ಚಿತ್ತಾಪುರ ಮಾಹಿತಿ ಹಕ್ಕು ಕೇಳಿದ ಪತ್ರಕರ್ತನಿಗೆ ಗ್ರಾಮ ಪಂಚಾಯತ್ ಪಿಡಿಓ ಬೆದರಿಕೆ ಹಾಕಿದ ಘಟನೆ ಚಿತ್ತಾಪುರ ತಾಲೂಕಿನ ಅಳ್ಳೋಳ್ಳಿ ಗ್ರಾಮ ಪಂಚಾಯತಿಯಿಂದ ವರದಿಯಾಗಿದೆ.
ಚಿತ್ತಾಪುರ ತಾಲೂಕು ಸಂಯುಕ್ತ ಕರ್ನಾಟಕ ಪತ್ರಕರ್ತ ನಾಗಯ್ಯ ಸ್ವಾಮಿ ಅಲ್ಲೂರ ಅವರು ಅಳ್ಳೋಳ್ಳಿ ಗ್ರಾಮ ಪಂಚಾಯತಿಯ 15 ನೇ ಹಣಕಾಸಿನ ಯೋಜನೆಯಲ್ಲಿ ಭಾರಿ ಅವವ್ಯಹಾರ ನಡೆದ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿರುವದರಿಂದ ಮಾಹಿತಿ ಆದರಿಸಿ ವರದಿ ಬರೆಯಲು ಅವರು ಮಾರ್ಚ1 ರಂದು ತಾಲೂಕಿನ ಅಳ್ಳೋಳ್ಳಿ ಗ್ರಾಮ ಪಂಚಾಯತ್ .ಕಚೇರಿಗೆ ಹೋಗಿ 15 ನೇ ಹಣಕಾಸಿನಲ್ಲಿ 2023-24 ಹಾಗೂ 2024-25 ನೇ ಸಾಲಿನಲ್ಲಿ ನಡೆದ ಕಾಮಗಾರಿಗೆ ಖರ್ಚಾದ ಅನುದಾನ ಕೈಗೊಂಡ ಕಾಮಗಾರಿಗಳ ಮಾಹಿತಿ ನೀಡಲು ಮಾಹಿತಿ ಹಕ್ಕಿನ ಅಡಿಯಲ್ಲಿ ಅರ್ಜಿ ಸಲ್ಲಿಸಲಾಗಿತು.
ಮಾರ್ಚ 5 ರಂದು ಮಧ್ಯಾಹ್ನ 1.53 ನಿಮಿಷಕ್ಕೆ 9980243927 ನಂಬರನಿಂದ ಗ್ರಾಮ ಪಂಚಾಯತ್ ಪಿಡಿಓ ದೇವಿಂದ್ರಪ್ಪ ಭಾಲ್ಕಿ ಅವರು ಪತ್ರಕರ್ತನಿಗೆ ಕರೆ ಮಾಡಿ ಬ್ಲಾಕ್ ಮೇಲ್ ಮಾಡಲು ಮಾಹಿತಿ ಹಕ್ಕು ಹಾಕಿದ್ವಿ, ನಿನ್ನನ್ನು ಪೋಲಿಸ್ ಕೇಸ್ ಮಾಡಿ ಒಳಗೆ ಹಾಕಿಸುತ್ತೆನೆ ಎಂದು ಅವರಿಗೆ ಬೆದರಿಕೆ ಹಾಕಿದ್ದಾರೆ.
ನನಗೆ ಹೈ ಬಿ.ಪಿ. ಇರುವದರಿಂದ ನಾನು ತುಂಬಾ ಭಯಗೊಂಡಿದ್ದೆ ನನ್ನ ಜೀವಕ್ಕೆ ಎನಾದರು ಹಾನಿ ಆದರೆ ಪಿಡಿಒ ಅವರೇ ಜವಾಬ್ದಾರರಾಗಿರುತ್ತಾರೆ. ಇವರ ಮೇಲೆ ಸೂಕ್ತ ಕ್ರಮ ಕೈಗೊಂಡು ಪ್ರತಿಕೆಯಲ್ಲಿ ವರದಿ ಮಾಡಲು ಮಾಹಿತಿ ಕೊಡಿಸಬೇಕು ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗೆ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕಧಿಕಾರಿಗಳಿಗೆ ಹಾಗೂ ಗ್ರಾಮೀಣ ಅಭಿವೃದ್ಧಿ ಪಂಚಾಯತ ರಾಜ್ಯ ಸಚಿವ ಪ್ರಿಯಾಂಕ್ ಖಗೇ ಅವರಿಗೆ ದೂರು ನೀಡಲಾಗಿದೆ ಎಂದು ನಾಗಯ್ಯಸ್ವಾಮಿ ಅಲ್ಲೂರ ತಿಳಿಸಿದ್ದಾರೆ.