
ಕಚೇರಿಯಲ್ಲಿ ಹಿರಿಯ ವ್ಯಕ್ತಿಯನ್ನು ಗಂಟೆಗಟ್ಟಲೆ ಕಾಯಿಸಿದ ಸರ್ಕಾರಿ ನೌಕರರಿಗೆ ವಿಶಿಷ್ಟ ಶಿಕ್ಷೆ ನೀಡಿದ ಸಿಇಒ
ಸರ್ಕಾರಿ ನೌಕರರು ಕಛೇರಿಯಲ್ಲಿ ಜನರನ್ನು ಅಲೆದಾಡಿಸುವುದು, ಕಾಯುವಂತೆ ಮಾಡಿಸುವುದು ಹೊಸದೇನು ಅಲ್ಲ ಬಿಡಿ. ಹೆಚ್ಚಿನ ಕಡೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಇಲ್ಲೊಂದು ಕಡೆ ಇದೇ ರೀತಿಯ ಘಟನೆ ನಡೆದಿದ್ದು, ಸರ್ಕಾರಿ ಕಛೇರಿಯ ನೌಕರರು ಹಿರಿಯ ವ್ಯಕ್ತಿಯೊಬ್ಬರಿಗೆ ಸರಿಯಾದ ಸೇವೆಯನ್ನು ನೀಡದೆ ಅವರನ್ನು ಗಂಟೆಗಟ್ಟಲೆ ಕಾಯುವಂತೆ ಮಾಡಿದ್ದಾರೆ. ನೌಕರರ ಈ ವರ್ತನೆಯಿಂದ ಗರಂ ಆದ ಸಿಇಒ ನೀವು ಕೂಡಾ ಹೀಗೆಯೇ ನಿಂತ್ಕೊಂಡೇ ಕೆಲಸ ಮಾಡಿ ಎಂದು ಅವರಿಗೆ ಶಿಕ್ಷೆಯ ನೀಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ….