ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ತುರನೂರು ಗ್ರಾಮದ ಹೊರವಲಯದಲ್ಲಿ ರಾಮದುರ್ಗ ಪುರಸಭೆಯ ಮಾದರಿ ಸ್ವಚ್ಛ ಘನ ತ್ಯಾಜ್ಯ ಸಂಸ್ಕರಣ ಘಟಕವಾಗಿದ್ದು ಗೋಡೆಯ ಮೇಲೆ ಚಿತ್ರಗಳ ಅಲಂಕಾರ, ಉದ್ಯಾನವನ, ಎಲ್ಲಿ ನೋಡಿದರೂ ಸಸಿಗಳ ಆಕರ್ಷಣೆ ಇವುಗಳನ್ನೆಲ್ಲ ನೋಡಿದರೆ ಇದ್ದು ಪುರಸಭೆಯ ಘನ ತ್ಯಾಜ್ಯ ಸಂಸ್ಕರಣ ಘಟಕವು ಅಥವಾ ಉದ್ಯಾನವನವು ಎಂದು ಗೊತ್ತಾಗಲಾರದು. ಅಷ್ಟು ಸ್ವಚ್ಛತೆಯಲ್ಲಿ ಘನ ತ್ಯಾಜ್ಯ ಸಂಸ್ಕರಣ ಘಟಕ ಇದೆ.

ಒಂದು ಕಾಲದಲ್ಲಿ ಈ ಪುರಸಭೆಯ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಪ್ರತಿನಿತ್ಯ ಬರುತ್ತಿದ್ದ ಘನತ್ಯಾಜ್ಯದಿಂದಾಗಿ ಅಕ್ಕಪಕ್ಕದ ಜಮೀನುಗಳಿಗೆ ಪ್ಲಾಸ್ಟಿಕ್ ಕವರುಗಳು ಸೇರಿದಂತೆ ವಿವಿಧ ವಸ್ತುಗಳು ಗಾಳಿಗೆ ಹಾರಿಕೊಂಡು ಹೋಗಿ ಬೀಳುತ್ತಿದ್ದವು. ಅಷ್ಟೇ ಅಲ್ಲದೆ ಕಸವು ರಸ್ತೆಯ ಮೇಲೆ ಬೀಳುತ್ತಿತ್ತು ಇದರಿಂದ ತುರನೂರು ಗ್ರಾಮದ ಗ್ರಾಮಸ್ಥರು ಸಾಕಷ್ಟು ಬಾರಿ ಪುರಸಭೆಗೆ ಈ ಘಣ ತ್ಯಾಜ್ಯ ಸಂಸ್ಕರಣ ಘಟಕವನ್ನು ಬೇರೆ ಕಡೆ ಸ್ಥಳಾಂತರ ಮಾಡಿ ಎಂದು ಪ್ರತಿಭಟನೆ ಕೂಡ ಮಾಡಿದ್ದಾರೆ ಆದರೆ ಇವಾಗ ಈ ಪುರಸಭೆಯ ಘನ ತ್ಯಾಜ್ಯ ಸಂಸ್ಕರಣಾ ಘಟಕವನ್ನು ನೋಡಿದರೆ ಸ್ವಚ್ಛ ಮಾದರಿ ಘನ ತ್ಯಾಜ್ಯ ಸಂಸ್ಕರಣಾ ಘಟಕವಾಗಿದೆ.

ಪುರಸಭೆಯ ಮಾದರಿ ಸ್ವಚ್ಛ ಘನ ತ್ಯಾಜ್ಯ ಸಂಸ್ಕರಣ ಘಟಕವಾಗಿದ್ದು.ಯಾವುದೇ ಸಮಸ್ಯೆಗಳಿಲ್ಲದೇ ಪ್ರತಿನಿತ್ಯವು ಪಟ್ಟಣದ ವಾರ್ಡಗಳಿಗೆ ಸ್ವಚ್ಛವಾಹಿನಿಯ ಮೂಲಕ ಹೋಗಿ ಮನೆಗಳಿಂದ ಮತ್ತು ಅಂಗಡಿಗಳಿಂದ ತ್ಯಾಜ್ಯವನ್ನು ಸಂಗ್ರಹಿಸಿಕೊಂಡು ತಂದು ನಂತರ ಸ್ವಚ್ಛ ಘನ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ತ್ಯಾಜ್ಯವನ್ನು ಹಸಿ ಕಸ, ಒಣ ಕಸವನ್ನಾಗಿ ವಿಂಗಡಿಸಿ, ನಂತರ ಒಣ ಕಸದಲ್ಲಿರುವ ಹಾಲಿನ ಕವರ್ ,ಅಡುಗೆ ಎಣ್ಣೆ ಕವರ್, ಗ್ಯಾರೇಜ್ ವೇಸ್ಟ್ ಕ್ಲಾತ್ ಇವುಗಳನ್ನೆಲ್ಲಾ ಸೂಕ್ತವಾಗಿ ವಿಂಗಡಿಸಿ ವಿಲೇವಾರಿ ಮಾಡಲಾಗುತ್ತದೆ.
ರಾಮದುರ್ಗ ಪುರಸಭೆಯ ಘನ ತ್ಯಾಜ್ಯ ಸಂಸ್ಕರಣ ಘಟಕದ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿ ಇದನ್ನು ನಿರ್ವಹಣೆ ಮಾಡುತ್ತಾ ಬಂದಿರುತ್ತಾರೆ.
ತ್ಯಾಜ್ಯ ವಿಂಗಡಣೆಯ ಕೆಲಸ ಕಾರ್ಯಗಳ ಜೊತೆಗೆ ಘಟಕದಲ್ಲಿ ಸುಂದರ ವಾತಾವರಣ ನಿರ್ಮಾಣ ಮಾಡಲು ಉದ್ಯಾನವವನ್ನು ನಿರ್ಮಿಸಲಾಗಿದೆ.

ತ್ಯಾಜ್ಯ ನಿರ್ವಹಣೆಯ ಜೊತೆಗೆ ಕೆಲವು ತ್ಯಾಜ್ಯಗಳನ್ನು ಬಳಸಿಕೊಂಡು ಅಲಂಕಾರಿಕ ವಸ್ತುಗಳ ತಯಾರಿಕೆ ಹಾಗೂ ಹಸಿ ತ್ಯಾಜ್ಯಗಳಿಂದಕೆಲವು ಜೈವಿಕ ಸಾವಯವ ರಾಸಾಯನಿಕಗಳು, ಎರೆಹುಳ ಗೊಬ್ಬರ , ಉಳಿದ ಆಹಾರ ಪದಾರ್ಥಗಳಿಂದ ಕಾಂಪೋಸ್ಟ್ ಗೊಬ್ಬರವನ್ನು ತಾವೇ ಸ್ವತಃ ಘಟಕದಲ್ಲಿ ತಯಾರಿಸಿ ಕೈತೋಟ ಉದ್ಯಾನವನಗಳಿಗೆ ಬಳಕೆ ಮಾಡುತ್ತಿರುವುದು ಕಂಡು ಬಂದಿರುತ್ತದೆ.
ಪುರಸಭೆಯ ಘನ ತ್ಯಾಜ್ಯ ಸಂಸ್ಕರಣ ಘಟಕದ ನಿರ್ಮಾಣ ಮತ್ತು ಕೆಲಸಕಾರ್ಯಗಳ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಉತ್ತಮನಿರ್ವಹಣೆಯಿಂದ ರಾಮದುರ್ಗ ಪುರಸಭೆಯ ಘನ ತ್ಯಾಜ್ಯ ಸಂಸ್ಕರಣ ಘಟಕವು ಬೆಳಗಾವಿ ಜಿಲ್ಲೆಯಲ್ಲಿಯೇ ಒಂದು ಮಾದರಿ ಘನ ತ್ಯಾಜ್ಯ ನಿರ್ವಹಣಾ ಸ್ವಚ್ಛ ಸಂಸ್ಕರಣ ಘಟಕವಾಗಿ ಹೊರಹೊಮ್ಮಿದೆ.
ಈ ಘನ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ 8 ಸಿಸಿ ಟಿವಿ ಕ್ಯಾಮೆರಾ ಗಳನ್ನು ಅಳವಡಿಸಲಾಗಿದೆ