್ ಠಾಣೆಯ ಪಿಎಸ್‌ಐ ಸವಿತಾ ಮುನ್ಯಾಳ ,ಕಟಕೋಳ ಪೋಲಿಸ್ ಠಾಣೆಯ ಪಿಎಸ್ಐ ಬಸವರಾಜ್ ಕೊನ್ನೋರೆ, ಸುರೇಬಾನ ಪೊಲೀಸ್ ಠಾಣೆಯ ಪಿಎಸ್ಐ ಶಿವಾಜಿ ಪವಾರ, ಹಾಗೂ ಪೋಲಿಸ್ ಸಿಬ್ಬಂದಿಗಳು ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

Read More

ಬೆಳಗಾವಿಗೆ ಆಗಸ್ಟ್ 6 ರಂದು ಲೋಕಾಯುಕ್ತರು ಬಂದಮೇಲೆ ಕಚೇರಿಗಳಲ್ಲಿ ಎದ್ದು ಕಾಣುವ ಲೋಕಾಯುಕ್ತ ನಾಮಫಲಕಗಳು

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ವಿವಿಧ ಕಚೇರಿಗಳಲ್ಲಿ ಎದ್ದು ಕಾಣುತ್ತಿರುವ ಲೋಕಾಯುಕ್ತ ನಾಮಫಲಕದ ಬೋರ್ಡುಗಳು ಈ ಹಿಂದೆ ಲೋಕಾಯುಕ್ತರನ್ನು ಸಂಪರ್ಕಿಸಬೇಕಾದರೆ ಆನ್ಲೈನ್ ನಲ್ಲಿ ವಿಳಾಸ ಹಾಗೂ ಮೊಬೈಲ್ ನಂಬರ್ ಅನ್ನು ಹುಡುಕಬೇಕಾಗಿತ್ತು ಆದರೆ ಇವಾಗ ಬೆಳಗಾವಿ ಜಿಲ್ಲೆಗೆ ಆಗಸ್ಟ್ 6 ರಂದು ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರು ಬರುತ್ತಿದ್ದಂತೆ ಬೆಳಗಾವಿ ಜಿಲ್ಲೆಯ ತಾಲೂಕಿನ ಆದಂತ ಲೋಕಾಯುಕ್ತ ನಾಮಫಲಕದ ಬೋರ್ಡುಗಳು ಎದ್ದು ಕಾಣುತ್ತೇವೆ. ಇದರಿಂದ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಿದೆ

Read More

ಇಟ್ನಾಳ ಗ್ರಾಮದ ಶ್ರೀ ಬಸವೇಶ್ವರ ಜಾತ್ರೆ

ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕ, ಇಟ್ನಾಳ ಗ್ರಾಮದ ಶ್ರೀ ಬಸವೇಶ್ವರ ಜಾತ್ರೆಯ ಹಾಗೂ ರಥೋತ್ಸವದ ನಿಮಿತ್ಯವಾಗಿ “ಧರ್ಮ ಚಿಂತನಗೋಷ್ಠಿ” ಉದ್ಘಾಟನಾ ಸಮಾರಂಭದಲ್ಲಿ ಶ್ರೀ ವಿರೂಪಾಕ್ಷಣ್ಣಾ ಮಾಮನಿಯವರ ಸುಪುತ್ರನಾದ ಶ್ರೇಯಸ್ ಮಾಮನಿ ಅವರು ಭಾಗಿಯಾಗಿ, ಸನ್ಮಾನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪರಮ ಪೂಜ್ಯರು, ಹುಬ್ಬಳ್ಳಿ-ಧಾರವಾಡ ಬಿಜೆಪಿ ಮುಖಂಡರು ಶ್ರೀ ಸಂಕಲ್ಪ ಶೆಟ್ಟರ, ಶ್ರೀ ಪಂಚನಗೌಡ ದ್ಯಾಮನಗೌಡ್ರ, ಶ್ರೀ ಈರಣ್ಣ ಚಂದರಗಿ, ಶ್ರೀ ವಿನಯಕುಮಾರ ದೇಸಾಯಿ, ಶ್ರೀ ಶಿವಾನಂದ ಪಟ್ಟಣಶೆಟ್ಟಿ, ಶ್ರೀ ಡಿ. ಡಿ. ಹಾದಿಮನಿ, ಶ್ರೀ ರುದ್ರಣ್ಣ ಚಂದರಗಿ,…

Read More