ಶಿಡ್ಲಘಟ್ಟ: ಭೂಪರಿವರ್ತಿತ ಜಮೀನಿಗೆ ಪ್ಲಾನ್ ಮಾಡಿಕೊಡಲು ವ್ಯಕ್ತಿಯೊಬ್ಬರಿಂದ ತಾಲೂಕು ಪಂಚಾಯತ್ ಇಒ ಒಬ್ಬರು ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕು ಪಂಚಾಯತ್ ನಲ್ಲಿ ನಡೆದಿದೆ.

ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿ ಘಟ್ಟಮಾರನಹಳ್ಳಿ ಗ್ರಾಮದ 39 ಗುಂಟೆ ಭೂಪರಿವರ್ತಿತ ಜಮೀನಿಗೆ ಪ್ಲಾನ್ ಮಾಡಿಕೊಡಲು ನಂಜೇಗೌಡ ಎಂಬುವರಿಂದ ಎರಡು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಅದರಂತೆ ಇಂದು ಒಂದೂವರೆ ಲಕ್ಷ ಹಣ ನೀಡಲು ಮಾತುಕತೆ ನಡೆದಿತ್ತು ಅದರಂತೆ ನಂಜೇಗೌಡ ಅವರು ಮುನಿರಾಜು ಅವರ ಕಚೇರಿಯಲ್ಲಿ ಹಣ ನೀಡುವ ವೇಳೆ ಲೋಕಾಯುಕ್ತ ಅಧಿಕಾರಿ ಮೋಹನ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಡಿ ವೈ.ಎಸ್ಪಿ, ವಿರೇಂದ್ರ ಕುಮಾರ್, ಲೋಕಾಯುಕ್ತ ಚಿಕ್ಕಬಳ್ಳಾಪುರ ಶಿವಪ್ರಸಾದ್, ಇನ್ಸ್ ಪೆಕ್ಟರ್ ಮೋಹನ್, ಸಿಬ್ಬಂದಿ ಸಂತೋಷ್, ಸತೀಶ್, ನಾಗರಾಜ್, ಲಿಂಗರಾಜ್, ಗುರು, ಚೌಡರೆಡ್ಡಿ, ಪ್ರಕಾಶ್, ಇನ್ನು ಮುಂತಾದವರು ಹಾಜರಿದ್ದರು.