BREAKING NEWS

ಬೆಂಗಳೂರು ನೆಲಮಂಗಲ ಟೋಲ್ ಅವಧಿ‌ ಮುಗಿದರೂ ಶುಲ್ಕ ವಸೂಲಿ ಆರೋಪ! ಪ್ರಶ್ನೆ ಮಾಡಿ ಹಣ ಪಾವತಿಸದೇ ಸಂಚರಿಸಿದ ಕಾರ್‌ ಚಾಲಕ

ಬೆಂಗಳೂರು: ಬೆಂಗಳೂರು ತುಮಕೂರು ರಾಷ್ಟ್ರೀಯ ಹೆದ್ದಾರಿಯ ನೆಲಮಂಗಲ ಟೋಲ್ ಅವಧಿ‌ ಮುಗಿದರೂ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇನ್ನು ಈ ಬಗ್ಗೆ ಪ್ರಶ್ನೆ ಮಾಡಿದ ಕಾರ್‌ ಚಾಲಕರೊಬ್ಬರು ಒಂದು ರೂಪಾಯಿ ಶುಲ್ಕ ಪಾವತಿಸದೇ ಸಂಚಾರ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ನೆಲಮಂಗಲ ಟೋಲ್‌ ಮಾರ್ಗದಲ್ಲಿ ತೆರಳಿದ ವಾಹನ ಚಾಲಕ ” ಪಾಸ್ಟ್‌ಟ್ಯಾಗ್‌ ಯಾಕೆ ಸ್ಕ್ಯಾನ್‌ ಮಾಡಬೇಕು. ಈ ಟೋಲ್‌ನ ಟೆಂಡರ್‌ ಅವಧಿಯು 2020 ರಲ್ಲಿಯೇ ಮುಕ್ತಾಯವಾಗಿದೆ, ನಾನು ಯಾಕೆ…

Read More

LK Advani: ಬಿಜೆಪಿ ‘ಭೀಷ್ಮ’ನಿಗೆ ‘ಭಾರತ ರತ್ನ’: ಕೇಸರಿ ಪಕ್ಷದ ಹಿಂದಿನ ‘ಸಾರಥಿ’ಯ ಸುದೀರ್ಘ ಪಯಣ

ಹೊಸದಿಲ್ಲಿ: ಭಾರತೀಯ ಜನತಾ ಪಕ್ಷದ ಭೀಷ್ಮ ಎಂದೇ ಹೆಸರಾಗಿರುವ ಹಿರಿಯ ನಾಯಕ ಹಾಗೂ ಬಿಜೆಪಿ ‘ಸಾರಥಿ’ ಲಾಲ್ ಕೃಷ್ಣ ಅಡ್ವಾಣಿ ಅವರನ್ನು ದೇಶದ ಅತ್ಯುನ್ನತ ಗೌರವವಾದ ‘ಭಾರತ ರತ್ನ’ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. 96 ವರ್ಷದ ಅಡ್ವಾಣಿ ಅವರನ್ನು ‘ಭಾರತ ರತ್ನ’ಕ್ಕೆ ಆಯ್ಕೆ ಮಾಡಿರುವ ಮಾಹಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕಟಿಸಿದ್ದಾರೆ. ಇದರೊಂದಿಗೆ ಬಿಜೆಪಿಯ ಇಬ್ಬರು ಅಗ್ರಗಣ್ಯ ನಾಯಕರು ತಮ್ಮ ಜೀವಿತಾವಧಿಯಲ್ಲಿಯೇ ‘ಭಾರತ ರತ್ನ’ಕ್ಕೆ ಪಾತ್ರರಾದಂತಾಗಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು 2015ರಲ್ಲಿ ಈ…

Read More

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಸುಮಾರು 800 ಕೋಟಿ ರೂ.ಗಳ ಪ್ರಸ್ತಾವನೆಗೆ ಸಚಿವಸಂಪುಟಚ ಒಪ್ಪಿಗೆ ನೀಡಿದೆ.

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಮಂಡಿಸಿದ್ದ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಯೋಜನೆಗೆ ಮೂಜುರು ನೀಡಲಾಯಿತು. ಲಕ್ಷ್ಮೀ ಹೆಬ್ಬಾಳಕರ್ ಅವರು ಕನಸಿನ ಯೋಜನೆ ಹಿರೇಬಾಗೇವಾಡಿಯ 61 ಕೆರೆಗಳನ್ನು ತುಂಬಿಸುವ 519.10 ಕೋಟಿ ರೂ. ಗಳ ಅಂದಾಜು ಮೊತ್ತದ ಪರಿಷ್ಕೃತ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಕಳೆದ ಸುಮಾರು 5 ವರ್ಷದಿಂದ ಲಕ್ಷ್ಮೀ ಹೆಬ್ಬಾಳಕರ್ ಅವರು ಈ ಯೋಜನೆಗಾಗಿ ಪಟ್ಟು ಹಿಡಿದಿದ್ದರು. ನಂತರದಲ್ಲಿ ಕೆಲವರ ಅಡ್ಡಗಾಲಿನಿಂದಾಗಿ ಯೋಜನೆ ನನೆಗುದಿಗೆ…

Read More

ರೇಣುಕಾ ಯಲ್ಲಮ್ಮದೇವಿ ದೇವಸ್ಥಾನದ ಸುತ್ತಲೂ ಅಕ್ರಮ ಸಾರಾಯಿ ಮಾರಾಟಕ್ಕೆ ಬ್ರೇಕ್ ಹಾಕಿದ ಅಬಕಾರಿ ಅಧಿಕಾರಿಗಳು 

ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಗುಡ್ಡದ ವಾಪ್ತಿಯಲ್ಲಿ ಅಕ್ರಮ ಮಾರಾಟ, ಸಾರಾಯಿ ಮಾರಾಟ ಚಟುವಟಿಕೆಗಳನ್ನು ತಡೆಗಟ್ಟುವ ಬಗ್ಗೆ ಅಬಕಾರಿ ಇಲಾಖೆಯಿಂದ ಅಕ್ರಮ ಸಾರಾಯಿ ಮಾರಾಟಕ್ಕೆ ಬ್ರೇಕ್ ಹಾಕಿದ ಅಧಿಕಾರಿಗಳು ಪ್ರತಿವರ್ಷದಂತೆ ಈ ಬಾರಿಯೂ ಉತ್ತರ ಕರ್ನಾಟಕದ ಸುಪ್ರಸಿದ್ಧ ರೇಣುಕಾ ಯಲ್ಲಮ್ಮ ದೇವಿ ಜಾತ್ರೆ ಅದ್ದೂರಿಯಾಗಿ ನಡೆಸಲಾಗುತ್ತಿದೆ. ಯಲ್ಲಮ್ಮನ ಸನ್ನಿಧಾನದಲ್ಲಿ ಸುತ್ತ ಮುತ್ತಲು ಅಕ್ರಮವಾಗಿ ಮದ್ಯ ಮಾರಾಟ ಸಂಪೂರ್ಣ ಬಂದ್ ಮಾಡಲಾಗಿದೆ ಎಂದು ಅಬಕಾರಿ ಸಿಪಿಐ ಶ್ರೀಶೈಲ ಅಕ್ಕಿ ತಿಳಿಸಿದ್ದಾರು. ಈ ಗಸ್ತು ಕಾರ್ಯದಲ್ಲಿ ರಾಮದುರ್ಗ ಅಬಕಾರಿ ಉಪ ಅದಿಕ್ಷಕರು…

Read More

ಇಂಡಿ ತಾಲೂಕಿನ ತಾಂಬಾ ಗ್ರಾಮದಲ್ಲಿ ಆರಂಭಗೊಂಡ ಸಂವಿಧಾನ ಜಾಗೃತಿ  ಜಾಥಾ

ಇಂಡಿ ತಾಲೂಕಿನ ತಾಂಬಾ ಗ್ರಾಮದಲ್ಲಿ ನಡೆದ ಸಂವಿಧಾನ ಜಾಗೃತ ಜಾಥಾದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರು, ಸದಸ್ಯರು ಗ್ರಾಮಸ್ಥರು, ಯುವಕರು ಸೇರಿದಂತೆ ಸಾವಿರಾರು ಜನರು ಸಂವಿಧಾನ ಜಾಗೃತ ಜಾಥಾ ಸ್ಥಬ್ದಚಿತ್ರವನ್ನು ಪುಷ್ಪನಮನದೊಂದಿಗೆ ಸಲ್ಲಿಸಿ ಬಳಿಕ ಮುಖ್ಯ ರಸ್ತೆಯಿಂದ ಅಂಬೇಡ್ಕರ ವೃತ್ತದವರೆಗೆ ಮೆರವಣಿಗೆದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿದರು. ಸಮಾಜ ಕಲ್ಯಾಣ ಅಧಿಕಾರಿ ಹಾಗೂ ಸಂವಿಧಾನ ಜಾಗೃತ ಜಾಥಾದ ಉಸ್ತುವಾರಿ ಬಿ.ಜೆ.ಇಂಡಿ ಮಾತನಾಡಿ, ಸಂವಿಧಾನ ಒಂದು ಆಚರಣೆ ಮಾಡಿ ಸೀಮಿತ ಮಾಡದೇ ತಮ್ಮ ಮನೆ ಮನೆಗಳಲ್ಲಿ ಸಂವಿಧಾನ ಪ್ರಸ್ತಾವನೆಯನ್ನು ಓದುವ ಮೂಲಕ ಸಂವಿಧಾನ…

Read More

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ವಿಜಯನಗರ ಜಿಲ್ಲೆಯ ನೂತನ ಜಿಲ್ಲಾ ಪೊಲೀಸ್ ಕಚೇರಿ ಉದ್ಘಾಟನೆ  ಮಾಡಿದರು

ಮುಖ್ಯಮಂತ್ರಿ ಸಿದ್ಧರಾಮಯ್ಯನವರು  ಹೊಸಪೇಟೆ ನಗರದ ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ  ನೂತನವಾಗಿ ನಿರ್ಮಿಸಲಾಗಿರುವ ವಿಜಯನಗರ ಜಿಲ್ಲೆಯ ನೂತನ ಜಿಲ್ಲಾ ಪೊಲೀಸ್ ಕಚೇರಿಯನ್ನು ಸಸಿಗಳಿಗೆ ನೀರು ಉಣಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು  ಒಟ್ಟು ರೂ 4.6 ಕೋಟಿ ವೆಚ್ಚದಲ್ಲಿ ಜಿಲ್ಲೆಯ ನೂತನ ಜಿಲ್ಲಾ ಪೊಲೀಸ್ ಕಚೇರಿ ನಿರ್ಮಿಸಲಾಗಿದೆ. 27ಸೆಪ್ಟೆಂಬರ್ 2022 ರಂದು ಕಾಮಗಾರಿ ಪ್ರಾರಂಭಿಸಿ, 28 ಆಗಸ್ಟ್ 2023 ಕ್ಕೆ ಪೂರ್ಣಗೊಳಿಸಲಾಗಿದೆ. ನೂತನ ಜಿಲ್ಲಾ ಪೊಲೀಸ್ ಕಚೇರಿ ನಿರ್ಮಾಣಕ್ಕೆ ಒಟ್ಟು 3 ಎಕರೆ ಜಮೀನು ಮಂಜೂರು ಮಾಡಲಾಗಿದೆ….

Read More

ಫೆಬ್ರುವರಿ 5 ರಂದು ನಡೆಯಲಿರುವ ಗ್ಯಾರಂಟಿ ಯೋಜನೆ ಫಲಾನುಭವಿಗಳ ಬೃಹತ್ ಸಮಾವೇಶದ ಸಿದ್ಧತೆ ಪರಿಶೀಲನೆ ಮಾಡಿದ ಜಿಲ್ಲಾಧಿಕಾರಿ ನಿತಿಶ್ ಪಾಟೀಲ್

ಪೂರ್ವಭಾವಿ ಸಭೆಯ ಬಳಿಕ ಸರದಾರ ಹೈಸ್ಕೂಲ್ ಮೈದಾನಕ್ಕೆ ಭೇಟಿ ನೀಡಿದ ಶಾಸಕ ಆಸಿಫ್  ಸೇಠ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಸಮಾವೇಶದ ಸಿದ್ಧತೆಗಳನ್ನು ಪರಿಶೀಲಿಸಿದರು. ಸಮಾವೇಶದಲ್ಲಿ ಹದಿನೈದು ಸಾವಿರಕ್ಕೂ ಅಧಿಕ ಫಲಾನುಭವಿಗಳು ಭಾಗವಹಿಸಲಿರುವುದರಿಂದ ಊಟ, ಕುಡಿಯುವ ನೀರು, ಪಾರ್ಕಿಂಗ್ ಮತ್ತಿತರ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಅನಾನುಕೂಲ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. ನಗರದಲ್ಲಿಯೇ ಸಮಾವೇಶ ನಡೆಯಲಿರುವುದರಿಂದ ಗ್ಯಾರಂಟಿ ಯೋಜನೆ ಫಲಾನುಭವಿಗಳು ಮತ್ತು ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಶಾಸಕ…

Read More

ಬಜೆಟ್ 2024: ಎಚ್ಚರಿಕೆ, ಬ್ಯಾಂಕ್‌ಗಳಿಗೆ ಹೊಸ ನಿಯಮಗಳು. ಗ್ರಾಹಕರು ಕಡ್ಡಾಯವಾಗಿ ತಿಳಿದುಕೊಳ್ಳಬೇಕಾದ ವಿಷಯ

ಬಜೆಟ್ 2024: ಎಚ್ಚರಿಕೆ, ಬ್ಯಾಂಕ್‌ಗಳಿಗೆ ಹೊಸ ನಿಯಮಗಳು. ಪ್ರತಿ ತಿಂಗಳ ಮೊದಲ ದಿನ ದೇಶದಲ್ಲಿ ಆರ್ಥಿಕ ವಹಿವಾಟಿನ ಜತೆಗೆ ಹಲವು ಬದಲಾವಣೆಗಳು ಆಗುತ್ತಿವೆ. ಹೊಸ ವರ್ಷಕ್ಕೆ ಜನವರಿ ತಿಂಗಳು ಮುಗಿದಿದೆ.. ಈಗ ಫೆಬ್ರವರಿ ತಿಂಗಳು ಬಂದಿದೆ.. ಈ ತಿಂಗಳುಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.. NPS ನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಠೇವಣಿ ಮಾಡಿದ ಮೊತ್ತದ ಶೇಕಡಾ 25 ರಷ್ಟು ಮಾತ್ರ ಹಿಂಪಡೆಯಲು ಅವಕಾಶವಿದೆ.. ಡಿಕ್ಲರೇಶನ್ ಫಾರ್ಮ್ ಅನ್ನು ಸಹ ಮೊದಲು ಸಲ್ಲಿಸಬೇಕು. ಅಷ್ಟೇ ಅಲ್ಲ ಬ್ಯಾಂಕ್ ಗಳಿಗೆ ಹೊಸ ನಿಯಮಗಳು…

Read More

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುದ್ದೇಬಿಹಾಳ ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು

ಮುದ್ದೇಬಿಹಾಳ ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು ನಾಡಿನ ಜನರನ್ನು ತಪ್ಪು ದಾರಿಗೆ ಎಳೆದು ಅವರನ್ನು ವಂಚಿಸಲು ಬಿಜೆಪಿ ಅಪ್ಪಟ ಸುಳ್ಳುಗಳನ್ನು ಉತ್ಪಾದಿಸುತ್ತಿದೆ. ನಮ್ಮ ಸರ್ಕಾರದಲ್ಲಿ ಹಣ ಇಲ್ಲ ಎಂದು ಬಿಜೆಪಿಯವರು ಸುಳ್ಳುಗಳನ್ನು ಉತ್ಪಾದಿಸುತ್ತಾ ಅಲೆಯುತ್ತಿದ್ದಾರೆ. ಹಣ ಇಲ್ಲದೆ ಗ್ಯಾರಂಟಿ ಯೋಜನೆಗಳು, ಇಷ್ಟೆಲ್ಲಾ ಅಭಿವೃದ್ಧಿ ಕಾರ್ಯಗಳು ಹೇಗೆ ನಡೆಯಲು ಹೇಗೆ ಸಾಧ್ಯ? ಒಂದೇ ದಿನ 227 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮಾಡಿದ್ದೇವೆ. ಅಪ್ಪಾಜಿ ನಾಡಗೌಡರು ಅತ್ಯಂತ…

Read More

ಚಕ್ಕಡಿಯಲ್ಲಿ ಹೋಗುವಾಗ  ಹಿಂದಿನಿಂದ ಬೋಲೊರೊ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ.ಭೀಕರ ಅಪಘಾತದಲ್ಲಿ ಓರ್ವ ಮಹಿಳೆ ಸಾವು

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದ ಬಳಿಶುಕ್ರವಾರ ನಸುಕಿನ ಜಾವದಲ್ಲಿ ಹೊಲಕ್ಕೆ ಜೋಳ ಕೀಳಲು ಚಕ್ಕಡಿಯಲ್ಲಿ ಹೋಗುವಾಗ  ಹಿಂದಿನಿಂದ ವೇಗವಾಗಿ ಬಂದ ಬೋಲೊರೊ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ಚಕ್ಕಡಿ ಮುರಿದು ಎರಡು ಎತ್ತುಗಳಿಗೆ ಗಾಯವಾಗಿದೆವಾಹನ ಬಾಗಲಕೋಟ ಕಡೆಯಿಂದ ಬೆಳಗಾವಿಗೆ ಹೋಗುತ್ತಿದ್ದು ಚಕ್ಕಡಿ ಸಾಲಹಳ್ಳಿಯಿಂದ ಹೊಲಕ್ಕೆ ಹೋಗುವಾಗ ಈ ಘಟನೆ ಸಂಭವಿಸಿದೆ ಬಾಗಲಕೋಟ – ಬೆಳಗಾವಿ ರಾಜ್ಯ ಹೆದ್ದಾರಿಯಲ್ಲಿ ಚಕ್ಕಡಿಯ ಮೇಲೆ ಪಿಕಪ್ ವಾಹನ ಹರಿದು ಸ್ಥಳದಲ್ಲಿಯೇ ರೈತರ ಮಹಿಳೆ ಮೃತಪಟ್ಟಿದ್ದು ನಾಲ್ವರು ರೈತರು ತೀವ್ರ…

Read More