BREAKING NEWS

18 ಲಕ್ಷ ವೆಚ್ಚದಲ್ಲಿ ಕೊರಕೊಪ್ಪ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಭೂಮಿ ಪೂಜಾ ಕಾರ್ಯಕ್ರಮವನ್ನು ಶಾಸಕ ವಿಶ್ವಾಸ್ ವಸಂತ ವೈದ್ಯ ನೆರವೇರಿಸಿದರು.

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನಕೊರಕೊಪ್ಪ ಗ್ರಾಮದಲ್ಲಿ, 2024-2025ನೇ ಸಾಲಿನ ಕಾಲೋನಿ ಅಭಿವೃದ್ಧಿ/ಪ್ರಗತಿ ಕಾಲೋನಿ ಯೋಜನೆಯಡಿ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ 18 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಯ ಭೂಮಿ ಪೂಜಾ ಕಾರ್ಯಕ್ರಮವನ್ನು ಶಾಸಕ ವಿಶ್ವಾಸ್ ವಸಂತ ವೈದ್ಯ ನೆರವೇರಿಸಿ ಅವರ ಮಾತನಾಡಿದರು.ಗ್ರಾಮೀಣ ಭಾಗದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಿ, ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಉತ್ತಮ ರಸ್ತೆ ಸಂಪರ್ಕ ಒದಗಿಸುವ ಉದ್ದೇಶದಿಂದ ಈ ಯೋಜನೆ ಕೈಗೊಳ್ಳಲಾಗಿದೆ. ಈ ಹೊಸ ರಸ್ತೆಯಿಂದಾಗಿ ಸ್ಥಳೀಯ ನಿವಾಸಿಗಳಿಗೆ ಓಡಾಟ…

Read More

ಬಟಕುರ್ಕಿ ಲೋಕಾಪುರ ರಸ್ತೆ ಮಧ್ಯ ಡಿವೈಡರ್‌ಗೆ ಬೈಕ್ ಡಿಕ್ಕಿ ಸವಾರ ಸ್ಥಳದಲ್ಲೇ ಸಾವು

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಬಟಕುರ್ಕಿ ಲೋಕಾಪುರ ರಸ್ತೆ ಮಧ್ಯೆ ಬೈಕ್ ಸವಾರ ಡಿವೈಡರಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬಟಕುರ್ಕಿ ಗ್ರಾಮದಲ್ಲಿ ನಡೆದಿದೆ. ಹಿರೋ ಸ್ಟೆಂಡರ ಪ್ಲಸ್ ಮೋಟಾರ ಸೈಕಲ್ಲ kA69 J2167 ನೇದ್ದರ ವಾಹನದಲ್ಲಿ ಇಬ್ಬರು ಕೂಡಿಕೊಂಡು ಲೋಕಾಪೂರದಿಂದ ಬಟಕುರ್ಕಿ ಕಡೆಗೆ ಹೋಗುವಾಗ ರಸ್ತೆ ಮದ್ಯೆ ಇರುವ ಡೈವಡರಗೆ ಹಾಯಿಸಿ ಕೆಳಗೆ ಬಿದ್ದು ತನ್ನ ತಲೆಗೆ.ಗದ್ದಕ್ಕೆ ಹಾಗೂ ಬಲಗಾಲ ಮೊಣಕಾಲಿಗೆ, ಭಾರಿಗಾಯ ಪಡಿಸಿಕೊಂಡು ಸ್ಥಳದಲ್ಲಿಯೇ ರವಿ ನಿಂಗಪ್ಪ ಬೂದಿ ವಯಾ: 29 ವರ್ಷ…

Read More

ಒಳ ಮೀಸಲಾತಿ ಅನುಷ್ಠಾನ ವರದಿಯನ್ನು ರಾಜ್ಯ ಸರ್ಕಾರವು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ.

ರಾಮದುರ್ಗ ಪಟ್ಟಣದ ಶ್ರೀ ಬಿ ಆರ್ ಅಂಬೇಡ್ಕರ್ ಸರ್ಕಲ್ ನಲ್ಲಿ ಶ್ರೀ ಎಚ್ ಎಲ್ ನಾಗಮೋಹನ ದಾಸ್ ರವರ ಒಳ ಮೀಸಲಾತಿ ಅನುಷ್ಠಾನ ವರದಿಯನ್ನು ರಾಜ್ಯ ಸರ್ಕಾರವು ಒಪ್ಪಿಕೊಂಡು ಜಾರಿ ಮಾಡಲು ಸಿದ್ಧತೆ ನಡೆಸಿರುವುದನ್ನು ಬೆಂಬಲಿಸಿ ಗೋಪಾಲ್ ಮಾದರ್ ತಾಲೂಕ ಅಧ್ಯಕ್ಷರು ದಲಿತ ಸಂಘರ್ಷ ಸಮಿತಿ ರಾಮದುರ್ಗ ರವರ ನೇತೃತ್ವದಲ್ಲಿ ಸಂಭ್ರಮಾಚರಣೆಯನ್ನು. ಆಚರಿಸಲಾಯಿತು.

Read More

ರಾಮದುರ್ಗ ಪಟ್ಟಣದಲ್ಲಿ ಎಂಎಸ್ ಐ ಎಲ್ ಮಳಿಗೆಗೆ ಕನ್ನ ಹಾಕಿದ ಕದೀಮರು.

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಬೆಳಗಾವಿ ರಸ್ತೆಯಲ್ಲಿರುವ ಎಂಎಸ್ ಐ ಎಲ್ ಮಳಿಗೆಗೆ ಕನ್ನ ಹಾಕಿದ ಘಟನೆ ರಾಮದುರ್ಗ ಪಟ್ಟಣದಲ್ಲಿ ಜರುಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಮಧ್ಯ ಸೇರಿದಂತೆ ಸಿ ಸಿ ಕ್ಯಾಮರಾಗಳು ಹಾಗೂ ಡಿವಿಆರ್ ನ್ನ ಖದೀಮರು ಕದ್ದೋಯಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ರಾಮದುರ್ಗ ಪಿಎಸ್ ಐ ಸವಿತಾ ಮುನ್ಯಾಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಖದೀಮರ ಶೋಧನೆಗಾಗಿ ಜಾಲ ಬೀಸಿದ್ದಾರೆ. ಇನ್ನು ಅಂಗಡಿ ಕಳುವಿನ. ಮೌಲ್ಯ ಪೊಲೀಸ ತನಿಖೆಯಿಂದ ತಿಳಿಯಬೇಕಾಗಿದೆ

Read More

ಆಫೀಯಾ ನೇಸರಿಕರ ರವರನ್ನು ಸವದತ್ತಿ ವಕೀಲರ ಸಂಘದಿಂದ ಆತ್ಮೀಯವಾಗಿ ಬೀಳ್ಕೊಡುವ ಸಮಾರಂಭ.

ಸವದತ್ತಿ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕ ರಾದ ಶ್ರೀಮತಿ ಆಫೀಯಾ ನೇಸರಿಕರ ಇವರು ಖಾನಾಪುರಕ್ಕೆ ವರ್ಗಾವಣೆಗೊಂಡು ಹೋಗುವಾಗ ಸವದತ್ತಿ ವಕೀಲರ ಸಂಘದಿಂದ ಆತ್ಮೀಯವಾಗಿ ಬೀಳ್ಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಜೆ ಬಿ ಮುನವಳ್ಳಿ, ಉಪಾಧ್ಯಕ್ಷರಾದ ಶೀ ಎಂ ಎಸ್ ಹುಬ್ಬಳ್ಳಿ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎಸ್ ಎಸ್ ಕಾಳಪ್ಪನವರ ಹಾಗೂ ಮಹಿಳಾ ಪ್ರತಿನಿಧಿಯಾದ ಶ್ರೀಮತಿ ಸಾವಿತ್ರಿ ಶಿಭಾರಗಟ್ಟಿ, ಮತ್ತು ಹೆಚ್ಚುವರಿ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕ ರಾದ ಸಚಿನ್ ಅಂಗಡಿ,…

Read More

ಮನೆಯ ಮೇಲ್ಚಾವಣಿ ಕುಸಿದು ವಾಮನ್ ರಾವ್ ಬಾಪೂ ಪವಾರ್ ವ್ಯಕ್ತಿ ಉಸಿರುಗಟ್ಟಿ ಸಾವನ್ನಪ್ಪಿರುತ್ತಾರೆ.

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ ನಿರಂತರ ಮಳೆಯಿಂದಾಗಿ ನಿಂಗಾಪೂರ ಪೇಟ ನಗರದಲ್ಲಿರುವ ಮಹದೇವ ಗುಡಿ ಹತ್ತಿರ ವಾಮನ್ ರಾವ್ ಬಾಪೂ ಪವಾರ್ ರವರು ಮನೆಯಲ್ಲಿ ಮಲಗಿರುವಾಗ ಬೆಳಿಗ್ಗೆ 04.11 ಗಂಟೆಗೆ ಮನೆಯ ಮೇಲ್ಚಾವಣಿ ಕುಸಿದು ಅವರ ಮೇಲೆ ಬಿದ್ದು ಸದರಿಯವರು ಮಣ್ಣಿನಲ್ಲಿ ಹುದುಗಿ ಉಸಿರುಗಟ್ಟಿ ಸಾವನ್ನಪ್ಪಿರುತ್ತಾರೆ ಸದರಿ ಸ್ಥಳದಲ್ಲಿ ಅಗ್ನಿಶಾಮಕ ದಳದವರು ಹಾಗೂ ಪೊಲೀಸ್ ಸಿಬ್ಬಂದಿ ಸೇರಿ ಸದರಿ ಅವರನ್ನು ಪತ್ತೆ ಮಾಡಿ ಮೃತ ದೇಹವನ್ನು ಹೊರಗಡೆ ತೆಗೆದಿದ್ದು ಇರುತ್ತದೆ. ನಿಂಗಾಪೂರ ಪೇಟ ನಗರದಲ್ಲಿರುವ ಮಹದೇವ ಗುಡಿ…

Read More

ಚಿಲಮೂರ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಗ್ರಾಮ ಘಟಕ ಸ್ಥಾಪನೆ.

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಚಿಲಮೂರ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಗ್ರಾಮ ಘಟಕ ಸ್ಥಾಪನೆ ಮಾಡಲಾಯಿತು. ಈ ಸಂದರ್ಭದಲ್ಲಿ ಕರವೇ ತಾಲೂಕಾ ಅಧ್ಯಕ್ಷರು ವಿಜಯಕುಮಾರ ರಾಠೋಡ ಹಾಗು ಗೌರವಾಧ್ಯಕ್ಷರು ಜಹೂರ ಹಾಜಿ .ಮಹಿಳಾ ಅಧ್ಯಕ್ಷರು ರೂಪಾ ಅರಮನಿ. ಗ್ರಾಮೀಣ ಅಧ್ಯಕ್ಷರು ಹಣಮಂತ ಕುಲಗೋಡ. ಕಾರ್ಮಿಕ ಘಟಕ ಅಧ್ಯಕ್ಷರು ಗಣೇಶ ದೊಡಮನಿ. ತಾಲೂಕಾ ಪ್ರಧಾನ ಕಾರ್ಯದರ್ಶಿ ಆನಂದ ಜಾಧವ. ಯುವ ಘಟಕ ಅಧಕ್ಷರು ಕೃಷ್ಣ ರಾಠೋಡ. ತಾಲೂಕಾ ಸಂಘಟನಾ ಕಾರ್ಯದರ್ಶಿ ಸಾಗರ ಮುನವಳ್ಳಿ. ಮಾಂತೇಶ ಪಾಶ್ಚಾಪೂರ….

Read More

ನವೀಲು ತೀರ್ಥ ಅಣೆಕಟ್ಟೆಯಿಂದ ನೀರು ಬಿಡುಗಡೆ ರಾಮದುರ್ಗದ ಹಳೆ ಸೇತುವೆ ಮುಳುಗಡೆ

ಸವದತ್ತಿಯ ನವೀಲು ತೀರ್ಥ ಅಣೆಕಟ್ಟೆಯಿಂದ 10 ಸಾವಿರಕ್ಕೂ ಹೆಚ್ಚಿನ ನೀರು ಹರಿಸಿದ್ದರಿಂದ ರಾಮದುರ್ಗ ಪಟ್ಟಣದ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಹಳೆ ಸೇತುವೆ ಸಂಪೂರ್ಣ ಮುಳುಗಡೆಯಾಗಿ ವಾಹನಗಳ ಸಂಚಾರ ಸ್ಥಗಿತವಾಗಿದೆ.

Read More

ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಪೌರಕಾರ್ಮಿಕ ಬಂಧುಗಳು

ಸತ್ಕಾರ್ಯ ಫೌಂಡೇಶನ್ ರಾಮದುರ್ಗ ಹಾಗೂ ವಿಶ್ವ ಹಿಂದೂ ಪರಿಷತ್ ಸಹಯೋಗದೊಂದಿಗೆ ನಗರದ ಅರಮನೆ ಮೈದಾನದಲ್ಲಿ ನಡೆದ ಕೃಷ್ಣ ಜನ್ಮಾಷ್ಟಮಿ ಉತ್ಸವ ರಾಮದುರ್ಗ – 2025 ಕಾರ್ಯಕ್ರಮವನ್ನು ನಗರದ ಪುರಸಭೆಯ ಕಾರ್ಮಿಕ ಬಂಧುಗಳು ಕೃಷ್ಣ ಸುಧಾಮರ ಭಾವಚಿತ್ರಕ್ಕೆ ಆರತಿ ಹಾಗೂ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟನೆ ಮಾಡಿದರು. ಸತ್ಕಾರ್ಯ ಫೌಂಡೇಶನ್ ಅಧ್ಯಕ್ಷ ಹಾಗೂ ವಿಶ್ವ ಹಿಂದೂ ಪರಿಷತ್ ತಾಲೂಕು ಸೇವಾ ಪ್ರಮುಖ ಸಂಗಮೇಶ ಉದಪುಡಿ ಮಾತನಾಡಿ ನಾವೆಲ್ಲ ಸಾಕಷ್ಟು ಹಬ್ಬ ಹರಿದಿನಗಳನ್ನು ಆಚರಣೆ ಮಾಡಿ ಸಂಭ್ರಮಿಸುತ್ತೇವೆ ಆದರೆ ಆ…

Read More

ಬೆಳಗಾವಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರು ರವಿ ಬಂಗಾರಪ್ಪನವರ ರಾಮದುರ್ಗಕ್ಕೆ ಬೇಟಿ

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನಲ್ಲಿ ಶನಿವಾರರಂದು ಬೆಳಗಾವಿಯ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರು ರವಿ ಬಂಗಾರಪ್ಪನವರ ರಾಮದುರ್ಗ ತಾಲೂಕಿನ ಬಟಕುರ್ಕಿ ಗ್ರಾಮ ಪಂಚಾಯತಿಗೆ ಬೇಟಿ ನೀಡಿ ಪಂಚಾಯತಿ ಅಭಿವೃದ್ದಿ ಅಧಿಕಾರಿಗೆ ಸ್ವಚ್ಚ ಭಾರತ ಅಭಿಯಾನ ಹಾಗೂ ನರೇಗಾ ಯೋಜನೆ ಕುರಿತು ಚರ್ಚಿಸಿದರು, ನಂತರ ಅಲ್ಲಿಯೇ ಸರಕಾರಿ ಪ್ರಾಥಮೀಕ ಶಾಲೆಗೆ ಬೇಟಿ ನೀಡಿ ಮಕ್ಕಳ ಜೋತೆ ಬಿಸಿಯೂಟ, ಹಾಗೂ ಸಮವಸ್ತ್ರ ಬಗ್ಗೆ ಚರ್ಚೆ ಮಾಡಿದರು. ನಂತರ ಇಂದಿರಾ ಗಾಂಧಿ ವಸತಿ ಶಾಲೆಗೆ ಭೇಟಿ ನೀಡಿ ಶಾಲೆಯ ವ್ಯವಸ್ಥೆ ಬಗ್ಗೆ…

Read More