BREAKING NEWS

 ಹೆಚ್.ಐ. ವಿ/ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಡಾ| ನಿರ್ಮಲಾ ಹಂಜಿ ಮಾತನಾಡಿದರು.

ರಾಮದುರ್ಗ ಪಟ್ಟಣದ ಸಿ.ಎಸ್.ಬೆಂಬಳಗಿ ಕಲಾ, ಶಾ. ಎಂ.ಆರ್. ಪಾಲರೇಶಾ ವಿಜ್ಞಾನ ಹಾಗೂ ಜಿ.ಎಲ್.ರಾಠಿ ವಾಣಿಜ್ಯ ಮಹಾ ವಿದ್ಯಾಲಯದಲ್ಲಿ ಐ.ಕ್ಯೂ.ಎ.ಸಿ, ಎನ್.ಎಸ್.ಎಸ್ ಹಾಗೂ ರೆಡ್‌ರಿಬ್ಬನ್ನ ಕ್ಲಬ್‌ಗಳ ಸಹಯೋಗದಲ್ಲಿ ಜರುಗಿದ ಹೆಚ್.ಐ. ವಿ/ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಸರಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ನಿರ್ಮಲಾ ಹಂಜಿ ಪಾಲ್ಗೊಂಡು ಅವರು ಮಾತನಾಡಿದರು. ಅಸುರಕ್ಷಿತ ಲೈಂಗಿಕ ಚಟುವಟಿಕೆಗಳಿಂದ ದೂರ ವಿದ್ದು, ರಕ್ತದ ವರ್ಗಾವಣೆ ಸಮಯದಲ್ಲಿ ರಕ್ತದ ಪಾಕೀಟಿನ ಮೇಲೆ ರಕ್ತ ಪರೀಕ್ಷೆಯ ವಿವರಗಳನ್ನು ದೃಢಪಡಿಸಿಕೊಳ್ಳುವ ಮೂಲಕ ಹೆಚ್.ಐ. ವಿ ಬರದಂತೆ ಎಚ್ಚರ ವಹಿಸಬೇಕು. ಹೆಚ್.ಐ….

Read More

ರಾಯಣ್ಣ ನುಡಿನಮನ ಕಾರ್ಯಕ್ರಮದ ಪ್ರಯುಕ್ತ ಪಟ್ಟಣದ ಪೂರ್ವಭಾವಿ ಸಭೆ ನಡೆಸಲಾಯಿತು.

ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ಜನವರಿ 26 ರಂದು ತಾಲೂಕಾ ಕುರುಬರ ಸಂಘ ಹಾಗೂ ಹಾಲುಮತ ಸಮಾಜದ ನೇತೃತ್ವದಲ್ಲಿ ನಡೆಯಲಿರುವ ಸಂಗೊಳ್ಳಿ ರಾಯಣ್ಣ ನುಡಿನಮನ ಕಾರ್ಯಕ್ರಮದ ಪ್ರಯುಕ್ತ ಪಟ್ಟಣದ ಕನಕ ಭವನದಲ್ಲಿ ಬುಧವಾರ ಪೂರ್ವಭಾವಿ ಸಭೆ ನಡೆಸಲಾಯಿತು. ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರದೇಶ ಕುರುಬರ ಸಂಘದ ತಾಲೂಕಾಧ್ಯಕ್ಷ ಪಡಿಯಪ್ಪ ಕ್ವಾರಿ, ಕ್ರಾಂತಿವಿರ ಸಂಗೊಳ್ಳಿ ರಾಯಣ್ಣನವರು ಹುತಾತ್ಮರಾದ ಪ್ರಯುಕ್ತ ತಾಲೂಕಿನ ಸಮಾಜ ಬಾಂಧವರ ನೇತೃತ್ವದಲ್ಲಿ ನುಡಿನಮನ ಕಾರ್ಯಕ್ರಮವನ್ನು ಸಾಲಹಳ್ಳಿ ಗ್ರಾಮದ ಶ್ರೀ ಬಬಲಾದೀಶ್ವರ ಮಠದ ಆವರಣದಲ್ಲಿ ಜ.26 ರಂದು…

Read More

ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಜಾತ್ರಾ ವಿಶೇಷ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ವಿಶ್ವಾಸ ವೈದ್ಯ

ಸವದತ್ತಿ ಪಟ್ಟಣದ ಶಾಸಕ ವಿಶ್ವಾಸ ವೈದ್ಯ ರವರ ಗೃಹ ಕಚೇರಿಯಲ್ಲಿ ಶ್ರೀ ಕ್ಷೇತ್ರ ಯಲ್ಲಮ್ಮನಗುಡ್ಡದ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ವತಿಯಿಂದ 2023-24 ನೇ ಸಾಲಿನ ವಿಶೇಷ ಜಾತ್ರಾ ಅವಧಿಯಲ್ಲಿ ಶ್ರೀ ಕ್ಷೇತ್ರ ಆಗಮಿಸುವ ಲಕ್ಷಾಂತರ ಭಕ್ತರಿಗಾಗಿ ಕೈಕೊಂಡ ಮೂಲಭೂತ ಸೌಲಭ್ಯಗಳ ಕೂರಿತು ಅಧಿಕಾರಿಗಳೊಂದಿಗೆ ಸಭೆನಡೆಸಿದೆ. ಶ್ರೀ ಕ್ಷೇತ್ರ ಯಲ್ಲಮ್ಮನಗುಡ್ಡದ ವಾರ್ಷಿಕ ವಿಶೇಷ ಜಾತ್ರೆಗಳಾದ ಜನೇವರಿ 25 ರ ಬನದ ಹುಣ್ಣಿವೆ ಹಾಗೂ ಫೆಬ್ರುವರಿ-24 ರ ಭಾರತ ಹುಣ್ಣಿವೆ ನಿಮಿತ್ಯ ಪ್ರತಿ ವರ್ಷದ ಜಾತ್ರೆಗಳು ಜನೆವರಿ ತಿಂಗಳ…

Read More

ಕಾರ್ಮಿಕ ಇಲಾಖೆಯ ವತಿಯಿಂದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ

ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಕಾರ್ಮಿಕ ಇಲಾಖೆಯ ವತಿಯಿಂದ ಪಿಯುಸಿ ವ್ಯಾಸಂಗ ಮಾಡುತ್ತಿರುವ ಜಿಲ್ಲೆಯ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸಾಂಕೇತಿಕವಾಗಿ ಲ್ಯಾಪ್ ಟಾಪ್ ವಿತರಣೆ ಮಾಡಿ ಮಾತನಾಡಿದರು ವಿದ್ಯಾರ್ಥಿಗಳಿಗೆ ನೀಡಿದ ಲ್ಯಾಪ್ ಟಾಪ್ ಸದ್ಬಳಕೆ ಆಗಬೇಕು. ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ ಈ ಯೋಜನೆ ಜಾರಿಗೆ ತಂದಿದೆ. ಇದರ ಬಳಕೆ ಮೌಲ್ಯದಾಯಕವಾಗಿರಲಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಈ ಒಂದು ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಲ್ಲಾ…

Read More

ರಾಮನಿಗೂ ಹನುಮನಿಗೂ ಅವಿನಾಭಾವ ಸಂಬಂಧ : ಮಂಜುನಾಥ

ಕೊಪ್ಪಳ: ವಾಲ್ಮೀಕಿ ರಾಮಾಯಣದಲ್ಲಿ ಬರುವ ಎಲ್ಲಾ ಪಾತ್ರಗಳಿಗೆ ಧಾರ್ಮಿಕ, ಐತಿಹಾಸಿಕ ಪುರಾವೆಗಳಿವೆ ಅಲ್ಲಿ ರಾಮ ಮತ್ತು ಹನುಮರಿಗೆ ಇರುವ ಅನಿಭಾವ ಸಂಬಂಧ ದೃಢಪಡಿಸಲು ಅಯೋಧ್ಯೆಯಲ್ಲಿ ರಾಮ ಕೊಪ್ಪಳದಲ್ಲಿ ಹನುಮ ಒಂದೇ ಶಿಲೆಯಲ್ಲಿ ಆಗಿವೆ ಎಂದು ಶ್ರೀ ಸಹಸ್ರ ಆಂಜನೇಯ ದೇವಸ್ಥಾನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ ಅಭಿಪ್ರಾಯಪಟ್ಟರು.ನಗರದ ಗವಿಶ್ರೀ ನಗರದಲ್ಲಿರುವ ಕೇತೇಶ್ವರ ಕಲ್ಯಾಣ ಮಂಟಪದ ಹತ್ತಿರದ ಶ್ರೀ ಸಹಸ್ರಾಂಜನೇಯ ದೇವಸ್ಥಾನದಲ್ಲಿ ಅಯೋಧ್ಯೆಯ ರಾಮಮಂದಿರದ ರಾಮನ ಮೂರ್ತಿ ಮಾಡಿದ ಶಿಲೆಯ ಉಳಿದ ಭಾಗದಲ್ಲಿ ಹನುಮನ ಮೂರ್ತಿ…

Read More

ಶ್ರೀ ರಾಮನ ದಿವ್ಯಮೂರ್ತಿ ಪ್ರತಿಷ್ಠಾಪನೆ ಬ್ರಹ್ಮಕಲಶೋತ್ಸವದ ಅಂಗವಾಗಿ ಕ್ಷೀರಾಭಿಷೇಕ ಕಾರ್ಯಕ್ರಮ ಜರಗಿತು.

ಅಯೋಧ್ಯೆಯಲ್ಲಿ ನಡೆಯುತ್ತಿರುವ ಐತಿಹಾಸಿಕ ಶ್ರೀ ರಾಮನ ದಿವ್ಯಮೂರ್ತಿ ಪ್ರತಿಷ್ಠಾಪನೆ ಬ್ರಹ್ಮಕಲಶೋತ್ಸವದ ಅಂಗವಾಗಿ ರಾಮದುರ್ಗ ಪಟ್ಟಣದ ತಾಲೂಕು ಆಸ್ಪತ್ರೆ ಮುಂದೆ ಪುನೀತ್ ಫೌಂಡೇಶನ್ ಹಾಗೂ ಜನಸಾಮಾನ್ಯರ ರಕ್ಷಣಾ ಸಮಿತಿ ಹಾಗೂ ಮುಸ್ಲಿಂ ಬಾಂಧವರು ಜೊತೆಗೂಡಿ ಕ್ಷೀರಾಭಿಷೇಕ ಜೊತೆಗೆ ಸಿಹಿಯನ್ನು ಹಂಚಿ ಭಾವೈಕ್ಯತೆಯನ್ನು ಸಾರಿದರುಅಂಜುಮನ್ ಇಸ್ಲಾಂ ಕಮಿಟಿಯ ತಾಲೂಕು ಅಧ್ಯಕ್ಷ ಹಾಜಿ ಮಾತನಾಡಿ‘ಶಬರಿ ಕೊಳ್ಳ’ ಈ ಊರಿನ ಹೆಸರಿನಲ್ಲಿಯೇ ‘ರಾಮ’ನಾಮ ಇದೆ. ರಾಮನಾಮ ಇರುವ ರಾಮದುರ್ಗದಲ್ಲಿ ‘ಶಬರಿ’ಕೊಳ್ಳ ಎನ್ನುವ ಪುಣ್ಯ ಕ್ಷೇತ್ರವೂ ನೆಲೆಸಿದೆ.ರಾಮಾಯಣದಲ್ಲಿ ರಾಮ ಹಾಗೂ ಶಬರಿಯ ಕಥೆ ಎಲ್ಲರೂ…

Read More

ಆರ್ಥಿಕ ಸಂಯುಕ್ತ ತತ್ವ: 16 ನೇ ಹಣಕಾಸು ಆಯೋಗದ ಮುಂದಿರುವ ಸವಾಲುಗಳು ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮ

ಎಂ.ಎಸ್.ರಾಮಯ್ಯ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಆರ್ಥಿಕ ಸಂಯುಕ್ತ ತತ್ವ: 16 ನೇ ಹಣಕಾಸು ಆಯೋಗದ ಮುಂದಿರುವ ಸವಾಲುಗಳು ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತನಾಡಿದರು 16ನೇ ಹಣಕಾಸು ಆಯೋಗ ರಚನೆಯಾಗಿರುವ ಸಂದರ್ಭದಲ್ಲಿ ಎಂ.ಎಸ್.ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯ, ವಿತ್ತೀಯ ನೀತಿ ಸಂಸ್ಥೆ ಹಾಗೂ ಆರ್ಥಿಕ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ“ಆರ್ಥಿಕ ಸಂಯುಕ್ತ ತತ್ವ : 16 ನೇ ಹಣಕಾಸು ಆಯೋಗದ ಮುಂದಿರುವ ಸವಾಲುಗಳು” ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಅತ್ಯಂತ ಸಮಯೋಚಿತವಾಗಿದೆ….

Read More

ಮಂಜು ಕವಿದ ವಾತಾವರಣದ ಹಿನ್ನೆಲೆ ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಸಿಲಿಂಡರ್ ತುಂಬಿದ ಲಾರಿ ಪಲ್ಟಿ:

ಚಿಕ್ಕಮಗಳೂರಿನ ಕಳಸ ತಾಲೂಕಿನ ಬಾಳೆಹೊಳೆ ರಸ್ತೆಯ ಹಳುವಳ್ಳಿ ಸಮೀಪದ ಯಡ್ರಗೋಡು ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಸಿಲಿಂಡರ್ ತುಂಬಿದ ಲಾರಿ ಪಲ್ಟಿಯಾದ ಘಟನೆ ನಡೆದಿದೆಭದ್ರಾವತಿಯಿಂದ ಭರ್ತಿ ಎಲ್‌ಪಿಜಿ ಸಿಲಿಂಡರ್‌ಗಳನ್ನ ಹೊತ್ತ ಲಾರಿ ಕಳಸದಿಂದ ಬರುತ್ತಿತ್ತು. ಬೆಳಗ್ಗಿನ ಜಾವ 6:30ರ ಸುಮಾರಿಗೆ ದಟ್ಟ ಮಂಜು ಕವಿದಿದ್ದ ಹಿನ್ನೆಲೆಯಲ್ಲಿ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಲಾರಿ ಪಲ್ಟಿಯಾಗಿದೆ. ಅಪಘಾತದಲ್ಲಿ ಲಾರಿ ಚಾಲಕ ಆನಂದ್‌ಗೆ ಗಂಭೀರ ಗಾಯವಾಗಿ ಕಳಸ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿಯಲ್ಲಿ ನೂರಕ್ಕೂ…

Read More

ಡಾ.ಅಂಜಲಿ ಹೇಮಂತ್ ನಿಂಬಾಳ್ಕರ್ ಇದ್ದಲಹೊಂಡ ಗ್ರಾಮದ ರಸ್ತೆ ಪರಿಶೀಲನೆ ನಡೆಸಿದರು   

ಗರ್ಲಗುಂಜಿ ಜಿಲ್ಲಾ ಪಂಚಾಯತ್.ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯ ನಂತರ ಮಾನ್ಯ ಡಾ.ಅಂಜಲಿ ಹೇಮಂತ್ ನಿಂಬಾಳ್ಕರ್ ಇದ್ದಲಹೊಂಡ ಗ್ರಾಮದ ರಸ್ತೆ ಪರಿಶೀಲನೆ ನಡೆಸಿದ ನಂತರ, ಮಾತನಾಡಿದ ಡಾ.ಅಂಜಲಿತಾಯಿಯವರು ದಿಗಂಬರ ಪಾಟೀಲ್ ಮಾಮನೀಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದು, ನನ್ನ ಅವಧಿಯಲ್ಲಿಯೇ ರಸ್ತೆ ಮಂಜೂರಾಗಿ ಟೆಂಡರ್ ಕೂಡ ಮಾಡಲಾಗಿದೆ, ಆದರೆ ನೀತಿ ಸಂಹಿತೆಜಾರಿಯಾದ, ಕಾರಣ ಕೆಲಸ ಮಾಡಲು ಸಾಧ್ಯವಾಗಲಿಲ್ಲ, ಆದರೆ ಈಗ ಇದ್ದಲಹೊಂಡ ಗ್ರಾಮಸ್ಥರಿಗಾಗಿ ಸುಂದರವಾದ ರಸ್ತೆಯನ್ನು ಸಿದ್ಧಪಡಿಸಲಾಗಿದೆ ಎಂದರು. ‘ರಸ್ತೆಗಾಗಿ ರಾಜಿನಾಮೆ ನೀಡುವಂತೆ ಒತ್ತಾಯಿಸಿದ ಮುಖಂಡರ ಹಳ್ಳಿಯ ರಸ್ತೆ ಮಾಡಿದ್ದು…

Read More

ವಿಶ್ವಗುರು ಜಗಜ್ಯೋತಿ ಬಸವಣ್ಣನವರನ್ನು ಕರ್ನಾಟಕದ ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಕರ್ನಾಟಕ ರಾಜ್ಯ ಸರ್ಕಾರ ಘೋಷಿಸಿದ್ದರ ಹಿನ್ನೆಲೆಯಲ್ಲಿ ರಾಮದುರ್ಗ ಪಟ್ಟಣದ ಶಂಕರ ಲಿಂಗ ದೇವಸ್ಥಾನದಲ್ಲಿ ವಿಶ್ವಗುರು ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು..

ವಿಶ್ವಗುರು ಜಗಜ್ಯೋತಿ ಬಸವಣ್ಣನವರನ್ನು ಕರ್ನಾಟಕದ ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಕರ್ನಾಟಕ ರಾಜ್ಯ ಸರ್ಕಾರ ಘೋಷಿಸಿದ್ದರ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಶಂಕರ ಲಿಂಗ ದೇವಸ್ಥಾನದಲ್ಲಿ ವಿಶ್ವಗುರು ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.. ಈ ಸಂದರ್ಭದಲ್ಲಿ ಬಸವರಾಜ ಕೋನನ್ನವರ. ಮಹೇಶ್ ದೊಡಮನಿ. ಪ್ರಶಾಂತ್ ಅಂಗಡಿ. ಗಂಗಾಧರಯ್ಯ ಹಿರೇಮಠ. ನಾಗಪ್ಪ ಹಡಪದ. ಯಮನಪ್ಪ ಬಾರ್ಕಿ. ಚುರಚಪ್ಪ ಮಡ್ಡಿ ನಾಯ್ಕರ್.ಬಸವರಾಜ ಮ ನಾವಿ. ಮಂಜುನಾಥ್ ಹಡಪದ. ಬಸವರಾಜ ನಾವಿ. ಅಪ್ಪಣ್ಣ ನಾವಿ ಇನ್ನೂ ಕೆಲವರು ಈ ಕಾರ್ಯಕ್ರಮದಲ್ಲಿ…

Read More