
ಬೀದರ್ ಕ್ಷೇತ್ರದ ಅತಿ ಕಿರಿಯ ಹಾಗೂ ಹಿರಿಯ ಸಂಸದರು..!
ಬೀದರ್: ಬೀದರ್ ಲೋಕಸಭಾ ಕ್ಷೇತ್ರ ರಚನೆಯಾದ ಬಳಿಕ ನಡೆದ ಬಹುತೇಕ ಚುನಾವಣೆಗಳು ವಿಶಿಷ್ಟ ದಾಖಲೆಗಳಿಗೆ ಸಾಕ್ಷಿಯಾಗಿವೆ. ಐತಿಹಾಸಿಕವಾಗಿ ಪರಂಪರೆ, ಬಿದರಿ ನಗರ ಎಂದು ರಾಷ್ಟ್ರಮಟ್ಟದಲ್ಲಿ ಖ್ಯಾತಿ ಹೊಂದಿರುವ ಬೀದರ್, ರಾಜಕೀಯವಾಗಿಯೂ ವಿಶಿಷ್ಟವಾಗಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡು ಛಾಪು ಮೂಡಿಸಿದೆ. ಹೊಸ ಚಿಗುರು, ಹಳೆ ಬೇರು ಎಂಬಂತೆ ಹಿರಿಯ, ಕಿರಿಯ ವಯಸ್ಸಿನ ಸಂಸದರು ಬೀದರ್ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಸಂಸತ್ತು ಪ್ರವೇಶಿಸಿದ್ದು ಸೇರಿದಂತೆ ಲೋಕಸಭಾ ಕ್ಷೇತ್ರ ಹಲವು ಮೊದಲುಗಳಿಗೆ ಹೆಸರುವಾಸಿಯಾಗಿದೆ..! ಕ್ಷೇತ್ರದ ಪ್ರಥಮ ಸಂಸದ ಮುಸ್ಲಿಂ 1952ರಲ್ಲಿ ದೇಶದಲ್ಲಿ…