ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸಮಗ್ರ ಕನ್ನಡಿಗರ ಜಯಕ್ಕಾಗಿ ಕನ್ನಡಿಗರ ಹಿತಕ್ಕಾಗಿ ಕೋಲಾರದಲ್ಲಿ ಈಡುಗಾಯಿ ಹೊಡೆದ ಕನ್ನಡಪರ ಸಂಘಟನೆಗಳ ಮುಖಂಡರು..!

WhatsApp Group Join Now

ಕೋಲಾರ: ರಾಜ್ಯದ ಸಮಗ್ರ ಅಭಿವೃದ್ಧಿ ಹಾಗೂ ಕನ್ನಡಿಗರ ಹಿತಕ್ಕಾಗಿ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷರಾದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಈಡುಗಾಯಿ ಒಡೆಯುವ ಚುಳುವಳಿ ಪ್ರಯುಕ್ತ ನಗರದ ಕೋಲಾರಮ್ಮ ದೇವಾಲಯದಲ್ಲಿ ಈಡುಗಾಯಿ ಒಡೆದು ಕನ್ನಡಿಗರ ಜಯಕ್ಕಾಗಿ ಒತ್ತಾಯಿಸಲಾಯಿತು.

ಕನ್ನಡ ಸೇನೆ ಜಿಲ್ಲಾಧ್ಯಕ್ಷ ಕನ್ನಡಮಿತ್ರ ವೆಂಕಟಪ್ಪ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಮುಖಂಡರು ಕೋಲಾರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಈಡುಗಾಯಿ ಹೊಡೆದು ಚಳುವಳಿ ಪ್ರಾರಂಭಿಸಿದರು. ಕನ್ನಡಮಿತ್ರ ವೆಂಕಟಪ್ಪ ಮಾತನಾಡಿ ಅಖಂಡ ಕರ್ನಾಟಕದ ಕನ್ನಡಿಗರ ಸಮಗ್ರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕನ್ನಡ ಚಳುವಳಿ ವಾಟಾಳ್ ಪಕ್ಷ ಆಧ್ಯಕ್ಷರಾದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳಿಂದ ರಾಜ್ಯಾದ್ಯಂತ ಎರಡು ಕೋಟಿ ಈಡುಗಾಯಿ ಹೊಡೆಯುವ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ.

ಕೋಲಾರಮ್ಮ ದೇವಾಲಯದಲ್ಲಿ ಕನ್ನಡ ಪರ ಸಂಘಟನೆಗಳ ಮುಖಂಡರಿಂದ ಸಮಗ್ರ ಕನ್ನಡಿಗರ ಹಿತಕ್ಕಾಗಿ ಈಡುಗಾಯಿ ಹೊಡೆದು ಚಳುವಳಿಗೆ ಚಾಲನೆ ನೀಡಲಾಗಿದೆ. ಈಡುಗಾಯಿ ಚಳುವಳಿಯ ಮುಖ್ಯ ಉದ್ದೇಶ ಕನ್ನಡ ನಾಡಿನ ಅಭಿವೃದ್ಧಿ, ಮಹಾದಾಯಿ ಯೋಜನೆ, ಕಳಸಾ ಬಂಡೂರಿ, ಮೇಕೆದಾಟು ಯೋಜನೆ, ಉದ್ಯೋಗ, ಗ್ರೇಟರ್ ಬೆಂಗಳೂರು, ಸಮಗ್ರ ಕರ್ನಾಟಕದ ಅಭಿವೃದ್ಧಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಇಡೀ ರಾಜ್ಯ ಈಡುಗಾಯಿ ಚಳುವಳಿ ಮೂಲಕ ಒತ್ತಾಯ ಮಾಡಲಾಗುವುದು. ಇನ್ನೂ ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನವಾಗಬೇಕಿದೆ, ಜಿಲ್ಲೆ ಗಡಿಭಾಗದಲ್ಲಿ ಇರುವುದರಿಂದ ಸರ್ಕಾರ ಜಿಲ್ಲೆಗೆ ಅತಿಹೆಚ್ಚು ಅನುದಾನ ನೀಡಿ ಗಡಿಭಾಗದ ಅಭಿವೃದ್ಧಿಗೆ ನೂತನ ಯೋಜನೆಗಳನ್ನು ಜಾರಿ ಮಾಡಬೇಕು. ಕರ್ನಾಟಕದಲ್ಲಿ ಪರಭಾಷಿಕರ ಹಾವಳಿ ಮೀತಿಮೀರಿದ್ದು ಕಡಿವಾಣ ಹಾಕಬೇಕಿದೆ.

ಯಾವುದೇ ಕಂಪನಿ ಹಾಗೂ ಸಂಸ್ಥೆಗಳು ಅಗಲಿ ಮೊದಲ ಕನ್ನಡಿಗರಿಗೆ ಉದ್ಯೋಗ ಪ್ರಾಶಸ್ತ್ಯ ನೀಡಬೇಕು ಎಂದು ಒತ್ತಾಯಿಸಿದರು. ‌ಈ ಸಂಧರ್ಭದಲ್ಲಿ ಜಿಲ್ಲಾ ಕನ್ನಡಪರ ಸಂಘಟನೆಗಳ ಒಕ್ಕೂಟದ ಆಧ್ಯಕ್ಷ ಅ.ಕೃ ಸೋಮಶೇಖರ್,ಗೌರವ ಅಧ್ಯಕ್ಷರಾದ ಪಿ ನಾರಾಯಣಪ್ಪ,ಶಾಶ್ವತ ನೀರಾವರಿ ಹೋರಾಟ ಸಮಿತಿ ವಿ.ಕೆ.ರಾಜೇಶ್, ಕರವೇ ಪ್ರವೀಣ್ ಶೆಟ್ಟಿ ಬಳಗದ ಜಿಲ್ಲಾಧ್ಯಕ್ಷ ಚಂಬೆ ರಾಜೇಶ್, ಭುವನೇಶ್ವರಿ ಸಂಘದ ಜಿಲ್ಲಾಧ್ಯಕ್ಷ ಕೆ.ಆರ್ ತ್ಯಾಗರಾಜ್, ಕನ್ನಡ ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಪಿಎಂಸಿ ಪುಟ್ಟರಾಜು, ಕನ್ನಡ ಸೇನೆ ಮುಖಂಡರಾದ ಆರ್ ವಿಜಯಕುಮಾರ್, ಶೇಷಗಿರಿ ನಾಯಕ್,ಸೋಮಶೇಖರ್, ತಾಲ್ಲೂಕು ಆಧ್ಯಕ್ಷ ಶಿವಚಂದ್ರಯ್ಯ, ತಾಲ್ಲೂಕು ಕಾರ್ಯದರ್ಶಿ ಎನ್.ಎಮ್ ಮಧು ಲಕ್ಷ್ಮಣ, ನರಸಾಪುರ ಹೋಬಳಿ ಆಧ್ಯಕ್ಷ ಚಳ್ಳಳ್ಳಿ ಎಂ.ನಾಗರಾಜ್, ಕರವೇ ಪ್ರವೀಣ್ ಶೆಟ್ಟಿ ಬಳಗದ ಮಹಿಳಾ ಘಟಕದ ಆಧ್ಯಕ್ಷೇ ಮಂಜುಳು, ಶಿಕ್ಷಕರಾದ ಯಲ್ಲಪ್ಪ, ಸೊಣ್ಣೆನಹಳ್ಳಿ ಶ್ರೀನಿವಾಸ್, ಕನ್ನಡ ಸೇನೆ ವಿಶ್ವನಾಥ್,ಮಂಜುಳವೆಂಕಟಪ್ಪ, ಉಮಾಶೇಷಗಿರಿ,ಮಮತ ಸೇರಿದಂತೆ ಇತರರು ಹಾಜರಿದ್ದರು.

About The Author